ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್–ಕಾರು ಡಿಕ್ಕಿ: ಚಿಂಚೋಳಿಯಲ್ಲಿ ತಪ್ಪಿದ ಭಾರಿ ಅನಾಹುತ

Last Updated 13 ಸೆಪ್ಟೆಂಬರ್ 2021, 7:54 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಬಾಪೂರ–ಮೆಹಬೂಬನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ತಾಲ್ಲೂಕಿನ ತುಮಕುಂಟಾ ನಾಗಾಈದಲಾಯಿ ಮಧ್ಯೆ ಸಂಭವಿಸಿದ ಕಾರು ಮತ್ತು ಸಾರಿಗೆ ಬಸ್ ನಡುವಿನ ಡಿಕ್ಕಿ ಘಟನೆಯಲ್ಲಿ ಭಾರಿ ದುರಂತವೊಂದು ತಪ್ಪಿದೆ.

ಕಾರು ಚಾಲೂ ಆಗಲು ತೊಂದರೆ ಕಾಣಿಸಿಕೊಂಡಿದೆ. ಆಗ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ದುರಸ್ತಿ ಮಾಡುವಾಗ ಕಾರು ಏಕಾಏಕಿ ಚಾಲೂ ಆಗಿದೆ. ಆಗ ಕಾರಿನ ಎದುರು ವ್ಯಕ್ತಿಯೊಬ್ಬ ಬರುತ್ತಿದ್ದರು. ಅವರಿಗೆ ಕಾರು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕಾರಿನ ಚಾಲಕ ಎದುರಿಗೆ ಬರುತ್ತಿದ್ದ ಬಸ್ಸಿಗೆ ಗುದ್ದಿದ್ದಾರೆ. ಆಗ ಕಾರಿನ ಬಲೂನ್ ತೆರೆದುಕೊಂಡಿದೆ.

ಕಾರು ನುಜ್ಜು ಗುಜ್ಜಾಗಿ ಬಿಡಿ ಭಾಗಗಳು ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಆದರೆ ಘಟನೆಯಲ್ಲಿ ಯಾರಿಗೂ ಭಾರಿ ಗಾಯವಾಗಿಲ್ಲ ಎಂದು ಚಿಂಚೋಳಿ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಎ.ಎಸ್. ಪಾಟೀಲ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT