ಶಿಗ್ಗಾವಿ: ಗ್ರಾಮೀಣ ಪ್ರದೇಶದ ಕಲ್ಯಾಣಕ್ಕಾಗಿ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಅದನ್ನು ಅನುಷ್ಠಾನ ಮಾಡುವ ಮೂಲಕ ಜನರ ಸಮಸ್ಯಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ಪಟ್ಟಣದ ವಿರಕ್ತಮಠದ ಕಲ್ಯಾಣ ಮಂಟಪದಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಹಾಗೂ ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಮಾತನಾಡಿ ಅಧಿಕಾರ ವಿಕೇಂದ್ರಿಕರಣಗೊಂಡ ಬಳಿಕ ಗ್ರಾಮ ಮಟ್ಟದ ಸಮಸ್ಯೆ ಪರಿಹಾರ ಕಂಡಿದೆ. ಪಂಚಾಯಿತಿ ವ್ಯವಸ್ಥೆಯ ಆಶೆಗಳು ಈಡೇರಿಸಬೇಕಾ ಗಿರುವುದು ಪ್ರಮುಖವಾಗಿದೆ ಎಂದರು.

ವ್ಯಕ್ತಿಗತ ಸಮಸ್ಯೆಗಿಂತ ಸಾಮೂಹಿಕ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸುವ ಕಾರ್ಯಕ್ಕೆ ಗ್ರಾಮ ಮಟ್ಟದ ಅಧಿಕಾರಿ ಗಳು ಮುಂದಾಗಬೇಕು. ಸರ್ಕಾರದ ಯೋಜನೆಗಳನ್ನು ಸದ್ಭಳಿಕೆಗೊಳ್ಳುವಂತೆ ಶ್ರಮಿಸಿದಲ್ಲಿ ಮಾತ್ರ ಮಾಡಿದ ಅಭಿವೃದ್ಧಿ ಕೆಲಸ ಶಾಶ್ವತವಾಗುತ್ತವೆ ಎಂದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಗ್ರಾಮಾಂತರ ಜನರ ಬದುಕು ಹಸನುಗೊಳಿಸುವ ಮಹತ್ತರ ಜವಾಬ್ದಾರಿ ಸ್ಥಳೀಯ ಗ್ರಾಪಂ.ಸದಸ್ಯರ ಮೇಲಿದೆ. ಸರಕಾರದ ಅನುಷ್ಠಾ ನದ ಯೋಜನೆಗಳು ಸದ್ಭಳಿಕೆಗೊಂಡಲ್ಲಿ ಗ್ರಾಮಾಂತರ ಜನರ ಸಮಸ್ಯೆಗಳು ನಿವಾರಣೆಗೊಳ್ಳಲು ಸಾದ್ಯವಾಗುತ್ತದೆ. ಸದಸ್ಯರು ಆದರ್ಶರಾಗಿ ಹೊರಹೊಮ್ಮಬೇಕು. ಸಾರ್ವಜನಿಕ ರೊಂದಿಗೆ ವಿಶ್ವಾಸಗಳಿಸುವಂತ ನಡುವಳಿಕೆ ಸದಸ್ಯರ ದಾಗಬೇಕು.

ಅಧಿಕಾರದ ಅವಧಿಯಲ್ಲಿ ಮಾಡಿದ ಕೆಲಸದ ಬಿಲ್ ತೆಗೆಯುವ ಆತುರತೆ ಅಭಿವೃದ್ಧಿಯಲ್ಲಿ ತೊರಿಸಬೇಕು. ಜನರು ನಮ್ಮನ್ನು ನಂಬಬೇಕಾದರೆ ಅವರ ವಿಶಾರ್ಹತೆ ಮೂಡಿಸಿಕೊಳ್ಳಲು ಪ್ರತಿಯೊಬ್ಬ ಜನಪ್ರತಿನಿದಿಗಲ್ಲಿ ಆದರ್ಶತನ ಬೆಳೆಯಬೇಕು. ಅಲ್ಲದೆ ಅನುಷ್ಠಾನಗೊಳಿಸುವ ಕಾರ್ಯ ಸರಿಯಾಬೇಕು. ಅದು ಗ್ರಾಮಮಟ್ಟದಿಂದ ಬರಬೇಕು. ಆದರೆ ಇತ್ತೀಚೆಗೆನ ದಿನಗಳಲ್ಲಿ ಗ್ರಾ.ಪಂ. ವ್ಯವಸ್ಥೆಯಲ್ಲಿ ಸಣ್ಣ ಪುಟ್ಟ ಭಿನ್ನಾಬಿಪ್ರಾಯದಿಂದ ಕಲುಷಿತಗೊಳ್ಳುತ್ತಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಶಿವಾರಾಜ ಸಜ್ಜನ ಮಾತನಾಡಿದರು. ಜಿ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ಲ, ಜಿ.ಪಂ.ಸದಸ್ಯ ಬಿ.ಟಿ.ಇನಾಮತಿ ಮಾತ ನಾಡಿದರು.ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ, ಜಿ.ಪಂ. ಸದಸ್ಯರಾದ ಸಿ.ಎಸ್.ಪಾಟೀಲ, ಸರೋಜಾ ಆಡಿನ, ತಾ.ಪಂ.ಅಧ್ಯಕ್ಷ ವೀರನಗೌಡ್ರ ಪಾಟೀಲ, ಉಪಾಧ್ಯಕ್ಷೆ ಶಾಂತಮ್ಮ ಬೊಮ್ಮನಹಳ್ಳಿ, ಜಿ.ಪಂ.ಮಾಜಿ ಅಧ್ಯಕ್ಷ ಡಾ.ಮಲ್ಲೇಶಪ್ಪ ಹರಿಜನ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.