ಕಲಬುರಗಿ: ಇಲ್ಲಿನ ಗುಬ್ಬಿ ಕಾಲೊನಿಯಲ್ಲಿರುವ ಲೋಕೋಪಯೋಗಿ ಇಲಾಖೆ ಜೇವರ್ಗಿ ಉಪ ವಿಭಾಗದ ಕಿರಿಯ ಎಂಜಿನಿಯರ್ ಶಾಂತಗೌಡ ಬಿರಾದಾರ ಅವರ ಮನೆಯ ಪೈಪ್ ಕತ್ತರಿಸಿ ಎಸಿಬಿ ಅಧಿಕಾರಿಗಳು ₹ 5 ಲಕ್ಷಕ್ಕೂ ಅಧಿಕ ಹಣದ ಕಟ್ಟುಗಳನ್ನು ಹೊರ ತೆಗೆದಿದ್ದಾರೆ.

ಬೆಳಿಗ್ಗೆ 7ಕ್ಕೆ ಶಾಂತಗೌಡ ಅವರಿಗೆ ಸೇರಿದ ಗುಬ್ಬಿ ಕಾಲೊನಿ ಮನೆ, ಯಡ್ರಾಮಿ ತಾಲ್ಲೂಕಿನ ಹಂಗರಗಾ (ಬಿ) ಗ್ರಾಮದಲ್ಲಿನ ತೋಟದ ಮನೆ ಹಾಗೂ ಜೇವರ್ಗಿ ಲೋಕೋಪಯೋಗಿ ಕಚೇರಿ ಮೇಲೆ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಅಧಿಕಾರಿಗಳ ತಂಡ ಎಸಿಬಿ ಈಶಾನ್ಯ ವಲಯದ ಎಸ್ಪಿ ಮಹೇಶ ಮೇಘಣ್ಣವರ ನೇತೃತ್ವದಲ್ಲಿ ದಾಳಿ ನಡೆಸಿದೆ.

ಎಸಿಬಿ ದಾಳಿ: ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೆಶಪ್ಪ ಮನೆಯಲ್ಲಿ 7ಕೆ.ಜಿ ಚಿನ್ನ!

ಗುಬ್ಬಿ ಕಾಲೊನಿ ಮನೆಯ ತಿಜೋರಿ, ಬೆಡ್ ರೂಮ್ ಜಾಲಾಡಿದ ತಂಡಕ್ಕೆ ಪ್ಲಂಬಿಂಗ್ ಪೈಪ್‌ನಲ್ಲಿ ಹಣ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಪ್ಲಂಬರ್ ಕರೆದು ಪೈಪ್ ಕೊರೆಸಿದಾಗ ₹ 500 ಮುಖಬೆಲೆಯ ನೋಟುಗಳು ಸಿಕ್ಕಿವೆ. ಇಲ್ಲಿಯವರೆಗೆ ₹ 40 ಲಕ್ಷ ನಗದು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲಬುರಗಿ: ಜೆ.ಇ. ಶಾಂತಗೌಡ ಬಿರಾದಾರ ಮನೆಗಳ ಮೇಲೆ ಎಸಿಬಿ ದಾಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.