ಮಂಗಳವಾರ, ಆಗಸ್ಟ್ 3, 2021
26 °C

ಸರಣಿ ಕಳ್ಳತನ: ₹ 8 ಲಕ್ಷ ಮೌಲ್ಯದ ಸಾಮಗ್ರಿ ದೋಚಿ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ತಾಲ್ಲೂಕಿನ ಮಾದನ ಹಿಪ್ಪರಗಾ ಗ್ರಾಮದಲ್ಲಿ ಬುಧವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ. ಬೈಕ್‌ ಸೇರಿದಂತೆ ಅಂದಾಜು ₹ 8 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಕಳ್ಳತನ ಮಾಡಲಾಗಿದೆ.

ಗ್ರಾಮದ ಶ್ರೀಸೋಮೇಶ್ವರ ಹಣಕಾಸು ಸಂಸ್ಥೆಯ ಬಾಗಿಲು ಬೀಗ ಒಡೆದು ₹ 4.70 ಲಕ್ಷ ನಗದು ದೋಚಲಾಗಿದೆ. ಚಂದ್ರಕಲಾ ನಿಂಗಪ್ಪ ಗಡ್ಡದ ಅವರ ಮನೆಗೆ ನುಗ್ಗಿ ಮನೆಯ ಅಲ್ಮೇರಾ ಒಡೆದು ₹ 1.5 ಲಕ್ಷ ನಗದು, 30 ಗ್ರಾಂ ಚಿನ್ನ ಕಳವು ಮಾಡಲಾಗಿದೆ. ಸಮೀಪದಲ್ಲಿನ ಶಬ್ಬಿರ್‌ ಶೇಖ್ ಹಾರಕೂಡ ಅವರು ಮನೆಯ ಮುಂದೆ ನಿಲ್ಲಿಸಿದ್ದ ₹ 1.70 ಲಕ್ಷ ಮೌಲ್ಯದ ಬೈಕ್‌ ಕದಿಯಲಾಗಿದೆ.

ಸ್ಥಳಕ್ಕೆ ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಮಂಜುನಾಥ, ಮಾದನ ಹಿಪ್ಪರಗಾ ಪಿಎಸ್ಐ ಮಲ್ಲಣ್ಣಾ ಯಲಗೋಡ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಶೋಧ ಮಾಡಲಾಗಿದೆ.

ಸರಣಿ ಕಳ್ಳತನ ಪ್ರಕರಣ ಗಡಿಗ್ರಾಮದ ಜನರಲ್ಲಿ ಆತಂಕವನ್ನುಂಟು ಮಾಡಿದ್ದು ಮಾದನ ಹಿಪ್ಪರಗಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.