ಬುಧವಾರ, ಸೆಪ್ಟೆಂಬರ್ 22, 2021
23 °C

ಚಿಂಚೋಳಿ: ಭರ್ತಿಯತ್ತ ಚಂದ್ರಂಪಳ್ಳಿ ಜಲಾಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯ ಭರ್ತಿಯತ್ತ ಸಾಗಿದ್ದು, ಗುರುವಾರ ಬೆಳಿಗ್ಗೆ ನೀರಿನ ಮಟ್ಟ 1,612 ಅಡಿ ದಾಟಿದೆ.

ಜಲಾಶಯದ ನೀರು ಸಂಗ್ರಹಣೆಯ ಗರಿಷ್ಠ ಮಟ್ಟ 1,618 ಅಡಿ ಇದ್ದು, 1613 ಅಡಿ ನೀರಿನ ಮಟ್ಟ ತಲುಪಿದರೆ ಹೆಚ್ಚುವರಿ ನೀರು ಬೀಡಲಾಗುವುದು ಎಂದು ಸಕಾಯಕ ಕಾರ್ಯಪಾಲಕ ಎಂಜಿನಿಯರ್ ವೈಜನಾಥ ಅಲ್ಲುರೆ ತಿಳಿಸಿದ್ದಾರೆ.

ಸಧ್ಯ 550 ಕ್ಯುಸೆಕ್ ಒಳಹರಿವಿದ್ದು, ಜಲಾಶಯದ ಸುತ್ತಲಿನ ಪ್ರದೇಶ ನಯನ ಮನೋಹರವಾಗಿದ್ದು ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಚಂದ್ರಂಪಳ್ಳಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಒಳ ಹರಿವು ಹೆಚ್ಚಾಗಿದೆ. ಜಲಾಶಯ ಭರ್ತಿಯಾದರೆ ಹೆಚ್ಚುವರಿ ನೀರು ನದಿಗೆ ಬಿಡಲಾಗುವುದು. ಇದರ ಕೆಳ ಭಾಗದಲ್ಲಿ ಬರುವ ಗ್ರಾಮಗಳ ಜನರು ಎಚ್ಚರ ವಹಿಸಬೇಕು‘ ಎಂದು ಕಾರ್ಯಪಾಲಕ ಎಂಜಿನಿಯರ್ ಎಚ್.ಸಂಗಮನಾಥ ಹೇಳಿದರು.

ಐನೋಳ್ಳಿ, ಪಟಪಳ್ಳಿ, ಚಿಂಚೋಳಿ, ಚಂದಾಪುರ ಹಾಗೂ ಮುಲ್ಲಾಮಾರಿ ನದಿ ಪಾತ್ರದ ಜನರು ಎಚ್ಚರಿಕೆ ವಹಿಸಬೇಕು. ನದಿಗೆ ಇಳಿಯುವುದಾಗಲಿ, ಜಾನು ವಾರುಗಳಿಗೆ ನೀರು ಕುಡಿಸಲು ಕರೆದೊಯ್ಯುವುದಾಗಲಿ, ಮಹಿಳೆ ಯರು ಬಟ್ಟೆತೊಳೆಯಲು ನದಿಗೆ ಹೋಗ ಬಾರದು ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

‘ವಾರದಲ್ಲಿ ಹಕ್ಕುಪತ್ರ ವಿತರಣೆ’: ‘ನಾಗರಾಳ ಜಲಾಶಯದಲ್ಲಿ ಮುಳುಗ ಡೆಯಾದ ಗಡಿಲಿಂಗದಳ್ಳಿ ಗ್ರಾಮದ ಸಂತ್ರಸ್ತರಿಗೆ ವಾರದಲ್ಲಿ ಹಕ್ಕುಪತ್ರಗಳ ವಿತರಣೆಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಕಲಬುರ್ಗಿ ನೀರಾವರಿ ವೃತ್ತದ ಮುಖ್ಯ ಎಂಜಿನಿಯರ್ ಆರ್.ಎಲ್.ವೆಂಕಟೇಶ ಭರವಸೆ ನೀಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೌರಿಶಂಕರ ಉಪ್ಪಿನ್ ತಿಳಿಸಿದ್ದಾರೆ.

ಈಚೆಗೆ ಗಡಿಲಿಂಗದಳ್ಳಿಯ ಪುನರ್ವಸತಿ ಹಾಗೂ ಸಂಗಮೇಶ್ವರ ದೇಗುಲಕ್ಕೆ ಭೇಟಿ ನೀಡಿದರು. ಅರ್ಧಕ್ಕೆ ನಿಂತ ದೇವಾಲಯದ ಪೂರ್ಣಗೊಳಿಸಬೇಕು. ಪುನರ್ವಸತಿ ಕೇಂದ್ರದ ಸಂಪರ್ಕ ರಸ್ತೆಯ ದುರಸ್ತಿಪಡಿಸುವಂತೆ ಸ್ಥಳೀಯರು ಮನವಿ ಮಾಡಿದರು.

‘ರಸ್ತೆ ಕಾಮಗಾರಿ ನನ್ನ ವ್ಯಾಪ್ತಿಗೆ ಬರುವುದಿಲ್ಲ. ನೀರಾವರಿ ನಿಗಮದಿಂದ ದೇವಾಲಯದ ಕಾಮಗಾರಿ ನಡೆಯುತ್ತಿದೆ. ಬಾಕಿ ಇರುವ ಅನುದಾನ ಒದಗಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇನೆ ಎಂಬ ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.

ಬಹಳಷ್ಟು ಜನರಿಗೆ ಹಕ್ಕುಪತ್ರಗಳು ಲಭಿಸಿಲ್ಲ. ಸ್ಥಳೀಯರ ಜತೆ ಕೈಜೋಡಿಸಿ ನೀರಾವರಿ ಇಲಾಖೆಯ ಎಂಜಿನಿಯರ್‌ಗಳು ಮಾರಾಟ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯರು ಮನವಿ ಮಾಡಿದರು.

ನಾಗರಾಳ ಜಲಾಶಯ ವೀಕ್ಷಿಸಿ ಜಲಾಶಯದ ಕೋಡಿಯ ಗೇಟ್‌ಗಳ ಕಾರ್ಯಕ್ಷಮತೆ ಪರಿಶೀಲಿಸಿದರು. ಕಾರ್ಯಪಾಲಕ ಎಂಜಿನಿಯರ್ ಸೂರ್ಯಕಾಂತ ಮಾಲೆ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಣಮಂತ ಪೂಜಾರಿ, ರವೀಂದ್ರನಾಥ ಕುಲಕರ್ಣಿ, ಜಗನ್ನಾಥ ಜಾಧವ, ಲಕ್ಷ್ಮಿಕಾಂತ ಚೊಂಚಿ, ಶಾಮರಾವ್ ಚಿಟಗುಪ್ಪ, ಸಂಗಪ್ಪ ದಂಡಿನ್, ವಿಜಯಕುಮಾರ ಉಪ್ಪಿನ್, ಭವಸಿಂಗ್, ನಾಮದೇವ ರಾಠೋಡ, ಶಿವಕುಮಾರ ರಾಠೋಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು