ಹಾವೇರಿ: ‘ಸಂವಿಧಾನವು ಒಳ್ಳೆಯದು ಅಥವಾ ಕೆಟ್ಟದ್ದು ಆಗುವುದು, ಅದನ್ನು ಆಚರಣೆಯಲ್ಲಿ ತರುವ ಜನರಿಂದ. ಅವರು ಒಳ್ಳೆಯವರಾದರೆ ಸಂವಿಧಾನ ಒಳ್ಳೆಯದು. ಅವರು ಕೆಟ್ಟವರಾದರೆ ಸಂವಿಧಾನ ಕೆಟ್ಟದ್ದಾಗುತ್ತದೆ’ ಎಂಬ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಮಾತಿನಂತೆ ದೇಶದ ಭವಿಷ್ಯ ರೂಪಿತಗೊಳ್ಳುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮನೋಹರ ತಹಸೀಲ್ದಾರ್ ಹೇಳಿದರು.

ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ‘ನಾವೆಲ್ಲ ಇಂದು ದೇಶ ಎದುರಿಸುತ್ತಿರುವ ಭಯೋತ್ಪಾದನೆ, ಬಡತನ, ನಿರುದ್ಯೋಗ, ಸಾಮಾಜಿಕ ಅನಿಷ್ಠ ಪದ್ಧತಿಗಳು, ಅನಕ್ಷರತೆ ಮತ್ತಿತರ ಸವಾಲುಗಳನ್ನು ಎದುರಿಸಬೇಕಾಗಿದೆ’ ಎಂದ ಅವರು, ‘ದೇಶವು ಪ್ರಬುದ್ಧ ಪ್ರಜಾಸತ್ತೆಯಾಗಿ ಹೊರಹೊಮ್ಮಲು ಯುವಜನರ ಪಾತ್ರ ಬಹುಮುಖ್ಯ’ ಎಂದರು. ‘ಸಂವಿಧಾನ ಪಿತಾಮಹ ಅಂಬೇಡ್ಕರ್ ಅವರನ್ನು ನಾವೆಲ್ಲ ‘ಆಧುನಿಕ ಮನು’ ಎಂದು ಸ್ಮರಿಸುವಂತಾಗಿದೆ’ ಎಂದರು.

ಶಾಸಕ ರುದ್ರಪ್ಪ ಲಮಾಣಿ, ಸಂಸದ ಶಿವಕುಮಾರ ಉದಾಸಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಕಸ್ತೂರೆವ್ವ ವಡ್ಡರ, ಉಪಾಧ್ಯಕ್ಷೆ ಸರೋಜವ್ವ ಆಡಿನ, ನಗರಸಭೆ ಅಧ್ಯಕ್ಷ ಮಂಜುನಾಥ ಬಿಷ್ಟಣ್ಣನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವ ಕುಮಾರ ನೀರಲಗಿ, ಜಿಲ್ಲಾಧಿಕಾರಿ ರಮಣದೀಪ ಚೌಧರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಆಂಜನಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ, ಉಪವಿಭಾಗಾಧಿಕಾರಿ ಬಸವರಾಜ ಸೋಮಣ್ಣನವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಡಿವೈಎಸ್ಪಿ ಗೋಪಾಲ ಬ್ಯಾಕೋಡ, ತಹಶೀಲ್ದಾರ್ ಸಿ.ಎಸ್. ಭಂಗಿ, ಪ್ರಶಾಂತ ನಾಲವಾರ, ಮುಖಂಡರಾದ ಎಸ್.ಎಫ್. ಗಾಜೀಗೌಡ್ರ, ಐ.ಯು. ಪಠಾಣ, ಹನುಮಂತನಾಯ್ಕ ಬದಾಮಿ. ಮಲ್ಲೇಶಪ್ಪ ಪಟ್ಟಣಶೆಟ್ಟಿ, ಕರಬಸಪ್ಪ ಹಳದೂರ, ಜಗದೀಶ ಮಲಗೋಡ ಮತ್ತಿತರರು ಇದ್ದರು.

ಪಥ ಸಂಚಲನ: ಆರ್ಪಿಐ ದಿಲೀಪ್ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಮಿಸಲು ಪಡೆ, ನಾಗರಿಕ ಪೊಲೀಸ್, ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ಗೃಹ ರಕ್ಷಕ ದಳ, ಜೆ.ಪಿ. ರೋಟರಿ ಪ್ರೌಢ ಶಾಲೆ, ಸೇಂಟ್ ಆ್ಯನ್ ಪ್ರೌಢ ಶಾಲೆ, ಹುಕ್ಕೇರಿಮಠ ಪ್ರೌಢ ಶಾಲೆ, ಕೆ.ಎಲ್.ಇ. ಪ್ರೌಢ ಶಾಲೆ, ಕಾಳಿದಾಸ ಪ್ರೌಢ ಶಾಲೆ, ಮಂಜುನಾಥ ಪ್ರೌಢ ಶಾಲೆ, ಗೆಳೆಯರ ಬಳಗ ಆಂಗ್ಲ ಮಾದ್ಯಮ ಪ್ರೌಢ ಶಾಲೆ, ಎಲ್.ಇ.ಎಂ.ಎಸ್. ಪ್ರೌಢ ಶಾಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್, ಎಂ.ಡಿ.ಆರ್.ಎಸ್. ಶಿಡಿನೂರ, ಎಂ.ಡಿ.ಆರ್.ಎಸ್. ಹಾನಗಲ್ ತಂಡಗಳು ಪಥಸಂಚಲನ ನಡೆಸಿದವು.

ಕವಾಯತು
ಎಸ್.ಎಂ.ಎಸ್. ಪ್ರಾಢ ಶಾಲೆ, ಎಸ್.ಎಂ.ಎಸ್. ಪ್ರಾಥಮಿಕ ಶಾಲೆ, ನಾಗೇಂದ್ರನಮಟ್ಟಿ ಸರ್ಕಾರಿ ಉರ್ದು ಪ್ರೌಢ ಶಾಲೆ , ಎಸ್.ಜೆ.ಎಂ. ಪ್ರಾಥಮಿಕ ಶಾಲೆ, ಎಲ್.ಇ.ಎಂ.ಎಸ್. ಪ್ರಾಥಮಿಕ ಶಾಲೆ, ಎಂ.ಪಿ.ಎಸ್. ಶಾಲೆ ಸಂಖ್ಯೆ: 2 , ಎಚ್.ಪಿ.ಎಸ್. ಶಾಲೆ ಸಂಖ್ಯೆ: 8 ನಾಗೇಂದ್ರನಮಟ್ಟಿ, ಹುಕ್ಕೇರಿಮಠ ಪ್ರಾಥಮಿಕ ಶಾಲೆ , ಮುಸ್ಸಿಫಲ್ ಪ್ರಾಥಮಿಕ ಶಾಲೆ, ಜೆ.ಪಿ ರೋಟರಿ ಪ್ರೌಢ ಶಾಲೆ, ಜೇಂಟ್ಸ್ ಪ್ರಾಥಮಿಕ ಶಾಲೆ, ಇಜಾರಿಲಕ್ಮಾಪುರ ಎಚ್.ಪಿ.ಎಸ್ ಶಾಲೆ, ಗೆಳೆಯರ ಬಳಗ ಪ್ರೌಢ ಶಾಲೆ, ಗೆಳೆಯರ ಬಳಗ ಪ್ರಾಥಮಿಕ ಶಾಲೆ, ಸರ್ಕಾರಿ ಕನ್ನಡ ಪ್ರಾಢ ಶಾಲೆ, ಜೆ.ಪಿ. ರೋಟರಿ ಪ್ರಾಥಮಿಕ ಶಾಲೆ, ಸರ್ಕಾರಿ ಉರ್ದು ಪ್ರೌಢ ಶಾಲೆ, ಸರ್. ಎಂ. ವಿಶ್ವೇಶ್ವರಯ್ಯ ಪ್ರಾಥಮಿಕ ಶಾಲೆ, ಗೆಳೆಯರ ಬಳಗ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಸಿದ್ರಾಮೇಶ್ವರ ಪ್ರಾಢ ಶಾಲೆ, ಸಾಯಿಚಂದ ಗುರುಕುಲ , ಎಚ್.ಪಿ.ಎಸ್ ಶಾಲೆ ಸಂಖ್ಯೆ:5, ವಿದ್ಯಾನಿಕೇತನ ವಸತಿ ಶಾಲೆ , ಮಂಜುನಾಥ ಪ್ರಾಢ ಶಾಲೆ, ಕಾಳಿದಾಸ ಪ್ರಾಢ ಶಾಲೆ , ಸೇಂಟ್ ಆ್ಯನ್ಸ್ ಪ್ರಾಥಮಿಕ ಶಾಲೆ, ಲುಡಾಲ್ಫ ಪ್ರಾಢ ಶಾಲೆ , ಕರ್ನಾಟಕ ಪಬ್ಲಿಕ್ ಸ್ಕೂಲ್, ಎಚ್.ಪಿ.ಯು.ಬಿ.ಎಸ್. ನಾಗೇಂದ್ರನಮಟ್ಟಿ , ಕೆ.ಎಲ್.ಇ. ಪ್ರೌಢ ಶಾಲೆ , ಎಲ್.ಇ.ಎಂ.ಎಸ್. ಪ್ರೌಢ ಶಾಲೆ, ನೃತ್ಯ ಪ್ರದರ್ಶನ ಜೆ.ಪಿ. ರೋಟರಿ ಪ್ರೌಢ ಶಾಲೆ, ಜೇಂಟ್ಸ್ ಪ್ರಾಥಮಿಕ ಶಾಲೆ, ಸೇಂಟ್ ಆ್ಯನ್ಸ್ ಶಾಲೆ, ಎಸ್.ಎಂ.ಎಸ್. ಶಾಲೆ ಪ್ರದರ್ಶನ ನೀಡಿದ್ದು, ಜನರ ಗಮನ ಸೆಳೆಯಿತು.

ಪ್ರಶಸ್ತಿ ಪುರಸ್ಕೃತರು
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಸವಣ್ಣೆಪ್ಪ ಆಟವಾಳಗಿ (ವೀರಗಾಸೆ), ವಾಗೀಶ ಪಾಟೀಲ್ (ಮುದ್ರಣ ಮಾಧ್ಯಮ), ರಾಜು ಗಾಳೆಮ್ಮನವರ (ವಿದ್ಯುನ್ಮಾನ ಮಾಧ್ಯಮ), ಜೆ.ಎಂ. ಮಠದ (ಸಾಹಿತ್ಯ), ಕರಬಸಮ್ಮ ಪಾಳೇದ (ಅಂಗನವಾಡಿ ಕಾರ್ಯಕರ್ತೆ), ಲಲಿತಾ ಕಮಡೊಳ್ಳಿ (ಆಶಾ ಕಾರ್ಯಕರ್ತೆ), ಶೇರ್ಬಾನು ಚೂಡಿಗಾರ (ಕರಕುಶಲ ಕಲೆ) ಅವರಿಗೆ 2016 ಗಣರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಯಸ್ಕರ ಶಿಕ್ಷಣಾಧಿಕಾರಿ ಐ.ಎ. ಲೋಕಾಪುರ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಎಸ್.ಎನ್. ಪ್ರಕಾಶ್, ಕ್ಷಯಯೋಗ ನಿಯಂತ್ರಣಾಧಿಕಾರಿ ಭಾಗೀರಥಿಬಾಯಿ ಮೆಡ್ಲೇರಿ, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ರಾಜು ಕೊಲೇರ, ಅರುಣಕಾರಗಿ ಹಾಗೂ ಶಂಕರ ಸುತಾರಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂವಿಧಾನದ ಪಾಲನೆಯೇ ಈ ದೇಶದ ಧರ್ಮ. ಸಂವಿಧಾನ ಪ್ರಕಾರ ಕಾನೂನು ಪಾಲನೆಯಿಂದ ಶಾಂತಿ, ಅಭಿವೃದ್ಧಿ ಸಾಧ್ಯವಿದೆ
– ಮನೋಹರ ತಹಸೀಲ್ದಾರ್,
ಸಚಿವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.