ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ರಾಷ್ಟ್ರೀಯ ಹೆದ್ದಾರಿ ಮೇಲೆ ಬಿದ್ದ ಕ್ರೇನ್!

Published 1 ಆಗಸ್ಟ್ 2023, 7:52 IST
Last Updated 1 ಆಗಸ್ಟ್ 2023, 7:52 IST
ಅಕ್ಷರ ಗಾತ್ರ

ಶಹಾಬಾದ್: ತಾಲ್ಲೂಕಿನ ಶಂಕರವಾಡಿ ಗ್ರಾಮದ ಹತ್ತಿರದ ಕಾಗಿಣಾ ನದಿಗೆ ನಿರ್ಮಿಸುತ್ತಿರುವ ಸೇತುವೆಗೆ ಕಾಂಕ್ರೀಟ್ ಸ್ಲ್ಯಾಬ್ ಹಾಕುತ್ತಿದ್ದ ದೊಡ್ಡ ಗಾತ್ರದ ಕ್ರೇನ್ ಸ್ಲ್ಯಾಬ್‌ನೊಂದಿಗೆ ಆಯತಪ್ಪಿ ಕಲಬುರಗಿ–ಯಾದಗಿರಿ ರಾಷ್ಟ್ರೀಯ ಹೆದ್ದಾರಿ ಮೇಲೆ ಬಿದ್ದ ಘಟನೆ ಸೋಮವಾರ ಸಂಜೆ ನಡೆದಿದೆ.

ಕಲಬುರಗಿ –ಯಾದಗಿರಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶಹಾಬಾದ್‌ ಸಮೀಪದ ಕಾಗಿಣಾ ನದಿಗೆ ಅಡ್ಡಲಾಗಿ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ವತಿಯಿಂದ ಸುಮಾರು ₹ 65.8 ಕೋಟಿ ಅನುದಾನದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಹಳೆ ಸೇತುವೆಯ ಪಕ್ಕದಲ್ಲಿಯೇ ನೂತನ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಭದ್ರ ಬುನಾದಿ ಹಾಕಿ ಬೃಹತ್ ಗಾತ್ರದ ಕಾಲಂಗಳನ್ನು ಹಾಕಲಾಗಿದೆ. ಅದರ ಮೇಲೆ ದೊಡ್ಡ ಗಾತ್ರದ ಕಾಂಕ್ರೀಟ್ ಸ್ಲ್ಯಾಬ್ ಕೂಡಿಸಲು ಕ್ರೇನ್ ಬಳಕೆ ಮಾಡುವಾಗ ಬೆಲ್ಟ್ ಕಟ್ ಆಗಿದ್ದಲ್ಲದೇ ಭಾರ ತಾಳಲಾರದೇ ಆಯತಪ್ಪಿ ಕ್ರೇನ್ ಹಾಗೂ ಕಾಂಕ್ರೀಟ್ ಸ್ಲ್ಯಾಬ್ ಪಕ್ಕದ ರಾಷ್ಟ್ರೀಯ ಹೆದ್ದಾರಿಯ ಮೇಲೆ ಬಿದ್ದಿದೆ.

ಯಾವುದೇ ಹಾನಿಯಾಗಿಲ್ಲ. ಕಾಂಕ್ರೀಟ್ ಸ್ಲ್ಯಾಬ್ ಕೂಡಿಸುವಾಗ ಮುಂಜಾಗೃತೆಯಾಗಿ ವಾಹನ ಸಂಚಾರ ನಿಲ್ಲಿಸಿ ಕಾಮಗಾರಿ ಮಾಡಲಾಗುತ್ತಿತ್ತು ಎನ್ನಲಾಗಿದೆ. ಇದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಕಲಬುರಗಿ–ಯಾದಗಿರಿ, ಶಹಾಬಾದ್‌ ವಾಡಿ-ಚಿತ್ತಾಪೂರ ರಸ್ತೆ ಸಂಚಾರ್ ಸಂಪರ್ಣ ಬಂದ್ ಆಗಿದೆ.

ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಲು ಮುಂದಾಗಿದ್ದಾರೆ. ಬೃಹತ್ ಗಾತ್ರದ ಕಾಂಕ್ರೀಟ್ ಸ್ಲ್ಯಾಬ್ ರಸ್ತೆ ಮೇಲೆ ಬಿದ್ದಿದ್ದರಿಂದ ಅದನ್ನು ತೆಗೆಯಲು ಸುಮಾರು ನಾಲ್ಕು ಗಂಟೆ ಆಗಬಹುದು ಅಥವಾ ಬೆಳಿಗ್ಗೆವರೆಗೆ ತೆಗೆಯಬಹುದು ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT