ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಬಾಣಿ ಅಡುಗೆದಾರರಿಗೆ ಸಂಘಟಕರಿಂದ ಕಿರುಕುಳ ಆರೋಪ

ಆಲ್‍ ಇಂಡಿಯಾ ಬಂಜಾರ ಸೇವಾ ಸಂಘ ದೂರು
Published 26 ಜುಲೈ 2023, 13:47 IST
Last Updated 26 ಜುಲೈ 2023, 13:47 IST
ಅಕ್ಷರ ಗಾತ್ರ

ಲಿಂಗಸುಗೂರು: ಸಮಾಜ ಕಲ್ಯಾಣ ಇಲಾಖೆ ಅಧೀನದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿ ಕೆಲಸ ಮಾಡುತ್ತಿರುವ ಲಂಬಾಣಿ ಸಮುದಾಯದ ಅಡುಗೆದಾರರಿಗೆ ಕೆಲ ಸಂಘಟನೆಯ ಮುಖಂಡರು ಜಾತಿ ನಿಂದನೆ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ  ಆಲ್‍ ಇಂಡಿಯಾ ಬಂಜಾರ ಸೇವಾ ಸಂಘದ ತಾಲ್ಲೂಕು ಘಟಕವು ದೂರು ಸಲ್ಲಿಸಿದೆ.

ವಸತಿ ನಿಲಯಕ್ಕೆ ಮಂಗಳವಾರ ಭೇಟಿ ನೀಡಿದ್ದ ಡಾ.ಬಿ.ಆರ್‌.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ನಾಗೇಶ ಅವರಿಗೆ ಬಂಜಾರ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಲಾಲಪ್ಪ ಠಾಠೋಡ್‌, ಶಂಕರ್ ಪವಾರ ನೇತೃತ್ವದಲ್ಲಿ ದೂರು ಸಲ್ಲಿಸಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಸಂಘಟನೆಯ ಪುರುಷ ಅಧ್ಯಕ್ಷರು ಬಾಲಕಿಯರ ವಸತಿ ನಿಲಯಕ್ಕೆ ಅಕ್ರಮ ಪ್ರವೇಶ ಮಾಡಿದ್ದು, ವಸತಿ ನಿಲಯದ ಮಕ್ಕಳಲ್ಲಿ ಹಾಗೂ ಅಡುಗೆದಾರರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಬಂಜಾರ ಮಹಿಳಾ ಅಡುಗೆದಾರರ ಮೇಲೆ ಸುಳ್ಳು ಆರೋಪದ ದೂರು ನೀಡಿ ಕೆಲಸದಿಂದ ತೆಗೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಕ್ರಮ ಪ್ರವೇಶ ಮಾಡಿ ಜಾತಿ ತಾರತಮ್ಯ ಮತ್ತು ಮಾನಸಿಕ ಹಿಂಸೆ ನೀಡುತ್ತಿರುವ ಸಂಘಟಕರ ಮೇಲೆ ಕಾನೂನು ಕ್ರಮ ಕೈಗೊಂಡು ಬಂಜಾರ ಸಮಾಜದ ಅಡುಗೆದಾರರನ್ನು ಯಥಾಸ್ಥಿತಿ ಮುಂದುವರೆಸಬೇಕು ಎಂದು ಒತ್ತಾಯಿಸಿದ್ದಾರೆ.

ಮನವಿ: ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರ ಮೇಲೆ ಕೆಲಸ ಮಾಡುವ ಅಡುಗೆದಾರರು, ಸಹಾಯಕರು, ಕಾವಲುಗಾರರನ್ನು ಕಾಯಂಗೊಳಿಸಬೇಕು. ಇಲಾಖೆಗೆ ಸಂಬಂಧಿಸಿದ ಕಾಯಂ ಅಧಿಕಾರಿ ನಿಯೋಜನೆ ಮಾಡಬೇಕು. ಸಂಖ್ಯೆ ಆಧರಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ತಾಲ್ಲೂಕು ಸಂಚಾಲಕ ಮೋಹನ್‌ ಗೋಸ್ಲೆ, ಬಿಎಸ್ಪಿ ಮುಖಂಡ ಅನಿಲಕುಮಾರ ಒತ್ತಾಯಿಸಿದ್ದಾರೆ.

ಲಿಂಗಸುಗೂರು ಬಿ.ಆರ್ ಅಂಬೇಡ್ಕರ್ ಬಾಲಕೀಯರ ವಸತಿ ನಿಲಯಕ್ಕೆ ಮಂಗಳವಾರ ಭೇಟಿ ನೀಡಿದ್ದ ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗೇಶ ಅವರಿಗೆ ಸಂಘಟನೆಗಳ ಮುಖಂಡರು ದೂರು ಸಲ್ಲಿಸಿದರು
ಲಿಂಗಸುಗೂರು ಬಿ.ಆರ್ ಅಂಬೇಡ್ಕರ್ ಬಾಲಕೀಯರ ವಸತಿ ನಿಲಯಕ್ಕೆ ಮಂಗಳವಾರ ಭೇಟಿ ನೀಡಿದ್ದ ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗೇಶ ಅವರಿಗೆ ಸಂಘಟನೆಗಳ ಮುಖಂಡರು ದೂರು ಸಲ್ಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT