ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಘಟನೆ: ಸಿಡಿಲಿಗೆ ಒಬ್ಬ ಸಾವು, ಆರು ಜನರಿಗೆ ಗಾಯ

Published 24 ಮೇ 2023, 16:29 IST
Last Updated 24 ಮೇ 2023, 16:29 IST
ಅಕ್ಷರ ಗಾತ್ರ

ಚಿತ್ತಾಪುರ: ಒಂದೇ ಗ್ರಾಮದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಸಿಡಿಲು ಅವಘಡದಲ್ಲಿ ಒಬ್ಬ ಮೃತಪಟ್ಟು, ಆರು ಜನರು ಗಾಯಗೊಂಡಿದ್ದಾರೆ.

ದಿಗ್ಗಾಂವ ಗ್ರಾಮದ ನಿವಾಸಿ ಭೀಮಾಶಂಕರ ಸಾಬಣ್ಣ ನೀಲಹಳ್ಳಿ ಸಿಡಿಲಿ ಬಡಿದು ಅಸ್ವಸ್ಥರಾಗಿದ್ದರು. ಬಳಿಕ ಅವರನ್ನು ಜಿಮ್ಸ್‌ಗೆ ಕರೆದೊಯ್ದಾಗ, ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದರು ಎಂದು ಪೊಲೀಸರು ಹೇಳಿದ್ದಾರೆ.

ಇದೇ ಗ್ರಾಮದಲ್ಲಿ ಸಿಡಿಲು ತಾಗಿ ರಾಘವೇಂದ್ರ ಲಾಲಯ್ಯ, ತಯಾಬ್ ಖುರ್ಷಿದಮಿಯ್ಯಾ, ಬನ್ನು ಗುರುಬಸಪ್ಪ, ಚಿತ್ತಾಪುರ ಪಟ್ಟಣದ ವಿಜಯ ಪ್ರಕಾಶ, ಆನಂದ ಕೃಷ್ಣಯ್ಯ ಮತ್ತು ಮಾರುತಿ ಸಾಬಣ್ಣ ಅವರಿಗೆ ಗಾಯವಾಗಿದೆ. ಚಿಕಿತ್ಸೆಗಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಂದಾಯ ಇಲಾಖೆ ಅಧಿಕಾರಿ, ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT