ಚಿಂಚೋಳಿ: ‘ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಖಾಸಗಿ ಶಾಲೆಗಳ ಮಾದರಿಯಲ್ಲಿ ವಾರ್ಷಿಕೋತ್ಸವದಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಲಕ್ಷ್ಮಯ್ಯ ಹೇಳಿದರು.

ತಾಲ್ಲೂಕಿನ ಹಸರಗುಂಡಗಿ ಶರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 75ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಯಪ್ಪ ಚಾಪಲ್ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರಿದ್ದಾರೆ. ಮೂಲಸೌಕರ್ಯಗಳು ಉತ್ತಮವಾಗಿವೆ. ಪಠ್ಯಪುಸ್ತಕ, ಸಮವಸ್ತ್ರ ಉಚಿತವಾಗಿ ನೀಡಲಾಗುತ್ತಿದೆ. ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಲು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು’ ಎಂದು ಮನವಿ ಮಾಡಿದರು.

ಎಸ್ಡಿಎಂಸಿ ಅಧ್ಯಕ್ಷ ವಿಠಲ ಖಾಶೆಂಪುರ, ಉಪಾಧ್ಯಕ್ಷೆ ಕವಿತಾ ಶ್ರೀಕಾಂತ, ಅತಿಥಿಗಳಾಗಿ ಶಿಕ್ಷಣ ಪ್ರೇಮಿಗಳಾದ ಶಂಕ್ರಪ್ಪ ಕೋರಿ, ರಾಜಶೇಖೆ ನಿಪ್ಪಾಣಿ, ಹೋರಾಟಗಾರ ಕಾಶಿನಾಥ ಸಿಂಧೆ, ಮುಖಂಡರಾದ ಶ್ರೀಮಂತ ಚೇಂಗಟಾ, ಸೂರ್ಯಕಾಂತ, ಶಾಂತಕುಮಾರ, ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಉಪಾಧ್ಯಕ್ಷ ರಾಘವೇಂದ್ರರೆಡ್ಡಿ ಗುಡೆಪನೋರ್ ಸೇರಿದಂತೆ ಮಕ್ಕಳ ಪಾಲಕರು ಪಾಲ್ಗೊಂಡಿದ್ದರು.

ಮುಖ್ಯಶಿಕ್ಷಕ ಮುರಶಿದ್ ದೇವಕತೆ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಕಲ್ಯಾಣಮ್ಮ ಪ್ರಾಸ್ತಾವಿಕ ಮಾತನಾಡಿದರು. ಸೂರಪ್ಪ ಸ್ವಾಗತಿಸಿದರು. ಸಿದ್ದಮ್ಮ ಐರೋಡಗಿ ನಿರೂಪಿಸಿದರು. ಇಂದುಮತಿ ವಂದಿಸಿದರು.

ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಆದರ್ಶ ವಿದ್ಯಾರ್ಥಿಯಾಗಿ ರಾಜಶೇಖರ ಗಿರಿಮ್ಮಪ್ಪ, ಆದರ್ಶ ವಿದ್ಯಾರ್ಥಿನಿ ಅಂಕಿತಾ ಬಂಡಪ್ಪ, ಬೆಸ್ಟ್ ಚಾಂಪಿಯನ್ ಬಾಲಕ ಪ್ರಜ್ವಲ್, ಬೆಸ್ಟ್ ಚಾಂಪಿಯನ್ ಬಾಲಕಿ ನಾಗಲಕ್ಷ್ಮಿ ಪುರಸ್ಕಾರ ವಿತರಿಸಲಾಯಿತು.

ಹಸರಗುಂಡಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ 1951ರಲ್ಲಿ ಸ್ಥಾಪನೆಯಾಗಿದ್ದು ಈಗ 75 ವರ್ಷ ತುಂಬುತ್ತಿದೆ. ಈ ಶಾಲೆ ಗ್ರಾಮದ ಸಾವಿರಾರು ಜನರಿಗೆ ಜ್ಞಾನಧಾರೆ ಎರೆದಿದೆ
ರಾಜಶೇಖರ ನಿಪ್ಪಾಣಿ ಶಿಕ್ಷಣ ಪ್ರೇಮಿ ಹಸರಗುಂಡಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.