ಕಲಬುರಗಿ: ಆಳಂದ ತಾಲ್ಲೂಕಿನ ನರೋಣಾ ಗ್ರಾಮದಲ್ಲಿ ವಾರದ ಸಂತೆಯ ಕರವಸೂಲಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಕೋಲಿ ಸಮಾಜದವರ ನಡುವಿನ ಘರ್ಷಣೆ ನಿಯಂತ್ರಿಸಲು ಮುಂದಾದ ಪೊಲೀಸರ ಮೇಲೆ ಕಲ್ಲು, ಇಟ್ಟಿಗೆ ತೂರಿ, ಬಡಿಗೆಯಿಂದ ಹಲ್ಲೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ 28 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 25 ಜನರನ್ನು ಬಂಧಿಸಿದ್ದಾರೆ. ಮೂವರು ಪರಾರಿಯಾಗಿದ್ದಾರೆ.

‘ಶನಿವಾರ ಬೆಳಿಗ್ಗೆ ಗ್ರಾಮದ ಸಂತೆಯಲ್ಲಿ ಕರ ವಸೂಲಿಗೆ ಎರಡು ಕೋಮುಗಳ ನಡುವೆ ಜಗಳ ತಾರಕಕ್ಕೇರಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಭಾಯಿಸಿ, ಠಾಣೆಗೆ ಮರಳಿದ್ದಾರೆ. ಠಾಣೆಯ ಬಳಿ ಬಂದ ಉದ್ರಿಕ್ತರ ನಡುವೆ ಮತ್ತೆ ಜಗಳವಾಗಿ, ಕೈ ಮಿಲಾಸಿದ್ದಾರೆ. ಅವರನ್ನು ಬಿಡಿಸಲು ಮುಂದಾದ ಠಾಣೆಯ ಹೆಡ್ ಕಾನ್ಸ್ಟೆಬಲ್ ಆನಂದ ಮೇತ್ರೆ, ಕಾನ್ಸ್ಟೆಬಲ್ಗಳಾದ ಫಕೀರಪ್ಪ ಮತ್ತು ರೇವಣಸಿದ್ದಪ್ಪ ಅವರ ಮೇಲೆ ಹಲ್ಲೆ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.

ಪರಸ್ಪರ ಹೊಡೆದಾಡಿಕೊಂಡಿದ್ದು ಅಲ್ಲದೇ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಗ್ರಾಮದ ಯಲ್ಲಾಲಿಂಗ ಕ್ಷೇಮಲಿಂಗ ಯಳಸಂಗಿ, ರಾಜಕುಮಾರ ಭೀಮಶಾ ರಾಗಿ, ಮಲ್ಲಿಕಾರ್ಜುನ ಸೈಬಣ್ಣ ಕರಕೂನ, ಕೈಲಾಸ ಅರ್ಜುನ ದೇಕೂನ, ಸಾಗರ ಚಂದ್ರಕಾಂತ ಹಾದಿಮನಿ, ಕೈಲಾಸ ಬಸವರಾಜ ರಾಗಿ, ರವಿಕುಮಾರ ಕುಪ್ಪಣ್ಣ ಜಮಾದಾರ, ಲಕ್ಷ್ಮಿಪುತ್ರ ಕ್ಷೇಮಲಿಂಗ ಯಳಸಂಗಿ, ಕ್ಷೇಮಲಿಂಗ ರಾಮಚಂದ್ರ ಯಳಸಂಗಿ, ಮಾಣಿಕಪ್ಪ ರೇವಣಸಿದ್ದಪ್ಪ ಬೋಧನ್, ಚಂದ್ರಕಾಂತ ಮಲಕಪ್ಪ ದೇಕೂನ, ಪರಶುರಾಮ ಮಲಕಪ್ಪ ರಾಗಿ, ಮಿಥುನ್ ಪೀರಪ್ಪ ರಾಗಿ, ಸಚಿನ್ ಷಣ್ಮುಖಪ್ಪ ಹತ್ತರಕಿ, ಪ್ರಾಣೇಶ ಅಪ್ಪಾರಾಯ ದೇಕೂನ, ಶ್ರೀನಾಥ ಸಿದ್ರಾಮ ಚಿಚಕೋಟೆ, ರಾಜಕುಮಾರ ಮಲ್ಲೇಶಪ್ಪ ಕಡ್ಡಿ, ಕ್ಷೇಮಲಿಂಗ ವೀರಭದ್ರಪ್ಪ ನೀಲೂರ, ಚನ್ನವೀರ ಕ್ಷೇಮಲಿಂಗ ಬೋಧನ, ಪ್ರಶಾಂತ ಶಿವಲಿಂಗಪ್ಪ ನಾಟೀಕಾರ, ಸಂತೋಷ ಶಿವಾನಂದ ಜಮಾದಾರ, ಸಿದ್ದರಾಜ ಸೈಬಣ್ಣ ಯಳಸಂಗಿ, ಮನೋಹರ ಮಲ್ಲಣ್ಣ ಕೊಠಾರಿ, ಈರಣ್ಣ ಸುಂಟನೂರ, ಮಹಾದೇವ ಸವಳಗಿ, ಚಂದ್ರಕಾಂತ ಹಾದಿಮನಿ, ಕ್ಷೇಮಲಿಂಗ ದೇಕೂನ, ಗಣೇಶ ಅಪ್ಪಾರಾವ ವಿರುದ್ಧ ನರೋಣಾ ಪೊಲೀಸ್ ಠಾಣೆ ಪಿಎಸ್ಐ ವಾತ್ಸಲ್ಯ ಅವರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ನರೋಣಾ ಗ್ರಾಮದಲ್ಲಿ ಗಲಾಟೆ ನಡೆಯುತ್ತಿದ್ದಂತೆಯೇ ನಮ್ಮ ಸಿಬ್ಬಂದಿ ಬಿಡಿಸಲು ಹೋಗಿದ್ದಾರೆ. ಮತ್ತೆ ಠಾಣೆಯ ಬಳಿ ಬಂದ ಕೆಲವರು ನಡೆಸಿದ ಘರ್ಷಣೆಯಲ್ಲಿ ಸಿಬ್ಬಂದಿಗೆ ಗಾಯವಾಗಿದೆ. 25 ಜನರನ್ನು ಬಂಧಿಸಿದ್ದೇವೆ.
-ಇಶಾ ಪಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.