ಸಿ.ಎಂ. ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಭಾನುವಾರ, ಜೂಲೈ 21, 2019
26 °C
ಶಾಸಕರ ರಾಜೀನಾಮೆ; ಅಲ್ಪಮತಕ್ಕೆ ಕುಸಿದ ಸರ್ಕಾರ

ಸಿ.ಎಂ. ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

Published:
Updated:
Prajavani

ಕಲಬುರ್ಗಿ: 14 ಶಾಸಕರ ರಾಜೀನಾಮೆಯಿಂದಾಗಿ ರಾಜ್ಯ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಗ್ರಾಮಾಂತರ ಹಾಗೂ ನಗರ ಘಟಕದ ಕಾರ್ಯಕರ್ತರು ಎಸ್‌ವಿಪಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಆಂತರಿಕ ಕಚ್ಚಾಟ ಮಿತಿ ಮೀರಿದ್ದು, ಶಾಸಕರ ಕ್ಷೇತ್ರಗಳಿಗೆ ಅನುದಾನ ಸಮಾನವಾಗಿ ಹಂಚಿಕೆಯಾಗಿಲ್ಲ. ಇದರಿಂದ ಬೇಸತ್ತು ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದರು.

ಮಾಜಿ ಶಾಸಕ ಸುಭಾಷ್ ಬಿರಾದಾರ, ಸಂಗಮೇಶ್ ನಾಗನಹಳ್ಳಿ, ಸಂಜಯ್ ಮಿಸ್ಕಿನ್, ಶಿವಯೋಗಿ ನಾಗನಹಳ್ಳಿ, ರಾಜೇಂದ್ರ ಕರೆಕಲ್, ರಾಣೋಜಿ ದೊಡ್ಮನಿ, ಪಾಲಿಕೆ ಸದಸ್ ಪ್ರಭು ಹಾದಿಮನಿ, ಈರಣ್ಣ ಹೊನ್ನಳ್ಳಿ, ಚಂದ್ರಕಾಂತ್ ಕೆಸರಟ್ಟಿ, ರಾಜು ನರುಣಿ, ಅಶೋಕ್ ಹೌದೆ, ಮಹದೇವ ಬೆಳಮಗಿ, ಸಂಗಮೇಶ್ವರ ರಾಜೋಳಿ, ಶ್ವೇತಾ ಸಿಂಗ್, ವಿಜಯಲಕ್ಷ್ಮಿ ಗೊಬ್ಬುರ್, ಅರವಿಂದ ನವುಲೆ, ಸಾಹೇಬ್ ಗೌಡ ಪಾಟೀಲ್, ಮಲ್ಲೂ ಉದ್ನೂರ್, ಸಂತೋಷ ಹರಸೂರ, ಸಂತೋಷ ಹಾದಿಮನಿ, ಎಸ್.ಜಿ. ಭಾರತಿ, ಅನಿಲ್ ಜಾದವ್, ಸಂಗಣ್ಣ ಈಜೇರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !