ಶನಿವಾರ, ಅಕ್ಟೋಬರ್ 24, 2020
18 °C
ಜಿಲ್ಲೆಯಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆ: ಹಿಂಗಾರು ಹಂಗಾಮಿಗೆ ಮುನ್ನುಡಿ

ಇಳಕಲ್, ಹುನಗುಂದ: ವಾಡಿಕೆಗಿಂತ ವರ್ಷಧಾರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಜಿಲ್ಲೆಯಲ್ಲಿ ಈ ಬಾರಿ ಮಳೆಯ ಸಮೃದ್ಧಿ ಹಿಂಗಾರು ಹಂಗಾಮಿನ ಶುಭಾರಂಭಕ್ಕೆ ವೇದಿಕೆ ಒದಗಿಸಿದೆ. ಕಳೆದ ಜನವರಿಯಿಂದ ಇಲ್ಲಿಯವರೆಗೆ ವಾಡಿಕೆಯಂತೆ 48.52 ಸೆಂ.ಮೀ ಮಳೆಯಾಗಬೇಕಿದ್ದು, ಆದರೆ 60.50 ಸೆಂ.ಮೀ ಮಳೆ ಸುರಿದಿದೆ.

ಹೆಚ್ಚಿನ ಮಳೆಯ ಪರಿಣಾಮ ಮುಂಗಾರು ಹಂಗಾಮಿನಲ್ಲಿ ಪೀಕಿಗೆ ತೊಂದರೆಯಾದರೆ, ಹಿಂಗಾರು ಬಿತ್ತನೆಗೆ ನೆಲ ಚೆನ್ನಾಗಿ ಹದಗೊಂಡಿದೆ.

ಸದಾ ಬರ ಪರಿಸ್ಥಿತಿಯನ್ನೇ ಬೆನ್ನಿಗಟ್ಟಿಸಿಕೊಂಡಿರುವ ಹುನಗುಂದ ಹಾಗೂ ಇಳಕಲ್ ತಾಲ್ಲೂಕುಗಳಲ್ಲಿ ಈ ಬಾರಿ ಅತಿ ಹೆಚ್ಚು ಮಳೆ ದಾಖಲಾಗಿದೆ.

ಹುನಗುಂದ ತಾಲ್ಲೂಕಿನಲ್ಲಿ ವಾಡಿಕೆ ಮಳೆ ಇಲ್ಲಿಯವರೆಗೆ 56.18 ಸೆಂ.ಮೀ ಇದ್ದರೂ ಈ ಬಾರಿ 70.7 ಸೆಂ.ಮೀ ಮಳೆ ಬಿದ್ದಿದೆ. ಇಳಕಲ್‌ ತಾಲ್ಲೂಕಿನಲ್ಲಿ ವಾಡಿಕೆಯಂತೆ 54.42 ಸೆಂ.ಮೀ ಬದಲಿಗೆ 72.47 ಸೆಂ.ಮೀ ಮಳೆ ಸುರಿದಿದೆ.

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆ ಬಿದ್ದಿದ್ದರೆ ಬೀಳಗಿ ತಾಲ್ಲೂಕಿನಲ್ಲಿ ಮಾತ್ರ ಅಲ್ಪ ಪ್ರಮಾಣದಲ್ಲಿ ಹೆಚ್ಚು ಮಳೆ ಬಿದ್ದಿದೆ. ಬೀಳಗಿ ತಾಲ್ಲೂಕಿನಲ್ಲಿ ವಾಡಿಕೆಯಂತೆ 49.93 ಸೆಂ.ಮೀ ಮಳೆಯಾಗಬೇಕಿತ್ತು. ಅಲ್ಲಿ 52.2 ಸೆಂ.ಮೀ ಮಳೆ ಸುರಿದಿದೆ.

ಬಾಗಲಕೋಟೆ ತಾಲ್ಲೂಕಿನಲ್ಲಿ 50.04 ಸೆಂ.ಮೀ ವಾಡಿಕೆ ಮಳೆ ಬೀಳಬೇಕಿದ್ದು, 5443 ಸೆಂ.ಮೀ ಮಳೆ ಬಿದ್ದಿದೆ. ಬಾದಾಮಿ ತಾಲ್ಲೂಕಿನಲ್ಲಿ 50.6 ಸೆಂ.ಮೀ ವಾಡಿಕೆ ಮಳೆ ಇದ್ದು, ಅಲ್ಲಿ 57.86 ಸೆಂ.ಮೀ ಮಳೆ ಸುರಿದಿದೆ. ಜಮಖಂಡಿ ತಾಲ್ಲೂಕಿನಲ್ಲಿ 45.24 ಸೆಂ.ಮೀ ವಾಡಿಕೆ ಮಳೆ ಇದ್ದು, 55.54 ಸೆಂ.ಮೀ ಮಳೆಯಾಗಿದೆ. ಮುಧೋಳ 44.54 ಸೆಂ.ಮೀ ವಾಡಿಕೆ ಮಳೆಯಾಗಬೇಕಿದ್ದು, ಅಲ್ಲಿ 62.72 ಸೆಂ.ಮೀ ಸುರಿದಿದೆ.

ಗುಳೇದಗುಡ್ಡ ತಾಲ್ಲೂಕಿನ 51.58 ಸೆಂ.ಮೀ ವಾಡಿಕೆ ಮಳೆ ಇದ್ದರೂ ಅಲ್ಲಿ 65.44 ಸೆಂ.ಮೀ ಮಳೆ ಬಿದ್ದಿದೆ. ರಬಕವಿ–ಬನಹಟ್ಟಿ ತಾಲ್ಲೂಕಿನಲ್ಲಿ ವಾಡಿಕೆಯಂತೆ 40.85 ಸೆಂ.ಮೀ ಮಳೆ ಬೀಳಬೇಕಿದ್ದು, ಅಲ್ಲಿ 61.69 ಸೆಂ.ಮೀ ಮಳೆ ಸುರಿದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು