ಸಂತರ, ಶರಣರ, ಕವಿಗಳ ನಾಡು, ರಮಣೀಯ ಪ್ರದೇಶಗಳ ಬೀಡು ವಾಸ್ತುಶಿಲ್ಪಕಲೆಯ ಜಾಡು ನಮ್ಮ ಹೈದರಾಬಾದ್ ಕರ್ನಾಟಕ ಅರ್ಥಾತ್ ಕಲ್ಯಾಣ ಕರ್ನಾಟಕ. ತನ್ನ ಸೆರಗಿನಲ್ಲಿ ಅನೇಕ ರಮ್ಯ ತಾಣಗಳನ್ನು ಹೊಂದಿರುವ ನಿಸರ್ಗದ ಅದ್ವಿತೀಯ ಪ್ರದೇಶವೂ ಹೌದು.

ಬಿದರಿಗೆ ಪ್ರಸಿದ್ಧಿಯಾದ, ಗಂಡು ಮೆಟ್ಟಿನ ನೆಲ ಬೀದರ್ ಜಿಲ್ಲೆ. ಇಲ್ಲಿನ ನರಸಿಂಹ ಝರ್ನಾ ಗುಹಾಂತರ ದೇವಾಲಯ ರೋಚಕ ಅನುಭವವನ್ನು ನೀಡುತ್ತದೆ. 10 ಅಡಿ ಅಗಲ, 10 ಅಡಿ ಎತ್ತರ, 3 ಅಡಿ ಆಳದ ನೀರಿನಲ್ಲಿ ನಡೆದುಹೋಗಿ ನರಸಿಂಹ ದೇವರ ದರ್ಶನ ಪಡೆಯಬೇಕು. ಬಸವ ಕಲ್ಯಾಣದ ಬಸವಣ್ಣನ ಅರಿವಿನ ಮನೆ ಅನುಭವ ಮಂಟಪ, ಬಿಜ್ಜಳನ ಅರಮನೆ ಸ್ಥಳ, ಜಲಸಂಗ್ವಿ ದೇವಾಲಯಗಳು ಉತ್ತಮ ವಾಸ್ತುಶಿಲ್ಪಕೃತಿಯನ್ನು ಹೊಂದಿವೆ. ಇಲ್ಲಿಯ ಅಕ್ಕನಾಗಮ್ಮ ಗವಿ, ಪ್ರಭುದೇವ, ಮಡಿವಾಳ ಮಾಚಯ್ಯ, ನುಲಿಯ ಚಂದಯ್ಯ, ಸಿದ್ಧೇಶ್ವರ ಗುಡಿಗಳಿಂದ ಈ ಸ್ಥಳ ಪವಿತ್ರವಾಗಿದೆ. ನಗರದ ಪಾಪನಾಶಿನಿ ಗುಡಿ, ನಾನಕ ಝರಾ ನೋಡತಕ್ಕ ಸ್ಥಳಗಳು.

ಕಲ್ಲರಳಿ ಹೂವಾದ ಕಲಬುರಗಿ, ಕಲ್ಲಿನ ಭೂಮಿ. 18 ನೇ ಶತಮಾನದಲ್ಲಿ ಅರಳಗುಂಡಿಗಿಯಲ್ಲಿ ಜನಿಸಿದ ಮಹಾನ್ ದೈವಿ ಪುರುಷ ಶರಣಬಸವೇಶ್ವರ ದೇವಾಲಯ ಶರಣರ ಮನದಲ್ಲಿ ಮನೆ ಮಾಡಿದೆ. ಉರ್ದು ಸಾಹಿತ್ಯದ ಪ್ರಥಮ ಗದ್ಯ ಲೇಖಕ, ಪರ್ಷಿಯಾದ ಸೂಫಿ ಸಂತ ಖಾಜಾ ಬಂದೇನವಾಜರ ದರ್ಗಾ ಐಕ್ಯತೆಯ ಸಂಕೇತವಾಗಿದೆ. ರಮ್ಯ ತಾಣ ಬುದ್ಧವಿಹಾರ, ಕೃಷಿ ಸಂಶೋಧನಾ ಕೇಂದ್ರ, ವಿಜ್ಞಾನ ಕೇಂದ್ರ, ಆಕಾಶವಾಣಿ ಕೇಂದ್ರಗಳೂ ಇಲ್ಲಿವೆ.

ಚಿತ್ತಾಪುರ ತಾಲ್ಲೂಕಿನ ಸನ್ನತ್ತಿಯ ಭೀಮಾ ತಟದ ಚಂದ್ರಲಾ ಪರಮೇಶ್ವರಿ ದೇವಾಲಯ, ಕನಗನಹಳ್ಳಿ ಹತ್ತಿರದ ಶಾತವಾಹನರ ಕಾಲದ ಸ್ತೂಪ, ಬೌದ್ಧ ಅವಶೇಷಗಳು, ಅಶೋಕನ ಶಾಸನಗಳ ವಸ್ತುಸಂಗ್ರಹಾಲಯ, ನಾಲ್ವಾರದ ಕೋರಿಸಿದ್ಧೇಶ್ವರರ ಮಠ, ನಾಗಾವಿಯ ನಾಗಲಾಂಬಿಕೆ, ಮರತೂರಿನ ವಿಜ್ಞಾನೇಶ್ವರ ಭವನ, ಜೇವರ್ಗಿಯ ಜೈನ ಬಸದಿ, ಷಣ್ಮುಖ ಸ್ವಾಮಿ ಮಠ, ಘತ್ತರಗಿಯ ಭಾಗ್ಯವಂತಿ ದೇವಿ, ಗಾಣಗಾಪೂರದ ದತ್ತಾತ್ರೇಯ, ಆಳಂದದ ಏಕಾಂತ ರಾಮಯ್ಯನ ಗುಡಿ, ದಂಡಗುಂಡ ಬಸವಣ್ಣ, ರಟಕಲ್ನ ಸಿದ್ಧೇಶ್ವರ, ಕಾಳಗಿಯ ಕಾಳಲಿಂಗೇಶ್ವರ, ಕರಿಕಲ್ಲಿನ ಗುಡಿಯಂತೂ ಹೈದರಾಬಾದ್ ಕರ್ನಾಟಕ ಬೇಲೂರು ಎನಿಸಿದೆ.

ರಾಷ್ಟ್ರಕೂಟರ ರಾಜಧಾನಿ ಮಾನ್ಯಖೇಟ, ಇಂದಿನ ಮಳಖೇಡ ಗುಲ್ಬರ್ಗ ಜಿಲ್ಲೆಯಲ್ಲಿದೆ. ಬಿಜನಹಳ್ಳಿಯಲ್ಲಿ ಹರಳಯ್ಯ ದಂಪತಿಗಳು, ಬಸವೇಶ್ವರರಿಗೆ ನೀಡಿದ ಪಾದರಕ್ಷೆಗಳಿವೆ. ಸೇಡಂನ ಪಂಚಲಿಂಗೇಶ್ವರ, ಕೊತ್ತಲ ಬಸವೇಶ್ವರ ಗುಡಿ, ಜೈನ ಬಸದಿ, ಬಾಣಂತಿ ಕಂಬ, ಜುಮ್ಮಾ ಮಸೀದಿ, ಸಿಮೆಂಟ್ ಕಾರ್ಖಾನೆ, ಚಂದ್ರಂಪಳ್ಳಿ ಡ್ಯಾಂ, ಯಾನಾಗುಂದಿಯ ಮಾತೆ ಮಾಣಿಕ್ಯೇಶ್ವರಿ ಅವರ ಆಶ್ರಮಗಳು ಮನ ತುಂಬುತ್ತವೆ.

ನೂತನ ಜಿಲ್ಲೆಯಾದ ಯಾದಗಿರಿಯ ಮೈಲಾಪುರದ ಮೈಲಾರಲಿಂಗೇಶ್ವರ, ಅಬ್ಬೆತುಮಕೂರಿನ ವಿಶ್ವಾರಾಧ್ಯರ ದೇವಸ್ಥಾನ, ಕಾಳೆಬೆಳಗುಂದಿಯ ಬನದೇಶ್ವರ ದೇವಾಲಯ, ಚಿಂತನಪಲ್ಲಿಯ ಗವಿಸಿದ್ಧೇಶ್ವರ, ಕೊಡೇಕಲ್ನ ಬಸವಣ್ಣ, ಛಾಯಾ ಭಗವತಿ ಮಂದಿರ, ಕೆಂಭಾವಿಯ ಶರಣ ಭೋಗಣ್ಣನ ದ್ವೀಪ ಸ್ವರೂಪದ ಗುಡಿ, ತಿಂಥಣಿ ಮೌನೇಶ್ವರ ಕ್ಷೇತ್ರ, ಸುರಪುರದ ವೇಣುಗೋಪಾಲ ದೇವಾಯಲಯಗಳು ಜಿಲ್ಲೆಯ ಧಾರ್ಮಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ.

ನಾರಾಯಣಪುರ ಜಲಾಶಯ, ಹತ್ತಿಕುಣಿ ಜಲಾಶಯ, ಜಿಲ್ಲೆಯ ಜೋಗ ಜಲಪಾತ ಎನ್ನಬಹುದಾದ ಗುರುಮಠಕಲ್ ಸಮೀಪದ ದಬಧಬಿ ಜಲಪಾತ, ಸುರಪುರ ತಾಲ್ಲೂಕಿನ ಬೋನಾಳದ ಪಕ್ಷಿಧಾಮ, ಶಹಾಪುರ ತಾಲ್ಲೂಕಿನ ಶಿರವಾಳದ ಏಕಶಿಲಾರೂಪದ ಬಾವಿ, ಶಹಾಪುರದ ಬಳಿ ಮಲಗಿರುವ ಬುದ್ಧನ ರೂಪದಲ್ಲಿರುವ ಬೆಟ್ಟ, ಡಿಗ್ಗಿಯ ಸೋಮೇಶ್ವರ ನಿಸರ್ಗದ ರಮ್ಯ ತಾಣಗಳಾಗಿವೆ.

ರಾಜರ ಊರು ಎನಿಸಿದ ರಾಯಚೂರು ದಾಸವರೇಣ್ಯರ ತಾಣ. ವಿದ್ಯುತ್ ಸಮೃದ್ಧ ಜಿಲ್ಲೆ. ಇಲ್ಲಿನ ಶಾಖ ವಿದ್ಯುತ್ ಉತ್ಪಾದನಾ ಕೇಂದ್ರ ಶಕ್ತಿನಗರ, ಮಾವಿನಕೆರೆ ದಡದಲ್ಲಿನ ನಂದೀಶ್ವರ ದೇವಾಲಯ ನಿಸರ್ಗ ರಮ್ಯ ತಾಣ. ಬೃಹತ್ ಬೆಟ್ಟದಲ್ಲಿ ಕೊರೆದು, ನಿರ್ಮಿಸಲಾದ ಈ ದೇವಾಲಯದಲ್ಲಿ ಇನ್ನಿತರ ಗುಡಿಗಳಿದ್ದು, ನವಗ್ರಹ ಮತ್ತು ಅವುಗಳ ಸಂಕೇತದ ನವವೃಕ್ಷಗಳಿವೆ. ರಾಯಚೂರಿನ ಕೋಟೆ, ಗಾಜನಗೌಡರ ಮನೆ, ಜಲಾಲಸಾಬ ಗುಡ್ಡದ ದರ್ಗಾ, ಅಲ್ಲಿನ ಕಹಿರಹಿತ ಬೇವಿನಮರ, ಮಾನ್ವಿಯ ಬೇಕಲಪರ್ವಿಯ ವಿಜಯದಾಸರ ಕಟ್ಟಿ, ಜಗನ್ನಾಥ ದಾಸರ ಮನೆ, ಗೂಗಲ್ ಅಲ್ಲಮಪ್ರಭುವಿನ ಗುಹಾಂತರ ದೇವಾಲಯ, ಗುಡಗುಂಟಿ ಅಮರೇಶ್ವರ ದೇವಸ್ಥಾನ, ಅಲ್ಲಿನ ಪುಷ್ಕರಣೆ ಅದ್ಭುತವಾಗಿವೆ. ಮುದಗಲ್ ಕೋಟೆ, ಗಾಣದಾಳ ಪಂಚಮುಖಿ, ನಾರದ ಗಡ್ಡೆ, ಕವಿತಾಳ, ಹಟ್ಟಿ ಚಿನ್ನದ ಗಣಿಗಳು ಪ್ರೇಕ್ಷಣೀಯ ಸ್ಥಳಗಳಾಗಿವೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯ ಆನೆಗುಂದಿಯಲ್ಲಿ 8 ನೇ ಶತಮಾನದ ಒಂಬತ್ತು ಯತಿಗಳ ವೃಂದಾವನ, ಪಂಪ ಸರೋವರ, ಕುಷ್ಟಗಿಯ ಪುರ ಗ್ರಾಮದಲ್ಲಿನ ವಿಜಯನಗರ ಕಾಲದ ಕೋಟಿಲಿಂಗ ದೇವಾಲಯ ಅದ್ಭುತ ತಾಣಗಳು. ಇಟಗಿಯ ಮಹಾದೇವ ದೇವಾಲಯವು ದೇವಾಲಯಗಳ ಚಕ್ರವರ್ತಿ ಎನಿಸಿದೆ. ಕುಕನೂರಿನ ನವಕೂಟ ದೇವಾಲಯ, ಕೊಪ್ಪಳದ ಗವಿಸಿದ್ಧೇಶ್ವರ ಮಠಗಳು ಆಕರ್ಷಿಣೀಯವಾಗಿವೆ.

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮನತಣಿಸುವ ಸಾಕಷ್ಟು ಸ್ಥಳಗಳಿವೆ. ಅವುಗಳನ್ನು ಇನ್ನೂ ಅಭಿವೃದ್ಧಿಗೊಳಿಸಬೇಕಾದ ಅವಶ್ಯಕತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.