ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಸಂದೇಶ ಅಳವಡಿಸಿಕೊಳ್ಳಿ: ಬಿ.ವಿ ಅಶ್ವಿಜಾ

ಸೇಡಂ; ತಾಲ್ಲೂಕು ಆಡಳಿತದಿಂದ ಜಯಂತಿ ಆಚರಣೆ, ಸಾಧಕರಿಗೆ ಸನ್ಮಾನ
Last Updated 15 ಏಪ್ರಿಲ್ 2022, 2:55 IST
ಅಕ್ಷರ ಗಾತ್ರ

ಸೇಡಂ: ‘ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಕೊಟ್ಟ ಸಂದೇಶಗಳನ್ನು ಇಂದಿನ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಸಾಮಾಜಿಕ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಉಪವಿಭಾಗಾಧಿಕಾರಿ ಬಿ.ವಿ ಅಶ್ವಿಜಾ ಅಭಿಪ್ರಾಯಪಟ್ಟರು.

ಪಟ್ಟಣದ ಸುವರ್ಣ ಕರ್ನಾಟಕ ಭವನದಲ್ಲಿ ಗುರುವಾರ ತಾಲ್ಲೂಕು ಆಡಳಿತ ಆಯೋಜಿಸಿದ್ಧ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮಾತನಾಡಿದರು.

ಪಟ್ಟಣದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕಾಗಿ ಮೂರ್ನಾಲ್ಕು ವರ್ಷಗಳ ಹಿಂದೆ ₹1.50 ಕೋಟಿ ಬಂದಿತ್ತು. ಈ ಬಗ್ಗೆ ಯಾವುದೇ ಅಭಿವೃದ್ಧಿ ಕಂಡು ಬರುತ್ತಿಲ್ಲ. ಇದರ ಕುರಿತು ಅಧಿಕಾರಿಗಳು ಹೆಚ್ಚಿನ ಗಮನ ಹರಿಸಿ ಪರಿಶೀಲಿಸಬೇಕು ಎಂದು ಮುಖಂಡ ಜಗನ್ನಾಥ ಚಿಂತಪಳ್ಳಿ ಅಧಿಕಾರಿಗಳಿಗೆ ಮನವಿ ಮಾಡಿದರು.

ಸಿದ್ದು ಊಡಗಿ, ರಾಜು ಕಟ್ಟಿ, ವಿಜಯಕುಮಾರ ಶರ್ಮಾ, ಶಿವಕುಮಾರ ತೊಟ್ನಳ್ಳಿ, ಮಾರುತಿ ಕೋಡಂಗಲಕರ್, ಶಂಭುಲಿಂಗ ನಾಟಿಕಾರ, ವಿಲಾಸಗೌತಂ ನಿಡಗುಂದಾ, ಶ್ರೀನಿವಾಸ ತೆಲ್ಕೂರ ಅವರನ್ನು ಸತ್ಕರಿಸಲಾಯಿತು.

ಚಿಂತಕ ಹಣಮಂತ ಬೋಧನಕರ್ ಉಪನ್ಯಾಸ ನೀಡಿದರು. ಚಿಗರಹಳ್ಳಿ ಸಿದ್ದಬಸವ ಕಬೀರಸ್ವಾಮಿ,
ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ್, ಇಒ ಎಂ. ಕಾರ್ತಿಕ, ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ್, ಪುರಸಭೆ ಅಧ್ಯಕ್ಷೆ ಶೋಭಾ ಹೂಗಾರ, ಶಿವಶಂಕ್ರಯ್ಯಾಸ್ವಾಮಿ ಇಮಡಾಪೂರ, ಸಿಪಿಐ ಆನಂದರಾವ್, ಡಾ. ಸುರೇಶ ಮೇಕಿನ್, ಗೌತಂ ಶಿಂಧೆ, ವೈ.ಎಲ್ ಹಂಪಣ್ಣ, ಮಾರುತಿ ನಾಯಕ್, ವಿಜಯಕುಮಾರ್ ಜಮಖಂಡಿ, ಮಕ್ಬುಲ್ ದಪೆದಾರ ಸೇರಿದಂತೆ ಅಂಬೇಡ್ಕರ್ ಅನುಯಾಯಿಗಳು ಇದ್ದರು.

ಕಮಲಾಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಬಿ.ಆರ್‌.ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು.

ಪಟ್ಟಣದ ಬುದ್ಧವಿಹಾರದಲ್ಲಿನ ಅಂಬೇಡ್ಕರ್‌ ಅವರ ಪುತ್ಥಳಿಗೆ ತಹಶೀಲ್ದಾರ್ ಗಂಗಾಧರ ಪಾಟೀಲ ಮಾಲರ್ಪಣೆ ಮಾಡಿ ಮಾತನಾಡಿದರು.

ನಿಸಾರ ಅಹಮ್ಮ, ಹರಿಶ ಪಟ್ನಾಯಕ, ನಿಂಗಪ್ಪ ಪ್ರಬುದ್ಧಕರ್‌, ರಮೇಶ ಬೆಳಕೋಟಿ, ಮಲ್ಲಪ್ಪ ಗೊಬ್ಬರವಾಡಿ, ಗಿರೆಪ್ಪ ಶಾಖಾ, ಶರಣು ಗೌರೆ, ಅರುಣ ಧಮ್ಮೂರ, ಸುನೀಲ, ರಘುನಂದನ್‌ ದ್ಯಾಮಣಿ, ಶಿವಲಿಂಗ, ರಾಜು ಹಾಲು, ಪ್ರವೀಣ, ಸತೀಶ ಜಾಧವ್‌, ಶಶಿಕಲಾ ಮಾಲಿ ಪಾಟೀಲ, ಶೃತಿ ಬಿರಾದಾರ, ಶಿವಕುಮಾರ ಮರತೂರ, ನಾಗರಾಜ ಕಲ್ಯಾಣ, ಸಾಗರ ಗುತ್ತೇದಾರ, ರಾಮಕೃಷ್ಣ ಖಡಕೆ, ನಾಗರಾಜ ಮೈಲವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT