ಶನಿವಾರ, ಜೂನ್ 25, 2022
25 °C

ಕಲುಬರಗಿ: ಪರೀಕ್ಷಾ ಬಾಹ್ಯ ಹಿರಿಯ ಮೇಲ್ವಿಚಾರಕರ ನೇಮಕಾತಿ ರದ್ದತಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲುಬರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳ ಬಾಹ್ಯ ಹಿರಿಯ ಮೇಲ್ವಿಚಾರಕರ ನೇಮಕಾತಿ ರದ್ದುಪಡಿಸಿದ ಆದೇಶವನ್ನು ಹಿಂಪಡೆಯುವಂತೆ ಒತ್ತಯಿಸಿ ಹೈದರಾಬಾದ್ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಪದಾಧಿಕಾರಿಗಳು ಶನಿವಾರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಅವರಿಗೆ ಮನವಿಪತ್ರ ಸಲ್ಲಿಸಿದರು.

ಸಂಘದ ವಿಭಾಗೀಯ ಅಧ್ಯಕ್ಷ ಡಾ.ಶರಣಪ್ಪ ಸೈದಾಪುರ ಮಾತನಾಡಿ, ಪರೀಕ್ಷಾ ಮತ್ತು ಇಡೀ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುತ್ತಿರುವ ವಿಶ್ವವಿದ್ಯಾಲಯದ ಕ್ರಮವು ಪ್ರಜಾತಂತ್ರ ವಿರೋಧಿಯಾಗಿದೆ. ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜು ಅಧ್ಯಾಪಕರಿಗೂ ಪರೀಕ್ಷಾ ಮೇಲ್ವಿಚಾರಕರ ಪಟ್ಟಿಯಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. ಒಂದು ವೇಳೆ ಪರೀಕ್ಷಾ ಮೇಲ್ವಿಚಾರಕರ ಪಟ್ಟಿಯಲ್ಲಿ ಅನ್ಯಾಯ ಆಗಿದ್ದರೆ ಅದನ್ನು ಪರಿಷ್ಕರಿಸಬೇಕೆ ಹೊರತು ರದ್ದುಪಡಿಸಬಾರದು ಎಂದರು.

ಏಕಾಏಕಿ ರದ್ದತಿ ಮಾಡಿದ್ದರಿಂದ ಪರೀಕ್ಷಾ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರಿಗೆ ಅನ್ಯಾಯ ಮಾಡಿದಂತಾಗುತ್ತದೆ. ವಿಶ್ವವಿದ್ಯಾಲಯವು ತಾನೇ ಸಿದ್ಧಪಡಿಸಿದ ಪಟ್ಟಿಯನ್ನು ಉಲ್ಲಂಘಿಸುತ್ತಿರುವುದು ಸರಿಯಾದ ಕ್ರಮವಲ್ಲ. ಇದರಿಂದ ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ಬರುತ್ತದೆ. ಪದವಿ ಪರೀಕ್ಷೆಗಳು ಸುಗಮವಾಗಿ ನಡೆದು, ಗುಣಾತ್ಮಕ ಶಿಕ್ಷಣ ಖಾತ್ರಿಪಡಿಸಲು ವೀಕ್ಷಣಾ ತಂಡಗಳು ಮತ್ತು ಬಾಹ್ಯ ಹಿರಿಯ ಮೇಲ್ವಿಚಾರಕರ ನೇಮಕಾತಿ ಅವಶ್ಯಕವಾಗಿದೆ ಎಂದು ಹೇಳಿದರು.

ಪದಾಧಿಕಾರಿಗಳಾದ ಡಾ.ಚಿನ್ನಾ ಆಶಪ್ಪ, ಡಾ.ಶರಣಪ್ಪ ಗುಂಡಗುರ್ತಿ, ಡಾ.ಹಯ್ಯಾಳಪ್ಪ ಸುರಪೂರಕರ್, ಡಾ.ಗುರುದತ್ತ ಕುಲಕರ್ಣಿ, ಡಾ.ಜಗದೇವಪ್ಪ ಧರಣಿ, ಡಾ.ಕರಿಗೂಳೇಶ್ವರ, ಡಾ.ಗಾಂಧೀಜಿ ಮೋಳಕೆರೆ, ಡಾ.ಬಸವರಾಜ ಕೊಂಬಿನ್, ಡಾ.ಶ್ಯಾಮರಾವ ಶಿಡ್ಲೆ, ಡಾ.ಶಿವರಾಜ ಜಾಲಹಳ್ಳಿ, ಡಾ.ಚಂಪಾ, ಅರುಣಾ ತಂಬಾಕೆ, ಡಾ.ಮಾರುತಿ ಮಾರಪಳ್ಳಿ, ರಾಜು ಚಿಂಚೋಳಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು