ಕಲಬುರ್ಗಿ:ಬೇಡಜಂಗಮ, ಬುಡ್ಗ ಜಂಗಮರು ಪರಿಶಿಷ್ಟ ಜಾತಿಗೆ ಸೇರುತ್ತಾರೆ. ಆದರೆ, ಇವರ ಹೆಸರಿನಲ್ಲಿ ವೀರಶೈವರು ಜಾತಿ ಪ್ರಮಾಣಪತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ವೀರಶೈವರೂ ಈ ಪ್ರಮಾಣಪತ್ರದ ಪ್ರಯೋಜನ ಪಡೆಯುತ್ತಿದ್ದು, ಕದಕ್ಕೆ ಕಡಿವಾಣ ಹಾಕುವಂತೆ ಸದನದಲ್ಲಿ ಒತ್ತಾಯಿಸಬೇಕು ಎಂದು ಒತ್ತಾಯಿಸಿ ‘ನಕಲಿಬೇಡಜಂಗಮರ ವಿರೋಧಿ ವೇದಿಕೆ’ ಪದಾಧಿಕಾರಿಗಳು ನಗರದಲ್ಲಿರುವ ಶಾಸಕ ಪ್ರಿಯಾಂಕ್ ಖರ್ಗೆ ಮನೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮಹಾರಾಷ್ಟ್ರದ ಸೊಲ್ಲಾಪುರ ಕ್ಷೇತ್ರದ ಸಂಸದ, ವೀರಶೈವಜಂಗಮಜಾತಿಗೆ ಸೇರಿದ ಗೌಡಗಾಂವ ಸಂಸ್ಥಾನ ಹಿರೇಮಠದ ಡಾ.ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಬಿಜೆಪಿ ಟಿಕೆಟ್‌ನಿಂದ ಆಯ್ಕೆಯಾದರು. ಆ ಮೂಲಕ ನಿಜವಾದ ದಲಿತ ಸಮುದಾಯದವರಿಗೆ ಅನ್ಯಾಯವಾಯಿತು. ಕರ್ನಾಟಕದಲ್ಲಿಯೂ ನಕಲಿಬೇಡಜಂಗಮರು ಪರಿಶಿಷ್ಟ ಪ್ರಮಾಣಪತ್ರ ಪಡೆಯುವುದರ ಮೂಲಕ ನಿಜವಾದ ದಲಿತರಿಗೆ ಸಿಗಬೇಕಿದ್ದ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದರು.

‘ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಸಂಸದರು, ಶಾಸಕರು, ಸಚಿವರು ಪರಿಶಿಷ್ಟ ಜಾತಿಯ ಹಿತರಕ್ಷಣೆಗೆ ನಿಲ್ಲುವ ಬದಲು ವೋಟ್ ಬ್ಯಾಂಕ್ ರಾಜಕಾರಣ ಮಾಡಬಾರದು’ ಎಂದು ಒತ್ತಾಯಿಸಿದರು.

ಸಂಘಟನೆಯ ಮುಖಂಡರಾದ ಮರೆಪ್ಪ ಹಳ್ಳಿ, ಸುಧಾಮ ಧನ್ನಿ, ಹಣಮಂತ ಬೋಧನ, ಅರ್ಜುನ ಭದ್ರೆ, ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಆಜಾದಪುರ, ಹಣಮಂತ ಇಟಗಿ, ಬಸಲಿಂಗಪ್ಪ ಗಾಯಕವಾಡ, ದಿನೇಶ ದೊಡ್ಡಮನಿ, ಚಂದ್ರಶೇಖರ ಕೋಟನೂರ, ಜಯಪಾಲ ಭದ್ರೆ, ಸಂತೋಷ ಮೇಲಿನಮನಿ, ಪಾಂಡುರಂಗ ಮಾವಿನ, ದೇವಿಂದ್ರ ಸಿನ್ನೂರ, ರಾಧಾಕೃಷ್ಣ ಧನ್ನಿ ಇದ್ದರು.

ಇದೇ ಬೇಡಿಕೆಗಳನ್ನು ಇಟ್ಟುಕೊಂಡು ಸಂಘಟನೆಯ ಕಾರ್ಯಕರ್ತರು ಸಂಸದ ಡಾ.ಉಮೇಶ ಜಾಧವ ಮನೆ ಎದುರು ಪ್ರತಿಭಟನೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.