ಸೋಮವಾರ, ಸೆಪ್ಟೆಂಬರ್ 16, 2019
22 °C

ಮೇ 8 ರಿಂದ ಐದು ದಿನ ಬಸವ ಜಯಂತಿ ಉತ್ಸವ: ಪ್ರಚಾರಾಂದೋಲನಕ್ಕೆ ಅದ್ದೂರಿ ಚಾಲನೆ

Published:
Updated:
Prajavani

ಕಲಬುರ್ಗಿ: ಮೇ 8 ರಿಂದ ಐದು ದಿನ ನಗರದ ಬಸವೇಶ್ವರ ಮೂರ್ತಿ ಆವರಣದ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವ- ಕಾಯಕ ಶರಣರ ಸಂಘಟನೆಗಳ ನೇತೃತ್ವದಲ್ಲಿ ಆಚರಿಸಲು ಉದ್ದೇಶಿಸಿರುವ ‘ಬಸವ ಜಯಂತಿ ಉತ್ಸವ-2019’ರ ಪ್ರಚಾರಾಂದೋಲನಕ್ಕೆ ಜಯಂತ್ಯುತ್ಸವ ಸಮಿತಿ ಗೌರವ ಅಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ, ಕಾರ್ಯಾಧ್ಯಕ್ಷ ಬಿ.ಬಿ.ರಾಂಪುರೆ ಹಾಗೂ ಶಿವಶರಣಪ್ಪ ಕಲಬುರ್ಗಿ ಶುಕ್ರವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ತಿಪ್ಪಣಪ್ಪ ಕಮಕನೂರ ಮತ್ತು ಬಿ.ಬಿ.ರಾಂಪುರೆ, ‘ಕಾಯಕ ಮತ್ತು ದಾಸೋಹ ತತ್ವಗಳು ಸಮಾಜದಲ್ಲಿ ಹೊಸತನವನ್ನು ತಂದು ಕೊಟ್ಟಿವೆ. ಬಸವಣ್ಣನವರು ಇವನಾರವ, ಇವನಾರವ ಎನ್ನದೆ, ಇವ ನಮ್ಮ ಮನೆಯ ಮಗ ಎಂದು ಹೇಳಿ ಎಂದಿದ್ದಾರೆ. ಬಸವಣ್ಣವರ ಸಮಾನತೆ, ಸಹಕಾರ ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕು. ಜಯಂತಿಯನ್ನು ಸಾಮಾಜಿಕ ಜಾತ್ರೆಯನ್ನಾಗಿ ಮಾಡದೆ, ಅನುಭವ ಮಂಟಪ ರೀತಿಯಲ್ಲಿ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಪಾಲಿಕೆ ಸದಸ್ಯ ಶರಣಕುಮಾರ ಮೋದಿ, ಪ್ರಮುಖರಾದ ರವೀಂದ್ರ ಶಾಬಾದಿ, ಆರ್.ಜಿ.ಶಟಗಾರ, ಬಸವರಾಜ ಮೊರಬದ, ಹಣಮಂತರಾವ ಪಾಟೀಲ ಕುಸನೂರ, ಶಿವಶರಣ ದೇಗಾಂವ, ರಾಜಶೇಖರ ಯಂಕಂಚಿ, ಅಯ್ಯಣ್ಣಗೌಡ ಪಾಟೀಲ, ಸಂಗಮೇಶ ಗುಬ್ಬೇವಾಡ, ಮಲ್ಲಿಕಾರ್ಜುನ ವಡ್ಡಣಕೇರಿ, ಪ್ರೊ.ಕುಪೇಂದ್ರ ಪಾಟೀಲ, ವಿಜಯಕುಮಾರ ತೇಗಲತಿಪ್ಪಿ, ಸತೀಶ ಸಜ್ಜನ, ಬಿ.ಎಂ.ಪಾಟೀಲ ಕಲ್ಲೂರ ಇದ್ದರು.ಬಸ

Post Comments (+)