ಬುಧವಾರ, ಸೆಪ್ಟೆಂಬರ್ 22, 2021
23 °C
ಜು 25ರಂದು ಕೆ–ಸೆಟ್‌ ಪರೀಕ್ಷೆ ನಡೆಸಲು ಗುಲಬರ್ಗಾ ವಿ.ವಿ. ಸಕಲ ಸಿದ್ಧತೆ

ಜು.25ರಂದು ಕೆ–ಸೆಟ್‌: ಪರೀಕ್ಷೆ ಬರೆಯಲಿದ್ದಾರೆ 10,860 ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೊರೊನಾ ಪ್ರಯುಕ್ತ ಹಲವು ಬಾರಿ ಮುಂದೂಡಲಾಗಿದ್ದ ಮೈಸೂರು ವಿ.ವಿ. ನಡೆಸಲು ಕೆ ಸೆಟ್ (ಕರ್ನಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ) ಪರೀಕ್ಷೆಯು ಇದೇ 25ರಂದು ಗುಲಬರ್ಗಾ ವಿ.ವಿ. ಸಹಯೋಗದಲ್ಲಿ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿದೆ.

ಈ ಕುರಿತು ಮಾಹಿತಿ ನೀಡಿದ ಕೆ–ಸೆಟ್ ಪರೀಕ್ಷಾ ಕೇಂದ್ರದ ನೋಡಲ್ ಅಧಿಕಾರಿ ಪ್ರೊ. ಚಂದ್ರಕಾತ ಕೆಳಮನಿ, ಪರೀಕ್ಷೆಯು ಒಟ್ಟು 41 ವಿಷಯಗಳಿಗಾಗಿ ನಡೆಯಲಿದ್ದು, ವಿದ್ಯಾರ್ಥಿಗಳು ತಮ್ಮ ನಿಖರವಾದ ಪರೀಕ್ಷಾ ಕೇಂದ್ರ ಹಾಗೂ ಪರೀಕ್ಷಾ ಕೊಠಡಿಗಳ ಮಾಹಿತಿಗಾಗಿ https://gug.ac.in/ವೆಬ್‌ಸೈಟ್ ಅಥವಾ http//kset.uni_mysore.ac.in 2021 ಸಂಪರ್ಕಿಸಬಹುದು. ಗುಲಬರ್ಗಾ ವಿಶ್ವವಿದ್ಯಾಲಯವು ಅಭ್ಯರ್ಥಿಗಳಿಗಾಗಿ ಲಿಂಕ್ ಸಿದ್ದಪಡಿಸಿದ್ದು https://kset.gukonline.in ನಲ್ಲಿ ಕೂಡ ಉಪಕೇಂದ್ರ ಹಾಗೂ ಬ್ಲಾಕ್ ನಂಬರ್‌ನ ಮಾಹಿತಿಯನ್ನು ಪಡೆಯಬಹುದು ಎಂದಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 10,860 ಅಭ್ಯರ್ಥಿಗಳು ಈ ಸಲ ಕೆ-ಸೆಟ್ ಪರೀಕ್ಷೆಗೆ ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಇತರೆ ಉಪಕೇಂದ್ರಗಳಲ್ಲಿ ಹಾಜರಾಗಲಿದ್ದಾರೆ. ಒಟ್ಟು ವಿದ್ಯಾರ್ಥಿಗಳ ಪೈಕಿ ಅತೀ ಹೆಚ್ಚಿನ 1324 ವಿದ್ಯಾರ್ಥಿಗಳು ಕನ್ನಡ ಹಾಗೂ ಒಬ್ಬ ವಿದ್ಯಾರ್ಥಿ ಮಾತ್ರ ಜನಪದ ಸಾಹಿತ್ಯ ವಿಷಯದಲ್ಲಿ ಪರೀಕ್ಷೆ  ಬರೆಯಲಿದ್ದಾರೆ.

ಗುಲಬರ್ಗಾ ವಿ.ವಿ. ಆವರಣ ಸೇರಿದಂತೆ ನಗರದ 16 ಉಪಕೇಂದ್ರಗಳಲ್ಲಿ ಪರೀಕ್ಷೆ ಜರುಗಲಿದೆ. ಸರ್ಕಾರಿ ಪದವಿ ಮಹಾವಿದ್ಯಾಲಯ, ನೂತನ ಪದವಿ ಮಹಾವಿದ್ಯಾಲಯ, ವಿ.ಜಿ. ಮಹಿಳಾ ಮಹಾವಿದ್ಯಾಲಯ, ಎಸ್.ಬಿ. ವಿಜ್ಞಾನ ಮಹಾವಿದ್ಯಾಲಯ, ಎಸ್.ಬಿ. ಕಲಾ ಮಹಾವಿದ್ಯಾಲಯ, ಎಸ್.ಬಿ. ವಾಣಿಜ್ಯ ಮಹಾವಿದ್ಯಾಲಯ, ಎಸ್.ಬಿ. ಶಿಕ್ಷಣ ಸಂಸ್ಥೆ, ಗೋದುತಾಯಿ ಎಂಜಿನಿಯರಿಂಗ್ ಕಾಲೇಜು, ಎನ್.ವಿ. ಮಹಾವಿದ್ಯಾಲಯ, ರೇಶ್ಮಿ ಮಹಾವಿದ್ಯಾಲಯ, ಡಾ. ಅಂಬೇಡ್ಕರ್ ಮಹಾವಿದ್ಯಾಲಯ, ಸರ್ಕಾರಿ ಮಹಿಳಾ ಪದವಿ ಮಹಾವಿದ್ಯಾಲಯಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಹೇಳಿದ್ದಾರೆ.

ಎಲ್ಲಾ ಅಭ್ಯರ್ಥಿಗಳು ಪರೀಕ್ಷೆಗೆ ಸರಿಯಾಗಿ ಬೆಳಿಗ್ಗೆ 8ಕ್ಕೆ ಪರೀಕ್ಷೆ ಕೇಂದ್ರದಲ್ಲಿ ಹಾಜರಾಗುವುದರ ಜೊತೆಗೆ ಕಡ್ಡಾಯವಾಗಿ ಫೇಸ್ ಮಾಸ್ಕ್ ಮತ್ತು ಪ್ರವೇಶ ಪತ್ರವನ್ನು ತರಬೇಕು. ಪರೀಕ್ಷಾ ಪ್ರವೇಶ ಪತ್ರ ಇರದ ಸಂದರ್ಭದಲ್ಲಿ ಅಭ್ಯರ್ಥಿಗಳು ತಾವು ಅರ್ಜಿ ಶುಲ್ಕ ಸಂದಾಯ ಮಾಡಿದ ರಶೀದಿ ವಿಳಾಸದ ಧೃಡೀಕರಣ ಹಾಗೂ ಪಾಸ್ ಪೋರ್ಟ್‌ ಅಳತೆಯ ಭಾವಚಿತ್ರ ಲಗತ್ತಿಸಿದ ಗುರುತಿನ ಚೀಟಿ ಹಾಗೂ ಸೂಕ್ತ ಕಾರಣಗಳೊಂದಿಗೆ ನೋಡಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಬೇಕು. ದಾಖಲಾತಿಗಳು ಮನದಟ್ಟಾದ ನಂತರ ಪರೀಕ್ಷೆ ಪ್ರವೇಶ ಪತ್ರ ವಿತರಿಸಲಾಗುವುದು.

ಪರೀಕ್ಷಾರ್ಥಿಗಳು ತಮ್ಮ ವಿಷಯ ಹಾಗೂ ನೋಂದಣಿ ಸಂಖ್ಯೆ ಯಾವ ಪರೀಕ್ಷಾ ಉಪ ಕೇಂದ್ರದಲ್ಲಿ ಇದೆ ಎನ್ನುವುದನ್ನು ನಿಖರವಾಗಿ ಖಚಿತ ಪಡಿಸಿಕೊಂಡೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕು. ಪರೀಕ್ಷಾ ಕೇಂದ್ರದ ಮಾಹಿತಿಗಾಗಿ ಪರೀಕ್ಷಾರ್ಥಿಗಳು https://kset.gukonline.in ಲಿಂಕ್ ಬಳಸಲು ಕೋರಲಾಗಿದೆ.

ಕೊರೊನಾ ಪ್ರಯುಕ್ತ ಪರೀಕ್ಷಾರ್ಥಿಗಳು ನೀರಿನ ಬಾಟಲಿಗಳನ್ನು ತಾವೇ ಡ್ಡಾಯವಾಗಿ ತರಬೇಕು ಎಂದು ಪ್ರೊ. ಚಂದ್ರಕಾಂತ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು