ಕಮಲಾಪುರ: ಕೇವಲ ನಾಲ್ಕು ವರ್ಷದ ಅವಧಿಗೆ ಸೈನ್ಯಕ್ಕೆ ಭರ್ತಿ ಮಾಡಿಕೊಳ್ಳುವ ಕೇಂದ್ರ ಸರ್ಕಾದ ಅವೈಜ್ಞಾನಿಕ ಅಗ್ನಿಪಥ್ ಯೋಜನೆಯಿಂದ ಯುವಕರ ಬದುಕು ಅತಂತ್ರಗೊಳ್ಳಲಿದೆ ಎಂದು ಕಾಂಗ್ರೆಸ್ ಮುಖಂಡ ವಿಜಯಕುಮಾರ ಜಿ.ರಾಮಕೃಷ್ಣ ತಿಳಿಸಿದರು.

ಅಗ್ನಿಪಥ್ ಯೋಜನೆ ವಿರೋಧಿಸಿ ಕಮಲಾಪುರ ತಹಶೀಲ್ದಾರ ಕಚೇರಿ ಬಳಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ವತಿಯಿಂದ ಸೋಮವಾರ ಆಯೋಜಿಸಿದ್ದ ಧರಣಿ ಸತ್ಯಾಗ್ರಹಲ್ಲಿ ಅವರು ಮಾತನಾಡಿದರು.

17–18ನೇ ವಯಸ್ಸಿನಲ್ಲಿ ವಿದ್ಯಾಭ್ಯಾಸದ ವಿದ್ಯಾಭ್ಯಾಸ ಮೊಟಕುಗೊಳಿಸಿ ಸೈನ್ಯ ಸೇರುವ ಯುವಕರಿಗೆ ಉದ್ಯೋಗ ಭದ್ರತೆಯೂ ಇಲ್ಲ. ಕೇವಲ ನಾಲ್ಕು ವರ್ಷಗಳಲ್ಲಿ ಮನೆಗೆ ಮರಳುವ ಯುವಕ ಜೀವನ ನಿರ್ವಹಣೆ ದುಸ್ಥರವಾಗುತ್ತದೆ. ದೇಶ ರಕ್ಷಣೆ ಮಾಡುವ ಸೈನಿಕರನ್ನು ಗುತ್ತಿಗೆಯಾಧಾರದ ಮೇಲೆ ನೇಮಿಸಿಕೊಂಡು ಬಳಸಿ ಬಿಸಾಡುವ ಹುನ್ನಾರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ್ದಾಗಿದೆ. ದೇಶದೆಲ್ಲಡೆ ಯುವಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಈ ಅಗ್ನಿಪಥ್ ಕೂಡಲೆ ವಾಪಸ ಪಡೆಯಬೇಕು. ಇಲ್ಲದಿದ್ದರೆ ದೇಶ್ಯಾದ್ಯಂತ ಜನ ದಂಗೆ ಏಳುವುದು ಖಚಿತ ಎಂದು ಎಚ್ಚರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ್ ಮಾತನಾಡಿ, ಅಗ್ನಿಪಥ್ ದೇಶದ ಜನರಿಗೆ ಮಾರಕವಾಗಿದೆ. ಸೈನಿಕರ ವೃತ್ತಿಗೆ ಅಗೌರವ ತೋರಿದಂತೆ. ಜನ ವಿರೋಧಿ ಕಾನೂನು, ಯೋಜನೆಗಳು, ಹೇಳಿಕೆಗಳನ್ನು ನೀಡುವ ಮೂಲಕ ವಿವಾದಗಳನ್ನು ಹುಟ್ಟು ಹಾಕುವ ಬಿಜೆಪಿ ಜನರ ಗಮನ ಬೇರೆಡೆ ಸೆಳೆಯುವ ಕುತಂತ್ರ ರೂಪಿಸುತ್ತಿದೆ. ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆಯಿಂದ ತತ್ತರಿಸಿರುವ ನಾಗರಿಕರು ಬಿಜೆಪಿ ಸರ್ಕಾರದ ವಿರದ್ದ ಸಿಡಿದೇಳು ಮುನ್ಸೂಚನೆಗಳಿವೆ. ಈ ಸಮಯದಲ್ಲಿ ಹಿಜಾಬ್, ಹಲಾಲ್, ಅಜಾನ್, ಕೃಷಿ ಕಾಯ್ದೆ, ಅಗ್ನಿಪಥ್ ಯೋಜನೆಗಳ ಮೂಲಕ ಯಾಮಾರಿಸಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರಣಗೌಡ ಡಿ. ಪಾಟೀಲ, ಗುರುರಾಜ ಮಾಟುರ, ಗುರುರಾಜ ಪಾಟೀಲ, ನಿರ್ಮಲಾ ಬರಗಾಲಿ, ಗುಂಡಪ್ಪ ಸಿರಡೋಣ, ಮಜರ ಅಲಿ ದರ್ಜಿ, ನಿಂಗಪ್ಪ ಬಿ ಪ್ರಬುದ್ದಕರ್, ಶರಣು ಗೌರೆ, ಮಹಾದೇವ ಬಬಲಾದ, ನಿಜಪ್ಪ ಕಾಂಬಳೆ, ಶರಣು ರಾಜೇಶ್ವರ, ಡಾ.ಪ್ರಕಾಶ ಹಾಗರಗಿ, ಸುಭಾಷ್ ಮುರುಡ್, ಜಗದೇವಪ್ಪ ಅಂಕಲಗಿ, ಕಮಲಾಬಾಯಿ ಸಾಗರ, ಹಣಮಂತ ಹರಸೂರು, ಶರಣು ಕುಂಬಾರ, ಶಶಿ ಬಿರಾದಾರ ಸಿರಗಾಪುರ, ರಾಜು ಹಾಲು, ಶಿವಕುಮಾರ ಧನ್ನೂರು, ಕುಪೇಂದ್ರ ಹೈಬತ್ತಿ, ಸುಕೇಂದ್ರ ಖಿಂಡಿ, ಅರ್ಜುನ ವಾಲಿ, ಅಶೋಕ ಗೌರೆ, ಬಾಬುರಾವ ಸೋನಾದಿ, ಸತೀಶ ಜಾಧವ, ಮಂಜು ಸಿಕೆ, ಮೋಹನ ನಾವದಗಿ, ಶಿವರಾಜ ಮೂಕಿ, ನಾಗೇಶ ಬೂಪತಿ, ಮಸ್ತಾನ ಜಮಾದರ್, ಗೌತಮ ಸಿರಗಾಪುರ ಇದ್ದರು.

‘ಯುವಕರ ಕಾಳಜಿ ನಿರ್ಲಕ್ಷಿಸಿದ ಸರ್ಕಾರ’
ಸೇಡಂ. ಅಗ್ನಿಪಥ್ ಯೋಜನೆ ಜಾರಿಗೊಳಿಸುವ ಮೂಲಕಕೇಂದ್ರ ಸರ್ಕಾರ ದೇಶದ ಯುವಕರ ಭವಿಷ್ಯದ ಮೇಲೆ ಚೆಲ್ಲಾಟವಾಡುತ್ತಿದೆ. ಯುವಕರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ವಾಗ್ದಾಳಿ ನಡೆಸಿದರು.

ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಎದುರು ಸೇಡಂ ಮತ್ತು ಮುಧೋಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಗ್ನಿಪಥ್ ಯೋಜನೆ ವಿರೋಧಿ ಸೋಮವಾರ ಆಯೊಜಿಸಿದ್ಧ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಈ ಹಿಂದೆ ನಮ್ಮ ಸರ್ಕಾರ ಆಡಳಿತದಲ್ಲಿದ್ದಾಗ ಸೈನಿಕರಿಗೆ 15 ವರ್ಷ ಕಾಯಂ ನೌಕರಿಯಿತ್ತು. ನಂತರ ನಿವೃತ್ತಿ ಪಡೆದ ಮೇಲೆ ಅವರಿಗೆ ಸರ್ಕಾರದಿಂದ ಸಹಾಯಧನ ಮಂಜೂರಾಗಿ, ಮುಂದಿನ ಕೆಲಸಕ್ಕೆ ಸೇರಿಕೊಳ್ಳಬಹುದಾಗಿತ್ತು. ಆದರೆ ಈಗಿನ ಕೇಂದ್ರ ಸರ್ಕಾರ ಗುತ್ತಿಗೆದಾರರ ಮೂಲಕ ದೇಶ ಸೇವೆಗೆ ಯುವಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದು, ಇದರಿಂದ ಯುವಕರಿಗೆ ಯಾವುದೇ ರೀತಿಯಲ್ಲಿ ಲಾಭವಿಲ್ಲ. ಸರ್ಕಾರದ ಅನೇಕ ಯೋಜನೆಗಳು ಭವಿಷ್ಯದ ದೂರದೃಷ್ಟಿ ಹೊಂದದೆ, ತಾತ್ಕಾಲಿಕತೆಯಿಂದ ಕೂಡಿವೆ. ಹೀಗಾಗಿ ಯಾವುದೇ ಯೋಜನೆಗಳು ಯಶಸ್ವಿಯಾಗಿಲ್ಲ ಎಂದು ದೂರಿದರು.

ಕೇವಲ ನಾಲ್ಕು ವರ್ಷಗಳ ಕಾಲ ಸರ್ಕಾರ ಯುವಜನರನ್ನು ಬಳಸಿಕೊಂಡು ನಂತರ ಅವರನ್ನು ಮನೆಗೆ ಕಳಿಸಿದ್ದಲ್ಲಿ ಅವರ ಭವಿಷ್ಯ ಏನಾಗಬೇಕು. ಸಂಸಾರ ಸಾಗಿಸಬೇಕಾದ ಸಂದರ್ಭದಲ್ಲಿ ಅವರು ರಸ್ತೆ ಮೇಲೆ ನಿಲ್ಲಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆ ಹಿಂಪಡೆಯಬೇಕುಟ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ನಂದಿಗ್ರಾಮ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ, ವೆಂಕಟರಾಮರೆಡ್ಡಿ ಕಡತಾಲ, ಹೇಮಾರೆಡ್ಡಿ ಪಾಟೀಲ, ಸತೀಶರೆಡ್ಡಿ ರಂಜೋಳ, ಬಸವರಾಜ ಪಾಟೀಲ ಊಡಗಿ, ಅಶೋಕ ಫಿರಂಗಿ, ದಾಮೋದರರೆಡ್ಡಿ ಪಾಟೀಲ, ಮುಕ್ರಂಖಾನ್, ಜೈಭೀಮ ಊಡಗಿ, ಸಿದ್ದು ಬಾನಾರ್, ರಾಮಯ್ಯ ಪೂಜಾರಿ, ವಿಶ್ವನಾಥ ಪಾಟೀಲ, ಸತ್ತರ ನಾಡೆಪಲ್ಲಿ, ವಿಲಾಸೌತಂ, ವೆಂಕಟರಾಮರೆಡ್ಡಿ ಹೈಯ್ಯಾಳ, ಜಗನ್ನಾಥ ಚಿಂತಪಳ್ಳಿ, ಅನಂತಯ್ಯ ಮುಸ್ತಾಜರ್, ಚನ್ನಬಸ್ಸಪ್ಪ ಹಾಗರಗಿ, ರಾಜಶೇಖರ ಪುರಾಣಿಕ್, ರವಿ ಸಾಹು ತಂಬಾಕೆ, ಸದಾಶಿವರೆಡ್ಡಿ ಗೋಪನಪಲ್ಲಿ, ಹೇಮ್ಲಾನಾಯಕ, ಸಂತೋಷ ಕುಲಕರ್ಣಿ, ನಾಗಕುಮಾರ ಎಳ್ಳಿ, ಸೈಯದ್ ನಾಜಿಮೋದ್ದಿನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.