ಸೋಮವಾರ, ಮಾರ್ಚ್ 30, 2020
19 °C

ಹೊಂಬುಜ: ಮಾ.16ರಂದು ರಥೋತ್ಸವ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಪ್ಪನ್‌ಪೇಟೆ: ಹೊಂಬುಜ ಅತಿಶಯ ಕ್ಷೇತ್ರದಲ್ಲಿ ಮಾರ್ಚ್ 13ರಿಂದ 18 ರವರೆಗೆ ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಮತ್ತು ಜಗನ್ಮಾತೆ ಪದ್ಮಾವತಿ ಅಮ್ಮನವರ ವಾರ್ಷಿಕ ರಥಯಾತ್ರಾ ಜಾತ್ರಾ ಮಹೋತ್ಸವವು ಮಠದ ಪೀಠಾಧಿಕಾರಿ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ನೇತೃತ್ವದಲ್ಲಿ ಜರುಗಲಿದೆ.

ಮಾರ್ಚ್‌ 13 ರಂದು ಶುಕ್ರವಾರ ಇಂದ್ರಪ್ರತಿಷ್ಠೆ, ವಿಮಾನಶುದ್ಧಿ, ಯಕ್ಷಪ್ರತಿಷ್ಠೆ, ಧ್ವಜಾರೋಹಣ, ಮಹಾನೈವೇದ್ಯ ಪೂಜೆ, ನಾಂದಿಮಂಗಲ, ವಾಸ್ತುಶಾಂತಿ, ಮೃತ್ತಿಕ ಸಂಗ್ರಹ ಹಾಗೂ ನಾಗವಾಹನೋತ್ಸವ ನಡೆಯಲಿದೆ. 14 ರಂದು ಶ್ರೀಸ್ವಾಮಿ ಮತ್ತು ಅಮ್ಮನವರ ಸನ್ನಿಧಿಯಲ್ಲಿ ಅಭಿಷೇಕ ಕಲಿಕುಂಡಯಂತ್ರಾರಾಧನೆ ಸಿಂಹವಾಹನೋತ್ಸವ, 15 ರಂದು ಜಲಾಗ್ನಿ ಹೋಮ, ಶಾಂತಿ ಚಕ್ರಾರಾಧನೆ, ಶ್ರೀಬಲಿ ಸಂಜೆ 6 ಕ್ಕೆ ಧಾರ್ಮಿಕ ಸಭೆ,  ಸಿದ್ಧಾಂತ ಕೀರ್ತಿ ಪ್ರಶಸ್ತಿ ಪ್ರದಾನ ನಂತರ ಬೆಳ್ಳಿ ರಥೋತ್ಸವ ಮತ್ತು ಪುಪ್ಪಾರಥೋತ್ಸವ ನಡೆಯಲಿದೆ.

16 ರಂದು ಮಹಾನೈವೇದ್ಯ ಪೂಜೆ, ರಥಾರೋಹಣಕ್ಕೆ ಪ್ರಸಾದ ಬೇಡಿಕೆ ರಥಾರೋಹಣ, ಮಹಾರಥೋತ್ಸವ, 17ರಂದು ಪೂರ್ವಾಹ್ನತ್ರಕೂಟ ಜಿನಾಲಯದ ಗುಡ್ಡದ ಬಸದಿಯಲ್ಲಿ ಪಾರ್ಶ್ವನಾಥಸ್ವಾಮಿಗೆ 108 ಕಲಶಗಳ ಮಹಾಭಿಷೇಕ ಮತ್ತು ಸಂಘ ಪೂಜೆ ನಡೆಯಲಿದೆ. 18 ರಂದು ಕುಂಕುಮೋತ್ಸವ ಮತ್ತು ಧ್ವಜಾರೋಹಣ ಶ್ರೀಗಳ ಸಾನಿಧ್ಯದಲ್ಲಿ ಜರುಗಲಿವೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)