ಗುರುವಾರ , ಡಿಸೆಂಬರ್ 3, 2020
20 °C

ಚಿಂಚೋಳಿ: ಪುರಸಭೆ ಅಧ್ಯಕ್ಷರ ಅಧಿಕಾರ ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಪುರಸಭೆಯ ನೂತನ ಅಧ್ಯಕ್ಷೆ ಜಗದೇವಿ ಶಂಕರರಾವ್ ಗಡಂತಿ ಮತ್ತು ಉಪಾಧ್ಯಕ್ಷ ಸಯ್ಯದ್ ಶಬ್ಬೀರ್ ಅಹಮದ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.

ಪುರಸಭೆ ಕಚೇರಿಯ ಅಧ್ಯಕ್ಷರ ಕೊಠಡಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿದ ಅಧ್ಯಕ್ಷೆ ಜಗದೇವಿ ಶಂಕರರಾವ್ ಗಡಂತಿ ಅವರು ಧಾರ್ಮಿಕ ವಿಧಿ ವಿಧಾನ ಪೂರೈಸಿ ಖುರ್ಚಿ ಅಲಂಕರಿಸಿದರೆ, ಉಪಾಧ್ಯಕ್ಷ ಸಯ್ಯದ್ ಶಬ್ಬೀರ್ ಅಹಮದ್ ಅವರು ತಮ್ಮ ಕೊಠಡಿಯ ಬಾಗಿಲಿಗೆ ಕಟ್ಟಿದ್ದ ರಿಬ್ಬನ್ ಕತ್ತರಿಸಿ ಒಳಗೆ ಪ್ರವೇಶಿಸಿ ಖುರ್ಚಿ ಅಲಂಕರಿಸಿದರು.

ನಂತರ ಪುರಸಭೆ ಕಚೇರಿಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯಾಧಿಕಾರಿ ಅಭಯಕುಮಾರ ಹಬೀಬ್ ಅವರು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನಿಸಿ ಅಭಿನಂದಿಸಿದರು. ನಂತರ ಸಮಾರಂಭಕ್ಕೆ ಬಂದಿದ್ದ ಸದಸ್ಯರಿಗೆ ಅಧ್ಯಕ್ಷ, ಉಪಾಧ್ಯಕ್ಷರು ಸನ್ಮಾನಿಸಿ ಡೈರಿ ಮತ್ತು ಪೆನ್ನು ಕಾಣಿಕೆಯಾಗಿ ನೀಡಿದರು.

ಅಧ್ಯಕ್ಷ- ಉಪಾಧ್ಯಕ್ಷರಿಗೆ ಬಿಜೆಪಿ ಮ್ತು ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು. ಕಾಂಗ್ರೆಸ್ ಮುಖಂಡ ಗೋಪಾಲರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಜಮಾದಾರ, ಆರ್. ಗಣಪತರಾವ್, ಗಂಗಾಧರ ಗಡ್ಡಿಮನಿ, ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ, ಪ.ಪಂ. ಮಾಜಿ ಅಧ್ಯಕ್ಷ ಸುಭಾಷ ಸೀಳಿನ್, ಮುಖಂಡ ರಾಜಶೇಖರ ಮಜ್ಜಗಿ,ಲಕ್ಷö್ಮಣ ಆವುಂಟಿ, ಪಿಕರ‍್ಡ್ ಬ್ಯಾಂಕ್ ಅಧ್ಯಕ್ಷ ಜಗದೀಶಸಿಂಗ್ ಠಾಕೂರ, ಅಶೋಕ ಚವ್ಹಾಣ, ರಾಜು ಪವಾರ, ದಶರಥ ಬೀರಾಪುರ, ಮಲ್ಲಿಕಾರ್ಜುನ ಉಡುಪಿ, ಉದಯಕುಮಾರ ಗಡಂತಿ, ಜಗನ್ನಾಥ ಕಟ್ಟಿ, ಖಲೀಲ್ ಪಟೇಲ್, ನಾಗರಾಜ ಮಲ್ಕೂಡ ಹಾಗೂ ಪುರಸಭೆಯ ಸದಸ್ಯರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು