ಕಲಬುರ್ಗಿ: ಕಾಂಗ್ರೆಸ್ ಶಾಸಕನಿಗೆ ಬಿಜೆಪಿ ಗಾಳ

7

ಕಲಬುರ್ಗಿ: ಕಾಂಗ್ರೆಸ್ ಶಾಸಕನಿಗೆ ಬಿಜೆಪಿ ಗಾಳ

Published:
Updated:
Prajavani

ಕಲಬುರ್ಗಿ: ಅಫಜಲಪುರ ಶಾಸಕ ಎಂ.ವೈ.ಪಾಟೀಲ ಅವರಿಗೆ ನಿರಂತರವಾಗಿ ಕರೆ ಮಾಡುತ್ತಿರುವ ಬಿಜೆಪಿ ಮುಖಂಡರು ಪಕ್ಷಕ್ಕೆ ಬರುವಂತೆ ದುಂಬಾಲು ಬಿದ್ದಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಸಕ ಪಾಟೀಲ, ‘ಬಿಜೆಪಿಯವರು ಸಂಪರ್ಕಿಸಿರುವುದು ನಿಜ. ಅವರು ಎಲ್ಲರನ್ನೂ ಸಂಪರ್ಕಿಸುತ್ತಿದ್ದಾರೆ. ಸಣ್ಣವರಿಂದ ದೊಡ್ಡವರವರೆಗೆ ಎಲ್ಲರೂ ಕರೆ ಮಾಡುತ್ತಿದ್ದಾರೆ. ಆದರೆ, ನನ್ನ ಹಾದಿಗೆ ಬರಬೇಡಿ ಎಂದು ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ’ ಎಂದು ಹೇಳಿದರು.

‘ಸ್ವಯಂ ಗೌರವ ಇದ್ದವರು ಯಾರೂ ಬಿಜೆಪಿಗೆ ಹೋಗುವುದಿಲ್ಲ. ಅವರಲ್ಲಿ ಸಿದ್ಧಾಂತಗಳೇ ಇಲ್ಲ. ನಮ್ಮ ಜತೆ ಬನ್ನಿ, ಸಹಾಯ ಮಾಡುತ್ತೇವೆ. ಅವರು ಬರುತ್ತೇವೆ, ಇವರು ಬರುತ್ತೇವೆ ಎಂದು ಹೇಳಿದ್ದಾರೆ ಎಂದು ಎಲ್ಲರಿಗೂ ಹೇಳುತ್ತಿದ್ದಾರೆ. ಆದರೆ, ಬಿಜೆಪಿಗೆ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ. ಈ ಇಳಿ ವಯಸ್ಸಿನಲ್ಲಿ ಹೀಗೆ ಮಾಡಿದರೆ ಕ್ಷೇತ್ರದ ಜನತೆ ಕ್ಷಮಿಸುವುದಿಲ್ಲ. ಹೀಗಾಗಿ ಆ ಕಡೆಗೆ ಮುಖ ಕೂಡ ಮಾಡುವುದಿಲ್ಲ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !