ಹಾವೇರಿ: ದೇಶದ ನಿಜವಾದ ಶಕ್ತಿ ಇರುವುದು ಗ್ರಾಮೀಣ ಪ್ರದೇಶಗಳಲ್ಲಿ. ಅಲ್ಲಿ ಹೆಚ್ಚಿನ ಪ್ರಮಾಣದ ಮತದಾನ ಆದಾಗ ಮಾತ್ರ ದೇಶದ ಪ್ರಜಾ ಪ್ರಭುತ್ವಕ್ಕೆ ಹೆಚ್ಚಿನ ಬೆಲೆ ಬರಲಿ ಎಂದು ಸಾಕ್ಷರ ಭಾರತ ಜಿಲ್ಲಾ ಸಂಯೋಜಕರಾದ ಎಲ್.ಯು. ನಾಯ್ಕರ್ ತಿಳಿಸಿದರು.

ಜಿಲ್ಲೆಯ ಸವಣೂರು ಹಾಗೂ ಹತ್ತಿಮತ್ತೂರ ಗ್ರಾಮ ಪಂಚಾಯಿತಿ ಲೋಕ ಶಿಕ್ಷಣ ಸಮಿತಿ ಆಶ್ರಯದಲ್ಲಿ ಹತ್ತಿಮತ್ತೂರಲ್ಲಿ ನಡೆದ ಮತದಾನ ಜಾಗೃತಿ ಕುರಿತ ಮಾನವ ಸರಪಳಿ ಹಾಗೂ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರು ಮತದಾನ ದಿನದಂದು ತಪ್ಪದೇ ಮತಗಟ್ಟೆಗೆ ಬಂದು ಮತದಾನ ಮಾಡಬೇಕು. ಪ್ರತಿಯೊಬ್ಬ ನಾಗರಿಕನ ಮತ ನಾಡಿನ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕೆಲಸ ಮಾಡಲಿದೆ ಎಂದರು.

ಸವಣೂರು ತಾಲ್ಲೂಕಿನಾದ್ಯಂತ ಸಾಕ್ಷರತಾ ಪ್ರೇರಕರು ಹಾಗೂ ಸ್ವಯಂ-ಸೇವಕರು ಮತದಾರರ ಜಾಗೃತಿ ಸಭೆ, ಜಾಥಾ, ಹಾಡು, ಬೀದಿ ನಾಟಕಗಳನ್ನು ನೇರವೇರಿಸಿಕೊಡಬೇಕೆಂದು ತಾಲ್ಲೂಕು ಸಂಯೋಜಕ ಎಚ್.ಎಫ್.ದ್ಯಾವನಗೌಡ್ರ ತಿಳಿಸಿದರು.

ಮಾನವ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿಜಗುಣ ಶಿವಯೋಗಿ ಸ್ವಾಮೀಜಿ ಮಾತನಾಡಿ, ಮತದಾನದ ಸರಪಳಿ ಗಟ್ಟಿಯಾಗಿದ್ದರೆ ಪ್ರಜಾಭುತ್ವದ ಸೌಧ ಬಿಗಿಯಾಗಿ ನಿಲ್ಲಲು ಸಾಧ್ಯ ಎಂದು ಹೇಳಿದರು.

ನಿಷ್ಪಕ್ಷಪಾತವಾಗಿ ಸಮಾಜದ ಎಲ್ಲ ಸಂಘ-ಸಂಸ್ಥೆಗಳು ಮತದಾರರ ಜಾಗೃತಿ ಹಾಗೂ ಮತದಾನದ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಶ್ರಮಿಸಬೇಕು ಹಾಗೂ ಚುನಾವಣಾ ಆಯೋಗದ ಸ್ವೀಪ್ ಕಾರ್ಯಕ್ರಮ ಉತ್ತಮವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾ ಯಿತಿ ಕಾರ್ಯದರ್ಶಿ ಜಗದೀಶ ವಡಕಮ್ಮನವರ, ಮಹಿಳಾ ಮಂಡಳದ ಅಧ್ಯಕ್ಷೆ ಸುವರ್ಣಾ ಪಟ್ಟಣಶಟ್ಟಿ, ಅಕ್ಕಮ್ಮ ಬಳಿಗಾರ, ಪ್ರೇರಕಿ ಶಿಲ್ಪಾ ನೆಗಳೂರು ಮುಂತಾದವರು ಉಪಸ್ಥಿತರಿದ್ದರು.

ಜಾಗೃತಿ ಸಭೆಯ ನಂತರ ಏರ್ಪ ಡಿಸಲಾದ ಮತದಾರರ ಒಗ್ಗಟ್ಟು ಪ್ರದರ್ಶಿಸುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪ್ರೇರಕರು, ಸ್ವಯಂ-ಸೇವಕರು, ಸ್ತ್ರೀ-ಶಕ್ತಿ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಪಂಚಾಯತ ಸಿಬ್ಬಂದಿವರ್ಗ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಶಿಕ್ಷಕ ಚಂದ್ರಶೇಖರ ಕುಳೇನೂರ ನಿರೂಪಿಸಿದರು. ಗಿರೀಶ ಪಾಟೀಲ ವಂದಿಸಿದರು.

ಮತದಾನ ತಿಳಿವಳಿಕೆ
ಬ್ಯಾಡಗಿ: ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ದೇಶದಲ್ಲಿ ಲೋಕಸಭೆಗೆ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿರುವುದರಿಂದ ಪ್ರತಿಯೊಬ್ಬ ಮತದಾರ ತಮ್ಮ ಹಕ್ಕುಗಳನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂದು ತಹಶೀಲ್ದಾರ್ ಶಿವಶಂಕರ ನಾಯಕ ಹೇಳಿದರು.
ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಈಚೆಗೆ ಏರ್ಪಡಿಸಿದ್ದ ‘ಮತದಾರರ ಜನಜಾಗೃತಿ‘ ಶಿಬಿರ‘ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮತದಾರರು ಮತ ಚಲಾಯಿಸಲು ನಿರ್ಲಕ್ಷ್ಯ ತೋರುತ್ತಿರುವುದರಿಂದ ಜನಾಭಿಪ್ರಾಯಕ್ಕೆ ಮನ್ನಣೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿ ಮಾಡಿದರು.

ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಸ್.ಆರ್.ಪಾಟೀಲ ಮಾತನಾಡಿ, ತಾಲ್ಲೂಕಿನ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮದಲ್ಲಿರುವ ಪ್ರತಿಯೊಬ್ಬ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಿಡಿಪಿಒ ಶಿರೋಳಕರ, ಅಂಗನವಾಡಿ ಮೇಲ್ವಿಚಾರಕಿ ಸುಮಂಗಲಾ ಹುಲ್ಮನಿ, ಮಂಜುಳಾ ಮಣ್ಣನವರ, ಸುಶೀಲ ಕುರುಡ ಮ್ಮನವರ, ಅನ್ನಪೂರ್ನಾ ಕಟ್ಟೆಪ್ಪನವರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಜಾಗೃತಿ ಜಾಥಾ
ರಾಣೆಬೆನ್ನೂರು: ನಗರದಲ್ಲಿ ನಗರಸಭೆ, ತಾಲ್ಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಮಂಗಳವಾರ ಪ್ರಾಥಮಿಕ ಮತ್ತು ಪ್ರೌಢ ಶಾಲಾ ದೈಹಿಕ ಶಿಕ್ಷಕರು ಕಡ್ಡಾಯ ಮತದಾನದ ಕುರಿತು ಜಾಥಾ ಮೂಲಕ ನಗರದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ತಾ.ಪಂ. ಕಚೇರಿಯಿಂದ ಪ್ರಾರಂಭವಾದ ಮತದಾನದ ಜಾಗೃತಿ ಜಾಥಾ ಎಂ.ಜಿ. ರಸ್ತೆ, ಅಂಚೆ ಕಚೇರಿ ವೃತ್ತ, ಟಾಂಗಾ ಕೂಟ, ಪಿ.ಬಿ.ರಸ್ತೆ, ಬಸ್ ನಿಲ್ದಾಣ ರಸ್ತೆ ಮೂಲಕ ಹಾಯ್ದು ಕೋರ್ಟ್ ವೃತ್ತಕ್ಕೆ ತಲುಪಿತು. ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ಶಿಕ್ಷಕರು ಮಾನವ ಸರಪಳಿ ನಿರ್ಮಿಸಿ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೇಶವಮೂರ್ತಿ ಅವರು ಮಾತನಾಡಿ, ನಿಮ್ಮ ಮತ ಅಮೂಲ್ಯವಾದದ್. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಬೇಕು ಎಂದು ಕರೆ ನೀಡಿದರು.

ಜಾಥಾದಲ್ಲಿ ದೈಹಿಕ ಶಿಕ್ಷಕರು ಮತದಾನದ ಬಗ್ಗೆ ಘೋಷಣೆ ಕೂಗಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಲಕ್ಷ್ಮಣ ಮತ್ತು ನಗರಸಭೆ ಪೌರಾಯುಕ್ತೆ ಅಶ್ವಿನಿ ಬಿ.ಎಂ ಮಾತನಾಡಿದರು.

ನಗರಸಭೆ ಎಂಜಿನಿಯರ್ ಬಿ.ಎಸ್.ಪಾಟೀಲ, ದೈಹಿಕ ಶಿಕ್ಷಣಾಧಿಕಾರಿ ಎ.ಬಿ.ಚಂದ್ರಶೇಖರ, ರವಿ ದೊಡ್ಡಣ್ಣನವರ, ಜಗದೀಶ ಹುಗ್ಗಿ, ಎಸ್.ಆರ್. ನಾಯಕ, ಸುಧಾ ಹಂಸಾಗರ, ರೂಪಾ ಕಡೂರು, ಲಮಾಣಿ, ಎಂ.ಎಸ್.ಗಾಣಿಗೇರ, ಕೇಶವ ಬಾರ್ಕಿ, ಕೆ.ಟಿ.ಮಕರಿ, ಜೋಶಿ, ಕೊರಚರ, ಸಾಲೀಮಠ, ಡಮ್ಮಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಸ್ವೀಪ್ ಸಮಿತಿ ಸಭೆ
ಹಾನಗಲ್: ಮತದಾನ ಜಾಗೃತಿ ಮೂಡಿಸುವ ಮೂಲಕ ಮತದಾನದ ಪ್ರಮಾಣ ಅಧಿಕಗೊಳಿಸುವ ಮತ್ತು ಚುನಾವಣಾ ಪ್ರಕ್ರಿಯೆಗಾಗಿ ನೇಮಕಗೊಂಡ ಅಧಿಕಾರಿಗಳು ವಹಿಸಿರುವ ಜವಾಬ್ದಾರಿ ನಿರ್ವಹಿಸುವ ಕುರಿತು ತಾಲ್ಲೂಕು ಸ್ವೀಪ್ ಸಮಿತಿ ಸಭೆಯು ಮಂಗಳವಾರ ಇಲ್ಲಿನ ಸಾಮರ್ಥ್ಯಸೌಧದಲ್ಲಿ ನಡೆಯಿತು.

ಜಿಲ್ಲಾ ಸ್ವೀಪ್ ಮುಖ್ಯಸ್ಥ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ.ಆಂಜನೆಯಪ್ಪ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿತ್ತು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅ ಪ್ರಮಾಣವನ್ನು ಮತ್ತಷ್ಟು ಸುಧಾರಿಸಬೇಕಿದೆ. ಇದಕ್ಕಾಗಿ ಕಡ್ಡಾಯ ಮತದಾನದ ಅರಿವು ಮೂಡಿಸುವ ಕಾರ್ಯ ಅಧಿಕಾರಿಗಳಿಂದ ನಡೆಯಬೇಕು ಎಂದರು.

ಅಲ್ಲದೆ, ಮತದಾನದ ಬಗ್ಗೆ ಪ್ರತಿಜ್ಞಾವಿಧಿ ಸಂಗ್ರಹಿಸುವ, ಕಲಾ ಜಾಥಾ, ಮಾನವ ಸರಪಳಿ ನಿರ್ಮಿಸುವ ಮೂಲಕ ಏಪ್ರಿಲ್ 15 ವರೆಗೆ ತಾಲ್ಲೂಕಿನಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಸಬೇಕು. ಚುನಾವಣಾ ಕಾರ್ಯಕ್ಕೆ ರಚನೆಗೊಂಡ ವಿವಿಧ ತಂಡಗಳ ಅಧಿಕಾರಿಗಳು ನಿರ್ಲಕ್ಷತೆ ವಹಿಸುವಂತಿಲ್ಲ ಎಂದು ಎಚ್ಚರಿಸಿದರು.

ತಾಲ್ಲೂಕು ಎಂಸಿಸಿ ತಂಡದ ನೋಡಲ್ ಅಧಿಕಾರಿ ಜಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸಲಹೆ, ಸೂಚನೆಗಳನ್ನುನೀಡಿದರು. ತಹಶೀಲ್ದಾರ್ ಆರ್.ಸಿ.ನದಾಫ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ.ಲಕ್ಷ್ಮೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ, ತಾಲ್ಲೂಕು ವೈದ್ಯಾಧಿಕಾರಿ ರಾಜೇಂದ್ರ ಗೊಡ್ಡೆಮ್ಮಿ ಸೇರಿದಂತೆ ಫ್ಲೈಯಿಂಗ್ ಸ್ಕ್ವಾಡ್, ಎಂಸಿಸಿ ದಳ ಮತ್ತು ಸೆಕ್ಟರ್ ಆಫಿಸರ್ಗೆ ನಿಯೋಜನೆಗೊಂಡ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮತ ಚಲಾಯಿಸಿ
ಹಿರೇಕೆರೂರ: ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸಬೇಕು. ಹಳ್ಳಿಗಳಲ್ಲಿ ಶಿಕ್ಷಕರು ಮಕ್ಕಳೊಂದಿಗೆ ಮತದಾರರ ಜಾಗೃತಿ ಜಾಥಾ ನಡೆಸುವ ಮೂಲಕ ಮತದಾನಕ್ಕೆ ಪ್ರೇರಣೆ ನೀಡಬೇಕು ಎಂದು ತಹಶೀಲ್ದಾರ್ ಶಕುಂತಲಾ ಚೌಗಲಾ ಸೂಚಿಸಿದರು.

ಪಟ್ಟಣದ ಗುರು ಭವನದಲ್ಲಿ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ನಡೆದ ಮತದಾರ ಜಾಗೃತಿ ಕುರಿತ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾಗೃತಿ ಜಾಥಾಗಳಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಹೆಸರು ಬಳಸಬಾರದು ಎಂದರು.

ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಂ.ಜನವಾಡ ಮಾತನಾಡಿ, ಮತದಾರರ ಜಾಗೃತಿ ಜಾಥಾಕ್ಕೆ ಸಹಕರಿಸಲು ಎಲ್ಲ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಶಿಕ್ಷಕರು ಯಾವುದೇ ಪಕ್ಷಕ್ಕೆ ಒಲವು ತೋರದೆ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಹೇಳಿದರು.

ತಹಶೀಲ್ದಾರ್–2 ತುಷಾರ ಹೊಸೂರ, ಬಿಇಒ ಎಂ.ಸಿ.ಆನಂದ, ಸಿಡಿಪಿಒ ಶ್ರೀನಿವಾಸ ಆಲದಾರ್ತಿ, ಪ.ಪಂ. ಮುಖ್ಯಾಧಿಕಾರಿ ಎಂ.ಎಚ್. ರಾಜಕುಮಾರ, ಪಿ.ಬಿ.ನಿಂಗನಗೌಡ್ರ, ಎನ್.ಸುರೇಶಕುಮಾರ, ಟಿ.ಆರ್. ಮೂಡಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.