ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕರಿಂದ ರಸ್ತೆ ತಡೆದು ಪ್ರತಿಭಟನೆ

Last Updated 13 ಜೂನ್ 2011, 6:50 IST
ಅಕ್ಷರ ಗಾತ್ರ

ಹಾವೇರಿ: ಸಂಪೂರ್ಣ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಒತ್ತಾಯಿಸಿ ನಗರದ ಎಪಿಎಂಸಿ ಬಳಿಯ ಸಾರ್ವಜ ನಿಕರು ಭಾನುವಾರ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ರಸ್ತೆ ಮೇಲೆ ಸಿಮೆಂಟ್ ಪೈಪ್‌ಗಳನ್ನು ಹಾಕಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾ ರರು ರಸ್ತೆ ದುರಸ್ತಿಗೆ ಗಮನ ಹರಿಸದ ನಗರಸಭೆ ಹಾಗೂ ಪಿಡಬ್ಲೂಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಹಲವು ತಿಂಗಳಿನಿಂದ ಇಲ್ಲಿ ರಸ್ತೆಯೇ ಇಲ್ಲದಂತಾಗಿದೆ. ರಸ್ತೆಯಲ್ಲಿ ಬರಿ ಕೆಸರು ತುಂಬಿ ಯಾರೂ ಅಡ್ಡಾ ಡದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅನಿ ವಾರ್ಯವಾಗಿ ಪ್ರತಿಭಟನೆ ನಡೆಸ ಬೇಕಾಗಿದೆ ಎಂದು ಹೇಳಿದರು.ಎಪಿಎಂಸಿ ಬರುವ ರೈತರಿಗೆ ಇದೊಂದೇ ರಸ್ತೆಯಿದ್ದು, ರೈತರು ಎಪಿಎಂಸಿಗೆ ಬರಲು ಪರದಾಡುತ್ತಿದ್ದಾರೆ.

ವಿದ್ಯಾರ್ಥಿಗಳು ಶಾಲೆಗೆ ಹೋಗುವುದು ಕಷ್ಟವಾಗಿದೆ. ವೃದ್ಧ ರಸ್ತೆ ಮೇಲೆ ಬರುವಂತೆಯೇ ಇಲ್ಲ. ಇಂತಹ ರಸ್ತೆಯಿಂದ ಜನರು ನಿತ್ಯ ಜೀವನ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಒಳಚರಂಡಿ ಕಾಮಗಾರಿ ನೆಪದಲ್ಲಿ ಇಡೀ ಊರೊಳಗಿನ ರಸ್ತೆಗಳ ಪರಿಸ್ಥಿತಿಯೇ ಇದೇ ರೀತಿಯಾಗಿದೆ. ನಗರಸಭೆ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿ ದರು. ಆಗ ಪೊಲೀಸರು ಮನವೊಲಿ ಸಲು ನಡೆಸಿದ ಪ್ರಯತ್ನ ಕೂಡಾ ಫಲ ನೀಡಲಿಲ್ಲ. ನಂತರ ಪೊಲೀಸರು ದೂರವಾಣಿ ಮೂಲಕ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಸ್ಯೆಯನ್ನು ತಿಳಿಸಿದರು.
 
ಆಗ ಅಧಿಕಾರಿಗಳು ತಕ್ಷವೇ ತಾತ್ಕಾಲಿಕವಾಗಿ ದುರಸ್ತಿಗೊಳಿಸುವ ಭರವಸೆ ನೀಡಿದರಲ್ಲದೇ, ಮಳೆಗಾಲ ಮುಗಿದ ನಂತರ ಸಂಪೂರ್ಣ ದುರಸ್ತಿ ಮಾಡಲಾಗುವುದು ಎಂದು ತಿಳಿಸಿದರು.
 
ಆ ನಂತರವೇ ಪ್ರತಿಭಟನೆಕಾರರು ಪ್ರತಿಭಟನೆಯಿಂದ ಹಿಂದೆ ಸರಿದರು. ಪ್ರತಿಭಟನೆಯಲ್ಲಿ ಮಹೇಶ ಯಾದವಾಡ ಸೇರಿದಂತೆ ಆ ಪ್ರದೇಶದ ನೂರಾರು ಜನರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT