ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ 45 ಕೋರ್ಸ್‌ಗಳ ಪ್ರವೇಶಕ್ಕೆ 9,909 ಅರ್ಜಿ!

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ
Last Updated 29 ಡಿಸೆಂಬರ್ 2021, 4:26 IST
ಅಕ್ಷರ ಗಾತ್ರ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ 2021–22ನೇ ಸಾಲಿನಲ್ಲಿ ವಿ.ವಿ.ಯ 45 ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಗುಲಬರ್ಗಾ ವಿ.ವಿ. ಮುಖ್ಯ ಕ್ಯಾಂಪಸ್ ಹಾಗೂ ವಿವಿಧ ಸರ್ಕಾರಿ ಹಾಗು ಖಾಸಗಿ ಕಾಲೇಜುಗಳಲ್ಲಿ ಒಟ್ಟು 9909 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.30–31ರಂದು ಪ್ರವೇಶ ಪ್ರಕ್ರಿಯೆ ನಡೆಯಲಿದೆ. ವಿವಿಧ ಸ್ನಾತಕೋತ್ತರ ಹಾಗೂ ಪಿ.ಜಿ. ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಾತಿಗಾಗಿ ಡಿ.18ರವರೆಗೆ ಅಭ್ಯರ್ಥಿಗಳಿಂದ ಆನ್‌ಲೈನ್ ನಲ್ಲಿ ಅರ್ಜಿ ಸ್ವೀಕರಿಸಲಾಗಿದೆ. ಮುಖ್ಯ ಆವರಣ ಹಾಗೂ ಸ್ನಾತಕೋತ್ತರ ಕೇಂದ್ರದ 37 ಅಧ್ಯಯನ ವಿಭಾಗಗಳ ಒಟ್ಟು 45 ಕೋರ್ಸ್‌ಗಳ 2,133 ಸೀಟ್‌ಗಳಿಗಾಗಿ ಸುಮಾರು 5667 ಅರ್ಜಿ ಗಳು ಸ್ವೀಕೃತವಾ ಗಿದ್ದು, ಸರ್ಕಾರಿ ಹಾಗೂ ಖಾಸಗಿ ಕಾಲೇಜು ಗಳಲ್ಲಿ ವಿವಿಧ ಸ್ನಾತ ಕೋತ್ತರ ಕೋ ರ್ಸುಗಳ 4,242 ಸೀಟುಗಳಿಗಾಗಿ 4,892 ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.

ವಿ.ವಿ. ವೆಬ್‌ಸೈಟ್‌ನಲ್ಲಿ ಮೆರಿಟ್ ಲಿಸ್ಟ್ ಪ್ರಕಟಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿ ಗಳ ಪಟ್ಟಿಯನ್ನು ಡಿ 29ರಂದು ಆಯಾ ವಿಭಾ ಗಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುತ್ತದೆ. ಜ 1ರಂದು ಖಾಲಿ ಉಳಿದ ಸೀಟುಗಳ ವಿವರವನ್ನು ಪ್ರಕಟಿಸಲಾಗುತ್ತದೆ. ಜ 3ರಂದು ಖಾಲಿ ಉಳಿದ ಸೀಟುಗಳು, ವಿಶೇಷ ವರ್ಗಗಳ ಪ್ರವೇಶಾತಿ ಮತ್ತು ಒಬ್ಬ ವಿದ್ಯಾರ್ಥಿ ಎರಡು ವಿಭಾಗಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಿದ್ದರೆ, ಅದರ ವರ್ಗಾವಣೆಗಾಗಿ ಕೌನ್ಸೆಲಿಂಗ್ ಪ್ರಕ್ರಿಯೆಯು ವಿ.ವಿ.ಯ ಮುಖ್ಯ ಆವರಣದಲ್ಲೇ ನಡೆಯಲಿದೆ. ಸ್ನಾತಕೋತ್ತರ ಕೇಂದ್ರಗಳ ವಿದ್ಯಾರ್ಥಿಗಳು ಕೂಡ ವಿ.ವಿ. ಆವರಣದಲ್ಲಿ ನಡೆಯುವ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬೇಕೆಂದು ಎಂದರು.

ಜ 4ರಂದು ಸರ್ಕಾರಿ ಕಾಲೇಜುಗಳಲ್ಲಿ ಖಾಲಿ ಉಳಿದ ಸೀಟುಗಳ ಕೌನ್ಸೆಲಿಂಗ್ ಪ್ರಕ್ರಿಯೆ ಮತ್ತು ಜ 5ರಂದು ಖಾಸಗಿ ಕಾಲೇಜುಗಳಲ್ಲಿ ವಿಶ್ವವಿದ್ಯಾಲಯದ ಕೋಟಾದ ಸೀಟುಗಳಿಗೆ ಪ್ರವೇಶ ಪ್ರಕ್ರಿಯೆ ಜರುಗಲಿದೆ. ಜ 6ರಂದು ವಿಶ್ವವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರಗಳ ಸ್ವಯಂ ಅವಲಂಬಿತ ಯೋಜನೆ (ಎಸ್‌ಎಸ್‌ಎಸ್) ಅಡಿಯಲ್ಲಿ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ. ವಿದ್ಯಾರ್ಥಿಗಳು ನಿಗದಿತ ಶುಲ್ಕ ಮತ್ತು ಮೂಲ ದಾಖಲಾತಿಗಳನ್ನು ತರಬೇಕು ಎಂದು ಹೇಳಿದರು.

ಮಾಹಿತಿಗೆ ಪ್ರೊ.ಎನ್.ಬಿ.ನಡುವಿನಮನಿ (ಮೊ.ಸಂ.94486 50611), ಪ್ರೊ.ಸಿ.ಎಸ್.ಬಸವರಾಜ (ಮೊ.ಸಂ.94496 18799) ಅವರನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು.

ಎರಡು ಘಟಿಕೋತ್ಸವ ಒಂದೇ ದಿನ: 2019–20ನೇ ಸಾಲಿನ 39ನೇ ಘಟಿಕೋತ್ಸವ ಹಾಗೂ 2020–21ನೇ ಸಾಲಿನ 40ನೇ ಘಟಿಕೋತ್ಸವವನ್ನು ಫೆಬ್ರವರಿಯಲ್ಲಿ ಒಟ್ಟಿಗೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವ ಗೌರವ ಡಾಕ್ಟರೇಟ್‌ಗೆ ಇದುವರೆಗೆ 17 ಅರ್ಜಿಗಳು ಬಂದಿದೆ ಎಂದರು.

ಖಾದಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಘಟಿಕೋತ್ಸವದಲ್ಲಿ ಖಾದಿ ದಿರಿಸುಗಳಿಗೆ ಆದ್ಯತೆ ನೀಡಲಾಗುತ್ತದೆ. ರಾಜ್ಯಪಾಲರ ಗೌನ್, ಕುಲಪತಿ, ವಿವಿಧ ನಿಕಾಯಗಳ ಡೀನರು ಮತ್ತು ವಿದ್ಯಾರ್ಥಿಗಳ ಗೌನ್‌ಗಳು ಖಾದಿಯ ಬೇರೆ–ಬೇರೆ ಬಣ್ಣಗಳಲ್ಲಿ ಇರಲಿವೆ ಎಂದು ವಿವರಿಸಿದರು.

ಮೌಲ್ಯಮಾಪನ ಕುಲಸಚಿವ ಪ್ರೊ. ಸೋನರ ನಂದಪ್ಪ ಡಿ. ಅವರು ಈ ವೇಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT