ಸಿ.ಎಂ ಸ್ವಾಗತ ಕಮಾನಿನಲ್ಲಿ ಆರೋಪಿಗಳ ಚಿತ್ರ

ಕಲಬುರಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನವರಿ 24ರಂದು ಭಾಗವಹಿಸುವ ದೇವಲ ಗಾಣಗಾಪುರದ ಕಾರ್ಯಕ್ರಮದ ಸ್ವಾಗತ ಕಮಾನಿನಲ್ಲಿ, ಪಿಎಸ್‌ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿಗಳಾದ ಅಫಜಲಪುರ ತಾಲ್ಲೂಕಿನ ಆರ್.ಡಿ. ಪಾಟೀಲ ಮತ್ತು ಆತನ ಅಣ್ಣ ಮಹಾಂತೇಶ ಪಾಟೀಲ ಅವರ ಚಿತ್ರಗಳನ್ನು ಹಾಕಲಾಗಿದೆ.
ಕೋಲಿ ಸಮಾಜದ ಹಿರಿಯ ಧುರೀಣರಾಗಿದ್ದ ದಿ. ವಿಠ್ಠಲ ಹೇರೂರ ಅವರ ಕಂಚಿನ ಮೂರ್ತಿ ಅನಾವರಣ ಕಾರ್ಯಕ್ರಮ ದೇವಲ ಗಾಣಗಾಪುರದಲ್ಲಿ ನಡೆಯಲಿದೆ. ಮುಖ್ಯಮಂತ್ರಿ, ಸಚಿವರು, ಸಂಸದರು ಮತ್ತು ಶಾಸಕರು ಭಾಗವಹಿಸುವರು.
ದೇವಲ ಗಾಣಗಾಪುರ ಗ್ರಾಮವನ್ನು ಪ್ರವೇಶಿಸುವ ಕೆಲವೆಡೆ ಸ್ವಾಗತ ಕಮಾನು, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿರುವ ಆರ್.ಡಿ. ಪಾಟೀಲ ಸೂಚನೆ ಮೇರೆಗೆ ಈ ಸ್ವಾಗತ ಕಮಾನು ಅಳವಡಿಸಲಾಗಿದೆ ಎನ್ನಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.