ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಸಿವೆಯಲ್ಲಿ ಸಮೃದ್ಧಿ ಕಂಡ ರೈತ: ಅಂಬಲಗಾದ ಬಸವರಾಜ ಕೊಳ್ಳೂರ ಹೊಸ ಪ್ರಯೋಗ

ಅಂಬಲಗಾದ ಬಸವರಾಜ ಕೊಳ್ಳೂರ ಹೊಸ ಪ್ರಯೋಗ
Published : 17 ಜನವರಿ 2023, 2:34 IST
ಫಾಲೋ ಮಾಡಿ
Comments

ಕಮಲಾಪುರ: ಏಕರೂಪದ ಬೆಳೆಯಿಂ ದಾಗಿ ನೆಟೆರೋಗ ಸೇರಿದಂತೆ ಮತ್ತಿತರ ಬಾಧೆಗೆ ಒಳಗಾಗಿ ಬೆಳೆ ಹಾನಿಯುಂ ಟಾಗುತ್ತಿದ್ದು, ಬೆಳೆ ಪರಿವರ್ತೆನೆಗಾಗಿ ಕಮಲಾಪುರ ತಾಲ್ಲೂಕಿನ ಅಂಬಲಗಿ ಬಸವರಾಜ ಕೊಳ್ಳೂರ ಸಾಸಿವೆ ಬಿತ್ತನೆ ಮಾಡಿದ್ದು ಸದ್ಯ ಫಸಲು ಸಮೃದ್ಧವಾಗಿ ಬೆಳೆದು ನಿಂತಿದೆ.

ಸಾಂಪ್ರದಾಯಿಕ ಬೆಳೆ ನೆಟೆ, ಮುಟುರು, ಹಳದಿ ರೋಗ, ಗೊರಲಿ, ಕೀಟ ಸೇರಿದಂತೆ ಒಂದಿಲ್ಲೊಂದು ಬಾಧೆಯಿಂದ ಹಾನಿಗೊಳಗಾಗುತ್ತಿದೆ. ಮನೆ ಬಳಕೆಗಾಗಿ ಗೋಧಿ, ಮತ್ತಿತರ ಬೆಳಗಳಲ್ಲಿ ಸ್ವಲ್ಪ ಸಾಸಿವೆ ಕಾಳು ಚೆಲ್ಲುತ್ತಿದ್ದೆವು. ಅದು ಎರಡ್ಮೂರು ಶೇರು ಬರುತ್ತಿತ್ತು. ಇದನ್ನೆ ಹೆಚ್ಚು ಪ್ರದೇಶದಲ್ಲಿ ಬೆಳೆದರೆ ಲಾಭ ಪಡೆಯಬಹುದು ಎಂಬ ಯೋಚನೆ ಹೊಳೆಯಿತು. ಮಹಾಗಾಂವ ಕೃಷಿ ಅಧಿಕಾರಿ ವಿಜಯಲಕ್ಷ್ಮೀ ಜೈನಾಪುರ, ಸಹಾಯಕ ನಿರ್ದೇಶಕ ಚಂದ್ರಕಾಂತ ಜೀವಣಗಿ ಅವರ ಜೊತೆ ಚರ್ಚಿಸಿ ಸಲಹೆ ಪಡೆದೆ.

ಉತ್ತರ ಪ್ರದೇಶದಿಂದ ಪಾಯಿನಿರ್‌ ಕಂಪನಿಯ ಬೀಜ ಆನ್‌ಲೈನ್‌ ಮೂಲಕ ಆಮದು ಮಾಡಿಕೊಂಡು, ಸುಮಾರು 3 ಎಕರೆ ಜಮೀನಿನಲ್ಲಿ ಪ್ರತಿ ಎಕರೆಗೆ 1 ಕೆ.ಜಿ. ಬೀಜ ಬಿತ್ತನೆ ಮಾಡಿದ್ದೇವೆ. ಕೆಲ ದಿನಗಳ ನಂತರ ಸ್ವಲ್ಪ ಹೇನು ಬಾಧಿ ಬಾಧಿಸಿತ್ತು. ರೈತ ಸಂಪರ್ಕ ಕೇಂದ್ರದಿಂದ ತಂದ ಬೇವಿನೆಣ್ಣೆ ಹಾಗೂ ಪ್ರೊಪೊನ್ನೊಪಾಸ್‌ ಸಿಂಪರಣೆ ಮಾಡಿದ್ದೇವೆ.

ಸಾಸಿವೆ ಹಿಂಗಾರು ಬೆಳೆಯಾಗಿದ್ದು ಅಕ್ಟೋಬರ್ ಕೊನೆಯ ವಾರದಲ್ಲಿ ಬಿತ್ತನೆ ಮಾಡಿದ್ದೇವೆ. ಫೆಬ್ರುವರಿ ಮೊದಲ ವಾರದಲ್ಲಿ ರಾಶಿಯಾಗಲಿದೆ. ಖುಷ್ಕಿ ಜಮೀನಲ್ಲೂ ಸಾಸಿವೆ ಬೆಳೆಯಬಹುದು ಒಂದೆರಡು ಬಾರಿ ನೀರುಣಿಸಿದರೂ ಹೆಚ್ಚು ಇಳುವರಿ ಬರುತ್ತದೆ.

ಸುಮಾರು 15 ಕ್ವಿಂಟಲ್‌ ಇಳುವರಿ ಬರುವ ನಿರೀಕ್ಷೆ ಇದೆ. ಪ್ರತಿ ಕ್ವಿಂಟಲ್‌ಗೆ ₹ 7 ಸಾವಿರ ದರ ಇದೆ. ಮಹಾರಾಷ್ಟ್ರದ ಲಾತೂರನಲ್ಲಿ ಮಾರುಕಟ್ಟೆ ಇದೆ ಎಂದು ಬಸವರಾಜ ಕೊಳ್ಳೂರು ತಿಳಿಸಿದರು. ಹೆಚ್ಚಿನ ಮಾಹಿತಿಗೆ 96322–57480 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT