ಭಾನುವಾರ, ಜನವರಿ 17, 2021
26 °C

ಮಾಗಣಗೇರಾ ಜಾತ್ರೆ ಸರಳ ಆಚರಣೆಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಯಡ್ರಾಮಿ ತಾಲ್ಲೂಕಿನ ಮಾಗಣಗೇರಾ ಗ್ರಾಮದಲ್ಲಿ ಜ. 7ರಂದು ನಡೆಯಬೇಕಿದ್ದ ವೀರ ತಪಸ್ವಿ ಗುರು ಚನ್ನವೃಷಭೇಂದ್ರ ಶಿವಯೋಗಿಗಳ ಹಾಗೂ ಕೆಂಭಾವಿ ಹಿರೇಮಠದ ಲಿಂ. ಅಯ್ಯಪ್ಪಯ್ಯ ಶಿವಾಚಾರ್ಯರ ಜಾತ್ರೆಯಗಳನ್ನು ರದ್ದು ಮಾಡಲಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಠದ ಪೀಠಾಧಿಪತಿ ಡಾ.ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಈ ಉತ್ಸವದ ಅಂಗವಾಗಿ ಡಿಸೆಂಬರ್‌ 28ರಿಂದ ಆರಂಭವಾದ ಲಚ್ಯಣ ಸಿದ್ಧಪ್ಪ ಮಹಾರಾಜರ ಪುರಾಣ ಕಾರ್ಯಕ್ರಮವನು ಜ. 7ರವರೆಗೂ ನಡೆಯಲಿದೆ. ಚನ್ನಯ್ಯ ಶಾಸ್ತ್ರಿ ಅರಳಗುಂಡಗಿ, ವೀರೇಶ್ ಗವಾಯಿಗಳು ಮತ್ತು ರುದ್ರಸ್ವಾಮಿ ಮೇಲಿನಮಠ ಅವರು ನಡೆಸಿಕೊಡುತ್ತಿರುವ ಈ ಪುರಾಣ ಪ್ರವಚನವನ್ನು ಎಲ್ಲ ಸುರಕ್ಷತಾ ಕ್ರಮ ಹಾಗೂ ನಿರ್ದಿಷಟ ಅಂತರ ಕಾಪಾಡುವ ಮೂಲಕ ನಡೆಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ಜ. 6ರಂದು ಸಂಜೆ ತೋಂಟದಾರ್ಯರ ಕರ್ತೃ ಗದ್ದುಗೆಗೆ ದೀಪೋತ್ಸವ, 7ರಂದು ಬೆಳಿಗ್ಗೆ 6 ಗಂಟೆಗೆ ಉಭಯ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಂಜೆ 5ಕ್ಕೆ ಧರ್ಮಸಭೆ ನಡೆಯಲಿದೆ. ಆದರೆ, ತದ ನಂತರ ನಡೆಯಬೇಕಿದ್ದ ರಥೋತ್ಸವವನ್ನು ಕೈಬಿಡಲಾಗಿದೆ ಎಂದೂ ಪೂಜ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.