ಪಕ್ಷಿಗಳ ಗೂಡು ವೈವಿಧ್ಯಮಯ. ಕೆಲವು ಪಕ್ಷಿಗಳು ಸುಂದರವಾದ ಅಚ್ಚುಕಟ್ಟಾದ ಭದ್ರವಾದ ನೆಲೆ ಕಂಡುಕೊಂಡರೆ ಇನ್ನು ಕೆಲವು ಪಕ್ಷಿಗಳು ಮರದ ಮೇಲಿನ ರೆಂಬೆಗಳ ಮೇಲೆ, ಕಸ ಕಡ್ಡಿ, ಮುಳ್ಳುಗಳಿಂದ ಗೂಡು ಕಟ್ಟಿಕೊಳ್ಳುತ್ತವೆ. ಕೆಲವು ಪಕ್ಷಿಗಳು ಗೂಡು ಕಟ್ಟುವುದೇ ಇಲ್ಲ. ಪಕ್ಷಿಗಳು ಸಾಮಾನ್ಯವಾಗಿ ಗೂಡು ಕಟ್ಟುವುದು ಸಂತಾನೋತ್ಪತ್ತಿ ಸಂದರ್ಭದಲ್ಲಿ.

ಹೀಗೆ ಸಂತಾನೋತ್ಪತ್ತಿಯಲ್ಲಿ ತೊಡಗಿದ ಅಪ ರೂಪದ ಓವನ್ ಪಕ್ಷಿಗಳು ಗೂಡನ್ನು ಮಣ್ಣಿನಿಂದ ಕಟ್ಟುವುದು ಅತ್ಯಂತ ವಿಶೇಷವಾಗಿದೆ. ಇದು ನೋಡಲು ಸಿಗುವುದ ಬಲು ಅಪರೂಪ. ಇಂತಹ ಒಂದು ವಿಚಿತ್ರ ಗೂಡನ್ನು ಕಟ್ಟುವುದನ್ನು ಛಾಯಾಚಿತ್ರದ ಮೂಲಕ ವಿವಿಧ ಭಂಗಿಗಳಲ್ಲಿ ಸೆರೆಹಿಡಿಯಲಾಗಿದೆ.

ಇದು ಸಾಧ್ಯವಾಗಿದ್ದು ಇಲ್ಲಿಗೆ ಸಮೀಪದ ಕಣವಿಸಿದ್ಗೇರಿ ಗ್ರಾಮದಲ್ಲಿ. ಗ್ರಾಮದ ಬೆಟ್ಟದ ಅಂಚಿನಲ್ಲಿ ಸದಾ ಹಸಿರಿನಿಂದ ಕಂಗೊಳಿಸುವ ಪ್ರದೇಶವಾಗಿದೆ. ದೇವಸ್ಥಾನದ ಎರಡೂ ಬದಿಗೂ ಬೆಟ್ಟಗಳ ಸಾಲು ಇದೆ. ಇಲ್ಲಿ ಅನೇಕ ವಿಚಿತ್ರ ಪಕ್ಷಿಗಳ ಜಾಲವೇ ಇದೆ. ಬೆಟ್ಟದಿಂದ 1 ಕಿಮೀ. ದೂರವಿರುವ ಶಾಲಾ ಕಟ್ಟಡದ ಹೊರ ಭಾಗದ ಗೋಡೆಯ ಮೇಲೆ ಈ ವಿಚಿತ್ರ ಪಕ್ಷಿ ಓವನ್ ಮಣ್ಣಿನಿಂದ ಗೂಡು ಕಟ್ಟಿದೆ.

ಗುಬ್ಬಿಗಳ ಜಾತಿಗೆ ಸೇರಿದ ಓವನ್ ನೋಡಲು ಸಾಮಾನ್ಯ ಗುಬ್ಬಿಗಿಂತ ಎರಡು ಪಟ್ಟು ದೊಡ್ಡದಿ ರುತ್ತದೆ. ಕಂದು ಬಣ್ಣದಿಂದ ಕೂಡಿದ್ದು ಬಹಳಷ್ಟು ವೇಗವಾಗಿ ಹಾರುತ್ತವೆ. ಓವನ್ ಪಕ್ಷಿಗಳು ಸಾಮಾನ್ಯವಾಗಿ ಗಂಡು-ಹೆಣ್ಣು ಜೊತೆಯಾಗಿವೇ ಇರುತ್ತವೆ. ತನ್ನ ಜೀವನದಲ್ಲಿ ಜೊತೆಗಾರನನ್ನು ಬದಲಾಯಿಸುವುದಿಲ್ಲ. ಸದಾಕಾಲ ಚಟುಟಿಕೆಯಿಂದ ಕಾರ್ಯ ಮಾಡುತ್ತಾ, ಒಟ್ಟಿಗೆ ಜೀವಿಸುತ್ತವೆ. ಹೀಗೆ ಜೀವಿಸುವ ಈ ಪಕ್ಷಿಗಳು ಸಂತಾನೋತ್ಪತ್ತಿ ಸಂದರ್ಭ ದಲ್ಲಿ ಗೂಡನ್ನು ಕಟ್ಟುವುದು ವಿಶಿಷ್ಟವಾಗಿ. ಇವುಗಳು ಆಯ್ಕೆ ಮಾಡಿಕೊಳ್ಳುವ ಸ್ಥಳ ವಿಚಿತ್ರವಾಗಿದೆ. ಯಾರಿಗೂ ಎಟುಕದಂತೆ, ನೆರಳಿನ, ಮಳೆಗೆ ತಾಗದಂತೆ ಗೂಡು ಕಟ್ಟುತ್ತವೆ. ಗೋಡೆಯ ಮೇಲೆ ಗೂಡು ಕಟ್ಟುವ ರೀತಿ ಅಚ್ಚರಿ ತರುತ್ತದೆ.

ಹಸಿ ಮಣ್ಣು ಸಿಗುವ ಸ್ಥಳ ಆಯ್ಕೆ ಮಾಡಿಕೊಂಡ ನಂತರ ಮಣ್ಣಿನ ಸಂಗ್ರಹದಲ್ಲಿ ತೊಡಗುತ್ತದೆ. ಗಂಡು-ಹೆಣ್ಣು ಎರಡೂ ಪಕ್ಷಿಗಳು ಗೂಡಿನ ರಚನೆಯಲ್ಲಿ ಭಾಗಿಯಾಗುತ್ತವೆ. ತಮ್ಮ ಚಿಕ್ಕದಾದ ಕೊಕ್ಕಿನಲ್ಲಿ ಹಸಿ ಮಣ್ಣನ್ನು ತಂದು ಗೋಡೆಯ ಮೇಲೆ ಅಂಟಿಸಲು ಪ್ರಯತ್ನ ಮಾಡುತ್ತವೆ.

ಹೀಗೆ ಒಮ್ಮೆ ಗೋಡೆಗೆ ಮಣ್ಣು ಮೆತ್ತಿತೆಂದರೆ ಸಾಕು ಗೂಡು ರಚನೆ ಕ್ರಿಯೆ ಸರಾಗವಾಗಿ ನಡೆಯುತ್ತದೆ. ನಂತರ ಒಂದೇ ಒಂದು ಕ್ಷಣ ಸುಮ್ಮನೆ ಕುಳಿತುಕೊಳ್ಳದ ಪಕ್ಷಿಗಳು ಮಣ್ಣನ್ನು ತಂದು ಗೂಡನ್ನು ಬೆಳೆಸುತ್ತಾ ಹೋಗುತ್ತವೆ. ಗೂಡು ತ್ರಿಕೋನಾಕಾರದಲ್ಲಿ ಬಂದು ನೆಲೆಗೊಳ್ಳುತ್ತದೆ. ಕೆಳ ಭಾಗ ಚಿಕ್ಕದಾಗಿದ್ದು ಮೇಲ್ಭಾಗ ಪಕ್ಷಿಗಳು ಪ್ರವೇಶಿಸುವಷ್ಟು ದೊಡ್ಡದಾಗಿರುತ್ತದೆ. ನೋಡಲು ಜೇನುಗೂಡನ್ನು ಹೋಲುತ್ತದೆ.

ಮಣ್ಣಿನ ಪ್ರಕ್ರಿಯೆ ಮುಗಿದ ನಂತರ ಮೆತ್ತನೆಯ ಹುಲ್ಲನ್ನು ತಂದು ಒಳ ಭಾಗವನ್ನು ಸಿದ್ದಗೊಳಿಸುತ್ತವೆ. ನಂತರ ಮೊಟ್ಟೆ ಇಡುವ ಕ್ರಿಯೆ. ಸಾಮಾನ್ಯವಾಗಿ ಈ ಓವನ್ ಪಕ್ಷಿಗಳು 3 ರಿಂದ 5 ತತ್ತಿಗಳನ್ನು ಇಡುತ್ತವೆ. ಕೇವಲ 20 ದಿನದಲ್ಲಿ ಕಾವು ಕೊಡುವ ಪ್ರಕ್ರಿಯೆ ಮುಗಿಯುತ್ತದೆ. ನಂತರ ಮರಿಗಳು ಹೊರ ಬಂದ ಮೇಲೆ 3 ತಿಂಗಳು ಲಾಲನೆ-ಪಾಲನೆ ಮಾಡುತ್ತವೆ. ಹೀಗೆ 3 ತಿಂಗಳಲ್ಲಿ ಮರಿ ಓವನ್ ಹಾರುವ ಶಕ್ತಿ ಪಡೆದು ಹೊರ ಜಗತ್ತನ್ನು ಪ್ರವೇಶಿಸುತ್ತದೆ.

ಈಗ ಕಣವಿಸಿದ್ಗೇರಿಯಲ್ಲಿ ಇರುವ ಈ ಗೂಡು ರಕ್ಷಣಾ ಸ್ಥಳದಲ್ಲಿದ್ದರೂ ಕಿಡಿಗೇಡಿಗಳ ಕಾಟದಿಂದ ಮುಕ್ತವಾಗಬೇಕಾಗಿದೆ. ಇಲ್ಲದಿದ್ದರೆ ಅಪರೂಪದ ಈ ಪಕ್ಷಿಗಳ ಸಂತತಿ ನಾಶವಾಗುತ್ತದೆ. ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೊಲಿವಿಯಾ ಮತ್ತು ಭಾರತದಲ್ಲಿ ಕಂಡು ಬರುವ ಈ ಅಪರೂಪದ ಓವನ್ ಈಗ ನಮ್ಮೂರಿಗೆ ಬಂದಿರುವುದು ಸಂತಸದ ಸಂಗತಿಯಾಗಿದೆ. ಸಾಮಾನ್ಯ ವಾಗಿ ಕಾಡುಗಳಲ್ಲಿ ಕಂಡು ಓವನ್ ಗ್ರಾಮಕ್ಕೆ ಬಂದು ಗೂಡು ಕಟ್ಟಿರುವುದು ಅಚ್ಚರಿಯ ಸಂಗತಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.