ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳಂದ: ‘ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ’

ಅಮರ್ಜಾ ಅಣೆಕಟ್ಟೆಗೆ ಶಾಸಕ ಸುಭಾಷ ಗುತ್ತೇದಾರ ಬಾಗಿನ ಸಮರ್ಪಣೆ
Last Updated 9 ಅಕ್ಟೋಬರ್ 2021, 6:37 IST
ಅಕ್ಷರ ಗಾತ್ರ

ಆಳಂದ: ತಾಲ್ಲೂಕಿನಲ್ಲಿ ಕುಡಿಯುವ ನೀರು ಹಾಗೂ ರೈತರ ಅನುಕೂಲಕ್ಕಾಗಿ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಕೆಲವು ಕೆರೆಗಳು ಮಂಜೂರಾಗಿದ್ದು, ಕಾಮಗಾರಿ ಆರಂಭಗೊಳ್ಳಲಿವೆ ಎಂದು ಶಾಸಕ ಸುಭಾಷ ಗುತ್ತೇದಾರ ತಿಳಿಸಿದರು.

ತಾಲ್ಲೂಕಿನ ಅಮರ್ಜಾ ಅಣೆಕಟ್ಟೆಗೆ ಶುಕ್ರವಾರ ರೈತರೊಂದಿಗೆ ತೆರಳಿ ಬಾಗಿನ ಸಮರ್ಪಣೆ ಮಾಡಿ ನಂತರ ಮಾತನಾಡಿದರು.

ನಿಂಬರ್ಗಾ ಮತ್ತು ತಡಕಲ ಗ್ರಾಮದ ಕೆರೆಗಗೆ ₹3 ಕೋಟಿ ಅನುದಾನ ಮಂಜೂರಾಗಿದೆ. ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ. ಕಡಗಂಚಿ, ಕೊತ್ತನ ಹಿಪ್ಪರಗಾ, ಕವಲಗಾ ಗ್ರಾಮದಲ್ಲಿ ಕೆರೆ ನಿರ್ಮಾಣಕ್ಕೆ ಪ್ರಸ್ತಾವನೆಸಲ್ಲಿಸಲಾಗಿದೆ ಎಂದರು.

ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ರೈತರ ಬೆಳೆ ಹಾನಿಯಾಗಿದೆ. ಸಮೀಕ್ಷೆ ನಂತರ ಬೆಳೆ ಪರಿಹಾರ ದೊರೆಯಲಿದೆ. ಅಧಿಕ ಮಳೆಯಿಂದ ಅಮರ್ಜಾ ಅಣೆಕಟ್ಟೆಯು ಭರ್ತಿಯಾದ ಕಾರಣ ಕಬ್ಬು ಬೆಳೆಗಾರರಿಗೂ ಹಾಗೂ ಆಳಂದ, ಕಡಗಂಚಿ ವಿವಿ ಸೇರಿದಂತೆ ವಿವಿಧ ಗ್ರಾಮದ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.

₹10 ಕೋಟಿ ವೆಚ್ಚದಲ್ಲಿ ಕೋರಳ್ಳಿ ಸಮೀಪದಲ್ಲಿ ಉದ್ಯಾನವನ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ಮೇರೆಗೆ ಕೈಗೊಳ್ಳಲಾಗವದು ಎಂದರು.

ಆಳಂದ ಹಿರೇಮಠನ ಸಿದ್ದೇಶ್ವರ ಸ್ವಾಮೀಜಿ, ಭೂಸನೂರಿನ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿದರು. ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಉಪಾಧ್ಯಕ್ಷ ಚಂದ್ರಕಾಂತ ಹತ್ತರಕಿ, ಮುಖಂಡರಾದ ಹಣಮಂತರಾವ ಮಲಾಜಿ, ಹರ್ಷಾನಂದ ಗುತ್ತೇದಾರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಕಂದಗೋಳೆ, ತಾಲ್ಲೂಕಾಧ್ಯಕ್ಷ ಆನಂದ ಪಾಟೀಲ, ಮಲ್ಲಿಕಾರ್ಜುನ ತಡಕಲ, ಚಂದ್ರಕಾಂತ ಭೂಸನೂರು, ಅನಂತರಾಜ ಸಾಹು, ಅಮೃತ ಬಿಬ್ರಾಣಿ, ರಮ್ಮು ಅನ್ಸಾರಿ, ಗುರುಶಾಂತಪ್ಪ ಪಾಟೀಲ, ಶಿವಪುತ್ರಪ್ಪ ಬೆಳ್ಳೆ, ಕುಮಾರ ಬಂಡೆ, ಚಂದ್ರಕಾಂತ ಘೋಡಕೆ, ಚಂದ್ರಕಾಂತ ಮಂಗಾಣೆ, ಅಣ್ಣಾರಾವ ಪಾಟೀಲ, ಪ್ರಕಾಶ ಮಾನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT