ಜೇವರ್ಗಿ: ತಾಲ್ಲೂಕಿನ ಗುಡೂರ ಎಸ್.ಎ. ಗ್ರಾಮದಲ್ಲಿ ಸತತ ಮಳೆಯಿಂದ ಮನೆಯ ಚಾವಣಿ ಕುಸಿದು ಬಿದ್ದು ಚಂದ್ರಶೇಖರ ಶಿವಣ್ಣ ಹವಲ್ದಾರ (11) ಮೃತಪಟ್ಟಿದ್ದಾನೆ. ಬಾಲಕನ ಅಜ್ಜಿ ಭಾಗಮ್ಮ ಸಿದ್ರಾಮ ಹವಲ್ದಾರ್ (55) ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಮವಾರ ಸಂಜೆ ಈ ಘಟಣೆ ನಡೆದಿದೆ.

ಬಾಲಕ ಚಂದ್ರಶೇಖರ ಮನೆಯಲ್ಲಿ ಅಜ್ಜಿಯೊಂದಿಗೆ ಆಟವಾಡುತ್ತಿದ್ದ. ಈ ವೇಳೆ ಮಳೆಯಿಂದ ನೆನೆದಿದ್ದ ಮಣ್ಣಿನ ಚಾವಣಿ ಕುಸಿದು ಬಿದ್ದು ಘಟನೆ ಸಂಭವಿಸಿದೆ ಎಂದು ಮೃತ ಬಾಲಕನ ತಂದೆ ಶಿವಣ್ಣ ಹವಾಲ್ದಾರ್ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಪಿಡಿಒ ಶ್ರೀಕಾಂತ್ ದೊಡ್ಡಮನಿ, ಗ್ರಾಮ ಆಡಳಿತಾಧಿಕಾರಿ ರಮೇಶ ಪವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.