ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ: ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ

ಓಕಳಿ ಶಾಲೆಗೆ ಬಿಜೆಪಿ ಜಯಶ್ರೀ ಮತ್ತಿಮೂಡ ಭೇಟಿ
Last Updated 13 ಜುಲೈ 2020, 15:19 IST
ಅಕ್ಷರ ಗಾತ್ರ

ಕಮಲಾಪುರ: ತಾಲ್ಲೂಕಿನ ಓಕಳಿ ಶಾಲೆಯ 200 ಮಕ್ಕಳಿಗೆ ಬಿಜೆಪಿ ಮುಖಂಡರಾದ ಜಯಶ್ರೀ ಬಸವರಾಜ ಮತ್ತಿಮೂಡ ಅವರು ಸೋಮವಾರ ಮಾಸ್ಕ್, ಸ್ಯಾನಿಟೈಸರ್, ನೋಟ್‌ಬುಕ್, ಪೆನ್ ಹಾಗೂ ಬಿಸ್ಕತ್‌ ವಿತರಿಸಿದರು.

ಮಕ್ಕಳಿರುವ ವಠಾರಕ್ಕೆ ತೆರಳಿ ಪಾಠ ಮಾಡುವ ಓಕಳಿ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕರ ನಡೆಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಪಾಠ ಮಾಡುತ್ತಿರುವ ಎಲ್ಲ 8 ಕೇಂದ್ರಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ನಮ್ಮ ಮತಕ್ಷೇತ್ರದಲ್ಲಿ ಇಂತಹ ವಿನೂತನ ಪ್ರಯೋಗ ನಡೆದಿರುವುದು ರಾಜ್ಯಕ್ಕೆ ಮಾದರಿಯಾಗಿದೆ. ಮಾಧ್ಯಮದಲ್ಲಿನ ವರದಿ ನೋಡಿ ರಾಜ್ಯಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ಶಾಲೆ ಹಾಗೂ ಮಕ್ಕಳ ಏಳಿಗೆಗೆ ಅವಶ್ಯಕವಾದ ಸೌಲತ್ತುಗಳನ್ನು ಒದಗಿಸಲು ಶಾಸಕರಿಗೆ ಮನವರಿಕೆ ಮಾಡುತ್ತೇನೆ ಎಂದರು.

ಎಸ್‍ಡಿಎಂಸಿ ಅಧ್ಯಕ್ಷ ವೀರಣ್ಣ ಮಾಲಿಪಾಟೀಲ, ಮುಖ್ಯ ಶಿಕ್ಷಕ ಸಿದ್ರಾಮಪ್ಪ ಬಿರಾದರ, ವೀರಣ್ಣರಾವ ಗೋರಂಪಳ್ಳಿ ಮಂಜುಳಾ, ಸಾವಿತ್ರಿ, ಲಕ್ಕಮ್ಮ, ಗುರುಬಸಪ್ಪ, ಕಸ್ತೂರಿ, ಮುಖಂಡರಾದ ಗುಂಡಪ್ಪ ನಿಗ್ಗುಡಗಿ, ದೇವಿಂದ್ರಪ್ಪ ಕಾಮಜಿ, ರೇವಣಸಿದ್ದಪ್ಪ ಯರಬಾಗಿ, ಶಿವರಾಜ ಮುಗಳಿ, ಗ್ರಾಮದ ಮುಖಂಡರಾದ, ರೇವಣಸಿದ್ದಪ್ಪ ಮಾಲಿ ಪಾಟೀಲ, ವರೂಣ್ ಓಕಳಿ, ರೇವಣಸಿದ್ದಪ್ಪ ಯರಬಾಗಿ, ರಾಜು ಹಳ್ಳಿ, ಶಿವಕುಮಾರ ದೋಶೆಟ್ಟಿ, ಸಾಗರ ಗುತ್ತೇದಾರ, ಬಸವರಾಜ ಚಿಕ್ಕೆಗೌಡ, ಪ್ರಶಾಂತ ಮಾನಕಾರ, ಸುರೇಶ ರಾಠೋಡ್, ಜಾಕೀರ ಹುಸೇನ, ಬಾಬು ಜಾಲಳ್ಳಿ, ಶರಣು ಸಂಪಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT