ಕಲಬುರಗಿ: ‘ಬಸವಣ್ಣನವರು ಜಗತ್ತಿನಲ್ಲಿ ಮೊಟ್ಟ ಮೊದಲಿಗೆ ಮಹಿಳೆಯರ ಸಮಾನತೆಗಾಗಿ ನಾಂದಿ ಹಾಡಿದರು. ಅವರ ಅಕ್ಕ ಅಕ್ಕನಾಗಮ್ಮನವರಿಗೆ ಧಾರ್ಮಿಕ ಸಂಸ್ಕಾರ ನೀಡದಿದ್ದರೆ ನನಗೂ ಧಾರ್ಮಿಕ ಸಂಸ್ಕಾರಗಳು ಬೇಡವೆಂದು ಮನೆ ತೊರೆದು ಕೂಡಲ ಸಂಗಮಕ್ಕೆ ಹೋದರು’ ಎಂದು ಹುಬ್ಬಳ್ಳಿಯ ಶ್ರೀಗುರುಬಸವ ಮಂಟಪ ಟ್ರಸ್ಟ್ ಸಂಚಾಲಕ ಶಶಿಧರ ಕರವೀರಶೆಟ್ಟರ ಹೇಳಿದರು.

ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಬಸವ ಸಮಿತಿ, ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಬಸವ ಜಯಂತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹೆಣ್ಣು ಶೂದ್ರಳಲ್ಲ, ಅವಳು ಪವಿತ್ರಳಾಗಿದ್ದಾಳೆ. ಅವಳಿಗೆ ಪುರಷರ ಸಮಾನ ಸ್ಥಾನಮಾನ ದೊರೆಯಬೇಕೆಂದು ಬಸವಣ್ಣ ವಾದಿಸಿದ್ದರು’ ಎಂದು ತಿಳಿಸಿದರು.

‘ವಚನಗಳು ಇರಲಿಲ್ಲ. ಅನುಭವ ಮಂಟಪ ಇರಲಿಲ್ಲ ಎನ್ನುವ ಮೂರ್ಖರು ಇದ್ದಾರೆ. ಬಸವಣ್ಣ ಮತ್ತು ವಚನ ಚಳವಳಿ ಐತಿಹಾಸಿಕ ಸತ್ಯವಾಗಿದೆ. ಬಸವ ಜಯಂತಿಯನ್ನು ತಾತ್ವಿಕವಾಗಿ ಆಚರಿಸಬೇಕು’ ಎಂದು ಹೇಳಿದರು.

ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜ ಬಿ. ಅಪ್ಪ ಅಧ್ಯಕ್ಷತೆ ವಹಿಸಿದ್ದರು. ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ವೀರಣ್ಣ ದಂಡೆ ಉಪಸ್ಥಿತರಿದ್ದರು.

ಬಸವ ಸಮಿತಿಯ ಉಪಾಧ್ಯಕ್ಷೆ ಜಯಶ್ರೀ ದಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಸ್. ವಾಲಿ ಸ್ವಾಗತಿಸಿದರು. ಆನಂದ ಸಿದ್ದಾಮಣಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.