21ನೇ ಶತಮಾನದಲ್ಲಿ ಗಾಂಧಿ ಮಾರ್ಗದಲ್ಲಿ ಯುವಕರು,ಕಸ್ತೂರಬಾ ಗಾಂಧಿ ಮತ್ತು ಸ್ತ್ರೀಪರ ಚಿಂತನೆ. ಜಗತ್ತಿನ ನಾಯಕರ ಮೇಲೆ ಗಾಂಧಿ ಪ್ರಭಾವ ಈ ಕುರಿತು ಮೂರು ಗೋಷ್ಠಿ ಜರುಗುಲಿವೆ. ಚಿಂತಕರಾದ ನಿಕೇತರಾಜ್ ಮೌರ್ಯ, ಪುಣೆಯ ಬುಜಂಗರಾವ ಬೋಬಡೆ, ವಿಜಯಪುರದ ಗಾಂಧೀಜಿ ಫೌಂಡೇಷನ್ ಅಧ್ಯಕ್ಷ ನೇತಾಜಿ ಗಾಂಧಿ ಹಾಗೂ ಬೆಂಗಳೂರಿನ ಅಬಿದಾ ಬೇಗಂ ಅವರು ಉಪನ್ಯಾಸ ಮಂಡಿಸಿಲಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಎನ್ ಜಿ ಕಣ್ಣೂರು, ಪತ್ರಾಗಾರ ಇಲಾಖೆ ವಿಭಾಗೀಯ ಸಹಾಯಕ ನಿರ್ದೇಶಕ ವೀರಶೆಟ್ಟಿ ಗಾರಂಪಳ್ಳಿ ಪಾಲ್ಗೊಳ್ಳಲಿದ್ದಾರೆ.