ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಸವ ಪುರಸ್ಕಾರ’ಕ್ಕೆ ಲೇಖಕರ ಆಯ್ಕೆ

ಸುಭಾಷಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್
Last Updated 6 ಜುಲೈ 2021, 3:14 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆ ಹಾಗೂ ತಾಲ್ಲೂಕು ವ್ಯಾಪ್ತಿಯ ಪಾಳಾ ಗ್ರಾಮದ ಶ್ರೀ ಸುಭಾಷಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ವತಿಯಿಂದ ನೀಡಲಾಗುವ 2021ನೇ ಸಾಲಿನ ‘ಬಸವ ಪುರಸ್ಕಾರ’ಕ್ಕೆ ಲೇಖಕರ ಹಾಗೂ ಕೃತಿಗಳ ಪಟ್ಟಿ ಬಿಡುಗಡೆಯಾಗಿದೆ.

ರಾಷ್ಟ್ರಿಯ ಬಸವ ಪುರಸ್ಕಾರಕ್ಕೆ ಆಯ್ಕೆ:ಡಾ. ರಂಗಾರೆಡ್ಡಿ ಕೋಡಿರಾಂಪುರ ಅವರ ಕೃತಿ–ಸಾಲು ಹೊಂಗೆಯ ತಂಪು; ಡಾ.ಎಚ್.ಟಿ. ಪೋತೆ ಅವರ ಕೃತಿ–ಬಯಲೆಂಬೋ ಬಯಲು; ಸಿದ್ದರಾಮ ಹೊನ್ಕಲ್ ಕೃತಿ–ನೂರೊಂದು ಅನುಭವ; ಡಾ. ಪದ್ಮಾಕರ ಅಶೋಕ ಕುಮಾರ ಮಟ್ಟಿ ಕೃತಿ-ವಚನಕಾರ ಉರಿಲಿಂಗ ಪೆದ್ದಿ; ಶಶಿಕಲಾ ನಾಡಗೌಡ ಕೃತಿ–ಬಾಳು ಬೆಳಗಿತು.

ರಾಜ್ಯ ಬಸವ ಪುರಸ್ಕಾರಕ್ಕೆ ಆಯ್ಕೆ:ಡಾ. ಅಜಿತ್ ಹರೀಶಿ ಕೃತಿ–ಮೂಚಿಮ್ಮ; ಲಿಂಗನಗೌಡ ಹ.ದೇಸಾಯಿ ಕೃತಿ–ಮಾನವಂತರ ಮಗಳು; ಲಕ್ಷ್ಮಿಕಾಂತ ಮಿರಜಕರ ಕೃತಿ–ಬಯಲೊಳಗೆ ಬಯಲಾಗಿ; ಡಾ. ಗುರುದೇವಿ ಹುಲೆಪ್ಪನವರಮಠ ಕೃತಿ-ಚಿತ್ಕಿರಣ ಚಿದ್ಬೆಳಗು; ಎ.ಎನ್. ರಮೇಶ್ ಗುಬ್ಬಿ ಕೃತಿ–ಕಾಡುವ ಕವಿತೆಗಳು.

ಕಲ್ಯಾಣ ಕರ್ನಾಟಕ ಬಸವ ಪುರಸ್ಕಾರಕ್ಕೆ ಆಯ್ಕೆ: ಲಿಂಗಾರೆಡ್ಡಿ ಶೇರಿ ಕೃತಿ–ಹರಿದ ಸೆರಗು; ವೆಂಕಟೇಶ ಕೆ. ಜನಾದ್ರಿ ಕೃತಿ–ಎನ್ನಲ್ಲಿ ಏನುಂಟೆಂದು; ಅಬ್ಬಾಸ್ ಅಲಿ ಎ. ನದಾಫ ಕೃತಿ–ಭಾವ ಬಿಂದಿಗೆ; ಶಿವರಂಜನ್ ಸತ್ಯಂಪೇಟೆ ಕೃತಿ-ವಚನ ಹೃದಯ; ಡಾ ಶರಣಮ್ಮ ಬಿ. ಪಾಟೀಲ ಕೃತಿ–ಭೂಗರ್ಭ.

3ನೇ ವರ್ಷದ ರಾಷ್ಟ್ರೀಯ, ರಾಜ್ಯ ಮತ್ತು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ‘ಬಸವ ಪುರಸ್ಕಾರ’ ಪ್ರಶಸ್ತಿಗೆ ಕೃತಿಗಳ ಪರಿಚಯದೊಂದಿಗೆ ಲೇಖಕರ ಮಾಹಿತಿ ಆಹ್ವಾನಿಸಲಾಗಿತ್ತು. ಒಟ್ಟಾರೆ 243 ಪುಸ್ತಕಗಳು ಬಂದವು. ಅವುಗಳಲ್ಲಿ 15 ಕೃತಿಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಪುರಸ್ಕಾರವು ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

ಕೊರೊನಾ ಪರಿಸ್ಥಿತಿ ತಿಳಿಯಾದ ನಂತರ ಪ್ರಶಸ್ತಿ ಪ್ರದಾನ ಮಾಡುವ ದಿನ ತಿಳಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT