ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.6 ರಂದು ‘ಮನದಾಳದ ಮಾತು’ ಬಿಡುಗಡೆ

Last Updated 2 ನವೆಂಬರ್ 2020, 8:48 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನ.6 ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ಕನ್ನಡ ಭವನದಲ್ಲಿ ‘ಸಾಧಕರ ಮನದಾಳದ ಮಾತು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು,‘ಹಾರಕೂಡದ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಕೃತಿ ಬಿಡುಗಡೆ ಮಾಡುವರು. ಪ್ರಾಧ್ಯಾಪಕ ಕಲ್ಯಾಣರಾವ ಪಾಟೀಲ ಕೃತಿ ಕುರಿತು ಮಾತನಾಡುವರು. ಮಾಜಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಭಾಗವಹಿಸುವರು’ ಎಂದು ಹೇಳಿದರು.

ಇದುವರೆಗೂ ಹಿರಿಯರ ಹೆಜ್ಜೆ ಗುರುತು ದಾಖಲಿಸುವ ಕೆಲಸ ಆಗಿಲ್ಲ. ದಾಖಲಿಸಿ, ಮುಂದಿನ ಪೀಳಿಗೆಗೆ ದಾಟಿಸುವ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದೇವೆ ಎಂದರು.

ಸಾಧಕರ ಜೀವನ ಪರಿಚಯಿಸುವ ಉದ್ದೇಶದಿಂದ 2016 ರ ಜುಲೈನಲ್ಲಿ ಕಲಬುರ್ಗಿಯ ಕಸಾಪದಲ್ಲಿ ಮನದಾಳದ ಮಾತು ಕಾರ್ಯಕ್ರಮ ಆರಂಭಿಸಲಾಯಿತು. ಇದುವರೆಗೂ ಎಲ್ಲ ಕ್ಷೇತ್ರದ 25 ಜನ ಸಾಧಕರು ಭಾಗವಹಿಸಿ, ಅನುಭವದ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ. ದಾನಿಗಳ ನೆರವಿನಿಂದ ಅದಕ್ಕೆ ಪುಸ್ತಕ ರೂಪ ನೀಡಲಾಗಿದೆ. ಇದನ್ನು ಡಾ.ವಿಜಯಕುಮಾರ ಜಿ.ಪರುತೆ ಸಂಪಾದಿಸಿದ್ದಾರೆ ಎಂದು ಹೇಳಿದರು.

ಪೂಜ್ಯ ದೊಡ್ಡಪ್ಪ ಅಪ್ಪ, ಸುರಪುರದ ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ಹಲವು ಸಾಧಕರ ಕುರಿತು ವಿಸ್ತೃತ ಮಾಹಿತಿ ಎಲ್ಲೂ ದೊರೆಯುವುದಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಅವರ ಕುರಿತು ಮರಿಯಲಿ ಹೆಂಗಾ ನಿಮ್ಮ? ಎನ್ನುವ ಪುಸ್ತಕ ಪ್ರಕಟಿಸುವ ಯೋಜನೆ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ವಿಜಯಕುಮಾರ ಜಿ.ಪರುತೆ, ಮಡಿವಾಳಪ್ಪ ನಾಗರಹಳ್ಳಿ, ಗೌರವ ಕೋಶಾಧ್ಯಕ್ಷ ದೌಲತರಾವ ಮಾ. ಪಾಟೀಲ, ಅಂಬಾಜಿ ಕೋಲ್ಗಿ, ಶಿವಾನಂದ ಕಲಶೆಟ್ಟಿ ಹಾಗೂ ಆನಂದ ನಂದೂರಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT