ಆಳಂದ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನಲ್ಲಿ ಭಾನುವಾರ ಮರಾಠಿ ಪತ್ರಕರ್ತ ಸೇರಿದಂತೆ 8 ಜನರಲ್ಲಿ ಕೋವಿಡ್–19 ಪತ್ತೆಯಾಗಿದೆ.

ಆರೋಗ್ಯ ಇಲಾಖೆಗೆ ವರದಿ ತಲುಪಿದ ಬೆನ್ನಲ್ಲೇ ಎಲ್ಲರನ್ನೂ ಕಲಬರ್ಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ.

ಆಳಂದ ಪಟ್ಟಣದಲ್ಲಿ 63 ವರ್ಷದ ಪತ್ರಕರ್ತ, 56 ವರ್ಷದ ಮಹಿಳೆ ಹಾಗೂ 44 ವರ್ಷದ ಪುರುಷನಲ್ಲಿ ಕೋವಿಡ್ ಪತ್ತೆಯಾಗಿದೆ. ಇವರು ಕುಂಬಾರಗಲ್ಲಿಯ ಮೃತ ಬಾಲಕಿಯ ದ್ವಿತೀಯ ಸಂಪರ್ಕಕ್ಕೆ ಬಂದವರಾಗಿದ್ದಾರೆ.

ಪುರಸಭೆ ಅಧಿಕಾರಿಗಳು ಸೋಂಕಿತರ ಮನೆಯನ್ನು ಬೆಳಿಗ್ಗೆ ಸೀಲ್ಡೌನ್ ಮಾಡಿ, ಸುತ್ತ ಪತ್ರಾ ಶೀಟ್ ಹೊಡೆದು ಕುಟುಂಬದ ಸದಸ್ಯರನ್ನು ಹೋಂ ಕ್ವಾರಟೈನ್ನಲ್ಲಿ ಇರಿಸಿದ್ದಾರೆ.

ಹೊನ್ನಳ್ಳಿ ಗ್ರಾಮದಲ್ಲಿ ಸೋಂಕಿತ ಮೂವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇವರಲ್ಲಿ 6 ವರ್ಷದ ಮಗುವಿಗೂ ಸೋಂಕು ದೃಢಪಟ್ಟಿದೆ. ಉಳಿದಂತೆ 33 ವರ್ಷದ ಪುರುಷ ಹಾಗೂ 22 ವರ್ಷದ ಮಹಿಳೆಯು ಮುಂಬೈಯಿಂದ ಬಂದಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಬೆಳಿಗ್ಗೆ ಮನೆಯ ಸುತ್ತ ಪತ್ರಾಶೀಟ್ ಹೊಡೆದು ನೆರೆಹೊರೆ ಸಂಪರ್ಕ, ಸಂಚಾರ ಸ್ಥಗಿತಗೊಳಿಸಲಾಗಿದೆ. ಕುಟುಂಬ ಸದಸ್ಯರಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.