ಕಲಬುರಗಿ: ‘ಅನುಭವ ಮಂಟಪ ಮೂಲತಃ ಬಸವಣ್ಣನವರು ಹುಟ್ಟುಹಾಕಿದ ಪ್ರಜಾಸತ್ತಾತ್ಮಕವಾದ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ. ಅದು ಕಾಲ್ಪನಿಕವಲ್ಲ, ಐತಿಹಾಸಿಕ’ ಎಂದು ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ವೀರಣ್ಣ ದಂಡೆ ಹೇಳಿದರು.

ವಿಶ್ವ ಬಸವ ಜಯಂತಿ ಅಂಗವಾಗಿ ನಗರದ ಜಯನಗರದ ಅನುಭವ ಮಂಟಪದಲ್ಲಿ ಬುಧವಾರ ನಡೆದ ‘ಬಸವಣ್ಣನವರು: ಅನುಭವ ಮಂಟಪ’ (ಪ್ರಾತ್ಯಕ್ಷಿಕೆ-ಉಪನ್ಯಾಸ) ಕುರಿತು ಅವರು ಮಾತನಾಡಿದರು.

‘ಮಹಾಮನೆಯ ವಿಚಾರ ವೇದಿಕೆಯಾಗಿ ಆರಂಭ ಕಂಡ ಸಂಸ್ಥೆಯು ಅನುಭವ ಮಂಟಪವಾಗಿ ಬೆಳೆಯಿತು. ಅಲ್ಲಿ ಲಿಖಿತ ಪ್ರಮಾಣಗಳಿಂತ, ಅನುಭವ ಪ್ರಮಾಣಕ್ಕೆ ಒತ್ತು ನೀಡಲಾಯಿತು. ಭಕ್ತಿ, ಜ್ಞಾನ, ಕ್ರಿಯೆಗಳ ತಳಹದಿಯ ಮೇಲೆ ನಿರ್ಮಿತವಾದ ಈ ಸಂಸ್ಥೆಯು ನಡೆ–ನುಡಿ ವಿಚಾರಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಿತು’ ಎಂದರು.

‘ಬಸವಣ್ಣ, ಶರಣರು, ಅನುಭವ ಮಂಟಪ ಅಸ್ತಿತ್ವದ ಬಗೆಗೆ ಕೆಲವರು ಮೊದಲಿನಿಂದಲೂ ಪ್ರಶ್ನೆ ಮಾಡುತ್ತಲೇ ಬಂದಿದ್ದಾರೆ. ಸಂಶೋಧಕರೂ ಬಸವಣ್ಣ ಐತಿಹಾಸಿಕ ವ್ಯಕ್ತಿಯೇ ಎಂಬ ಸಂಶಯ ವ್ಯಕ್ತಪಡಿಸಿದ್ದರು. ಆದರೆ, 1928ರಲ್ಲಿ ಸಿಕ್ಕ ಅರ್ಜುನವಾಡ ಶಾಸನ ಅದಕ್ಕೆಲ್ಲ ಉತ್ತರ ನೀಡಿತು. ಈ ನಡುವೆ ಅನುಭವ ಮಂಟಪದ ಬಗೆಗೆ ಮತ್ತೆ ಸಂಶಯ ವ್ಯಕ್ತವಾಗುತ್ತಿದೆ. ಆದರೆ, ಅನುಭವ ಮಂಟಪವಿತ್ತು, ಅದನ್ನು ಬಸವಣ್ಣ ರಚಿಸಿದ್ದರು ಎಂಬುದಕ್ಕೆ ಶರಣರ ವಚನಗಳಲ್ಲಿ ಪ್ರಸ್ತಾಪವಿದೆ’ ಎಂದರು.

‘ಅನುಭವ ಮಂಟಪವನ್ನು ಬೇರೆ ಬೇರೆ ಶರಣರು ಹಲವು ಬಗೆಯ ಹೆಸರುಗಳಲ್ಲಿ ದಾಖಲಿಸಿದ್ದಾರೆ. ಕೋಲಶಾಂತಯ್ಯನವರು ‘ಮಹಾಮನೆಯ ಮಂಟಪ’, ಅಕ್ಕಮ್ಮ ಅವರು ‘ಸದ್ಭಾವಕೂಟ’, ಅಕ್ಕಮಹಾದೇವಿಯವರು ‘ಶರಣರ ಸದ್ಗೋಷ್ಠಿ’ ಎಂದು, ಪಾಲ್ಕುರಿಕೆ ಸೋಮನಾಥನು ‘ತತ್ವಾನುಭವಗೋಷ್ಠಿ’, ‘ಉದಿತ ಗೋಷ್ಠಿ’ ಎಂದು, ಕವಿ ಹರಿಹರ ‘ಸದ್ಗೋಷ್ಠಿ’, ಭೀಮಕವಿ ‘ತತ್ತ್ವಾನುಭಾವ ಗೋಷ್ಠಿ’, ‘ತತ್ವಗೋಷ್ಠಿ’, ‘ಸಂಗೋಷ್ಠಿ’ ಎಂದು, ಶಿವಗಣ ಪ್ರಸಾದಿ ಮಹಾದೇವಯ್ಯ ಅವರು ‘ಮಹಾನುಭಾವ ಗೋಷ್ಠಿ’, ‘ಶಿವಾನುಭಾವ ಗೋಷ್ಠಿ’, ಕಾಲಜ್ಞಾನ ವಚನದಲ್ಲಿ ‘ವಿಚಾರ ಮಂಟಪ, ಪ್ರಕಾಶ ಮಂಟಪ, ಜ್ಞಾನಪ್ರಕಾಶ ಮಂಟಪ, ಪ್ರಸನ್ನ ಮಂಟಪ’ ಎಂದೆಲ್ಲ ಕರೆಯಲಾಗಿದೆ’ ಎಂದು ಪಿಪಿಟಿ ಮೂಲಕ ವಿಚಾರ ಮಂಡಿಸಿದರು.

‘ಅನುಭವ ಮಂಟಪ ಒಂದು ಐತಿಹಾಸಿಕ ಸಾಕ್ಷಿ. 770 ಅಮರಗಣಂಗಳು ಒಂದೆಡೆ ಸೇರಿ ಚರ್ಚಿಸಲು ಒಂದು ವೇದಿಕೆ ಇರದೇ ಇರಲು ಹೇಗೆ ಸಾಧ್ಯ? ಅನುಭವ ಮಂಟಪ ಇರಲಿಲ್ಲ ಎಂಬುದು ಅಜ್ಞಾನದ ಪರಮಾವಧಿ. ಅನುಭವ ಮಂಟಪ ಇತ್ತು ಎಂಬುದಕ್ಕೆ ವಚನಗಳ ಸಾಕ್ಷಿ’ ಎಂದರು ಪ್ರತಿಪಾದಿಸಿದರು.

ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಉಪಾಧ್ಯಕ್ಷೆ ಜಯಶ್ರೀ ದಂಡೆ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಸ್.ವಾಲಿ, ಬಂಡೆಪ್ಪ ಕೇಸುರ, ಕಾರ್ಯದರ್ಶಿ ಆನಂದ ಸಿದ್ದಾಮನಿ ಸೇರಿದಂತೆ ಗಣ್ಯರು ಬಸವಣ್ಣನವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿದರು. ಇದಕ್ಕೂ ಮುನ್ನ ವಚನ ಪ್ರಾರ್ಥನೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.