ವಿವಿ ದುಸ್ಥಿತಿಗೆ ದಕ್ಷಿಣದವರಿಂದಲೂ ಬೇಸರ
ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್.ಸುಜಾತಾ ಮಾತನಾಡಿ ‘2008ರಿಂದ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಕೆಲಸ ಮಾಡುತ್ತಿದೆ. ಶಾಂತರಸರು ಮತ್ತು ಬೆಸಗರಹಳ್ಳಿ ರಾಮಣ್ಣ ಎರಡೂ ಕನ್ನಡದ ದೊಡ್ಡ ಧ್ವನಿಗಳು. ಪ್ರಜಾಪ್ರಭುತ್ವದಲ್ಲಿ ಕಲೆ ಮತ್ತು ಸಾಹಿತ್ಯ ಧ್ವನಿಪೆಟ್ಟಿಗೆ ಇದ್ದ ಹಾಗೆ. ಗುಲಬರ್ಗಾ ವಿವಿ 800 ಎಕರೆ ಪ್ರದೇಶದಲ್ಲಿದೆ. ಆದರೆ ಯಾವುದಕ್ಕೂ ಅನುದಾನ ಇಲ್ಲ ಎಂಬುದು ವಿಷಾದದ ಸಂಗತಿ’ ಎಂದರು.