ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಸದ್ಯಕ್ಕೆ ಹುದ್ದೆ ಖಾಲಿಯಿರುವ ಶಾಲೆಗಳ ಕ್ಯಾಂಪಸ್‌ನಲ್ಲಿರುವ ಇನ್ನೊಬ್ಬ ಶಿಕ್ಷಕ ಅಥವಾ ಬೇರೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ
ಸೂರ್ಯಕಾಂತ ಮದಾನೆ, ಡಿಡಿಪಿಐ, ಕಲಬುರಗಿ
ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳ ಭರ್ತಿ ಮಾಡಿಕೊಳ್ಳಬೇಕು. ವೃಂದ ಮತ್ತು ನೇಮಕಾತಿಗಳಲ್ಲಿ ಬದಲಾವಣೆ ಆಗಬೇಕು. ನಮಗೂ ಮುಖ್ಯಶಿಕ್ಷಕ ಹುದ್ದೆಗೆ ಬಡ್ತಿ ಅವಕಾಶ ನೀಡಬೇಕು
ರಾಜು ದೊಡ್ಡಮನಿ,ಜಿಲ್ಲಾ ಅಧ್ಯಕ್ಷ, ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘ
ನನ್ನ ಮಗಳು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದು, ಮಕ್ಕಳ ಮಾನಸಿಕ ಬೆಳವಣಿಗೆ ಜೊತೆ ದೈಹಿಕ ಶಿಕ್ಷಣ ಸಹ ಅವಶ್ಯಕತೆ ಇದೆ. ಆದ್ದರಿಂದ ಕೂಡಲೇ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಸರ್ಕಾರ ಆದ್ಯತೆ ನೀಡಬೇಕು
ಮಲ್ಲಣ್ಣ ಗಂಜಿ, ಲಾಡ್ಲಾಪುರ ನಿವಾಸಿ
ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಮಕ್ಕಳ ದೈಹಿಕ ಚಟುವಟಿಕೆ, ಆಟೋಟ ಕ್ಷೀಣಿಸಿದ್ದು ಮೊಬೈಲ್ ಸೆಳೆತ ಹೆಚ್ಚಾಗಿದೆ
ಪ್ರೇಮನಾಥ ಬಿರಾದಾರ-ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಇರಗಪಳ್ಳಿ ತಾ. ಚಿಂಚೋಳಿ
ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ನಡೆಯುತ್ತಿಲ್ಲ. ಅತಿಥಿ ಶಿಕ್ಷಕ ಹುದ್ದೆಗೂ ಅವಕಾಶವಿಲ್ಲ. ಇದು ನಿರುದ್ಯೋಗ ಹೆಚ್ಚಳಕ್ಕೂ ಕಾರಣವಾಗುತ್ತಿದೆ