ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ | ಪಿಕಾರ್ಡ್ ಬ್ಯಾಂಕ್‌ ಚುನಾವಣೆ: ಬಿಜೆಪಿ ಮಡಿಲಿಗೆ ಆಡಳಿತ

Published 3 ಸೆಪ್ಟೆಂಬರ್ 2023, 15:54 IST
Last Updated 3 ಸೆಪ್ಟೆಂಬರ್ 2023, 15:54 IST
ಅಕ್ಷರ ಗಾತ್ರ

ಚಿಂಚೋಳಿ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರಾಗಿ ಐದು ಜನ ಸದಸ್ಯರು ಭಾನುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು. ಬಿಜೆಪಿಯ ಮೂವರು, ಕಾಂಗ್ರೆಸ್‌ನ ಇಬ್ಬರು ಗೆಲುವಿನ ನಗೆ ಬೀರಿದರು.

ಕೋಡ್ಲಿ ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಹಣಮಂತರಾವ್ ಬಸವಂತರಾವ ಪಾಟೀಲ ಅವರು 2 ಮತಗಳ ಅಂತರದಿಂದ ಜಗನ್ನಾಥ ರೇವಣಸಿದ್ದಪ್ಪ ಅವರನ್ನು ಪರಾಭವಗೊಳಿಸಿದರು.
ಮಿರಿಯಾಣ ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ನಾಗರಡ್ಡಿ ಮುಕುಂದರಡ್ಡಿ ಅವರು 1 ಮತದ ಅಂತರದಿಂದ ಪಂಚಾಕ್ಷರಿ ಬಸಣ್ಣಯ್ಯ ಅವರನ್ನು ಸೋಲಿಸಿದರೆ, ನಿಡಗುಂದಾ ಮಹಿಳಾ ಮೀಸಲು ಸಾಲಗಾರರ ಕ್ಷೇತ್ರದಿಂದ ಚಂದ್ರಕಲಾ ಲಿಂಗಶೆಟ್ಟಿ ತಟ್ಟೆಪಳ್ಳಿ ಅವರು 7 ಮತಗಳ ಅಂತರದಿಂದ ಗೆಲುವು ಸಾಧಿಸಿದರೆ ಸಮೀಪದ ಪ್ರತಿಸ್ಪರ್ಧಿ ನರಸಮ್ಮ ಮಲ್ಲಪ್ಪ 33 ಮತಗಳು ಪಡೆದಿದ್ದಾರೆ.

ಚಿಂಚೋಳಿ ಸಾಲಗಾರರ (ಹಿಂದುಳಿದ ವರ್ಗ ‘ಬ’) ಕ್ಷೇತ್ರದಿಂದ ದೇಗಲಮಡಿಯ ಶರಣಗೌಡ ಶಂಕ್ರಪ್ಪ ಮುದ್ದಾ ಅವರು 5 ಮತಗಳ ಅಂತರದಿಂದ ಎದುರಾಳಿ ಶ್ರೀನಿವಾಸ ಬಂಡಿ ಅವರನ್ನು ಮಣಿಸಿದರು.
ಚಿಂಚೋಳಿ ತಾಲ್ಲೂಕು ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಶ್ರೀಹರಿ ಕಿಶನರಾವ್ ಕಾಟಾಪುರ ಶಬ್ಬೀರ್ ಅಹಮದ್ ಅವರನ್ನು 33 ಮತಗಳಿಂದ ಮಣಿಸಿದರು.

ಆಡಳಿತ ಮಂಡಳಿಯ ಒಟ್ಟು 14 ಸದಸ್ಯ ಸ್ಥಾನಗಳಲ್ಲಿ 9 ಮಂದಿ ಅವಿರೋಧ ಆಯ್ಕೆಯಾಗಿದ್ದರು. 14ರಲ್ಲಿ 8 ಸ್ಥಾನ ಗಳಿಸುವ ಮೂಲಕ ಬಿಜೆಪಿ ತನ್ನ ಹಿಡಿತ ಸಾಬೀತುಪಡಿಸಿದೆ.

ವಿಜಯೋತ್ಸವ

ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಚುನಾಯಿತ ಹಾಗೂ ಅವಿರೋಧ ಆಯ್ಕೆಯಾದ ಸದಸ್ಯರಿಗೆ ಡಿಸಿಸಿ ಬ್ಯಾಂಕ್‌ನ ನಿರ್ದೆಶಕ ಗೌತಮ ಪಾಟೀಲ ಸನ್ಮಾನಿಸಿ ಅಭಿನಂದಿಸಿದರು. ಜಗದೀಶಸಿಂಗ್ ಠಾಕೂರ, ಸಂತೋಷ ಗಡಂತಿ, ಗೋಪಾಲರಾವ್ ಕಟ್ಟಿಮನಿ, ಸುಭಾಷ ಸೀಳಿನ್, ಉಮೇಶ ಬೆಳಕೇರಿ, ಉಮಾ ಪಾಟೀಲ, ರವಿಕಾಂತ ಹುಸೇಬಾಯಿ, ಅನಿಲ ಜಮಾದಾರ, ಭೀಮರಾವ್ ರಾಠೋಡ್, ಆರ್ ಗಣಪತರಾವ್, ಮೋಹನಸಿಂಗ (ಭವಾನಿ ಸಿಂಗ್) ಠಾಕೂರ, ಶ್ರೀಕಾಂತ ಪಿಟ್ಟಲ್, ಕೆ.ಎಂ ಬಾರಿ, ಮಲ್ಲಿಕಾರ್ಜುನ ಬೆಳಕೇರಿ, ಗಿರಿರಾಜ ನಾಟಿಕಾರ, ಕಾಶಿನಾಥ ನಾಟಿಕಾರ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT