ಸೋಮವಾರ, ಅಕ್ಟೋಬರ್ 26, 2020
20 °C

 ಕಮಲಾಪುರ: ಹಳೆ ವೈಷಮ್ಯಕ್ಕೆ ದಿನಸಿ ತಾಂಡಾದಲ್ಲಿ ದಂಪತಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮಲಾಪುರ (ಕಲಬುರ್ಗಿ ಜಿಲ್ಲೆ): ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ತಾಲ್ಲೂಕಿನ ದಿನಸಿ ತಾಂಡಾದಲ್ಲಿ ಶುಕ್ರವಾರ ರಾತ್ರಿ ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಮಾರುತಿ ದೇವಲಾ (45) ಹಾಗೂ ಇವರ ಪತ್ನಿ ಶಾರದಾಬಾಯಿ ಮಾರುತಿ  (35) ಕೊಲೆಯಾದ ದಂಪತಿ. ಶಾರದಾಬಾಯಿ ಏಳು ತಿಂಗಳ ಗರ್ಭಿಣಿ ಆಗಿದ್ದರು. ಅಲ್ಲದೇ, ಈ ದಂಪತಿಗೆ ಈಗಾಗಲೇ ಆರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾನೆ.

ಶುಕ್ರವಾರ ರಾತ್ರಿ 11.30ರ ಸುಮಾರಿಗೆ ದಂಪತಿ ಮಕ್ಕಳ ಜೊತೆ ಮಲಗಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಗುಂಪು ಚಾಕುವಿನಿಂದ ಇರಿದು, ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿತು.


ದಿನಸಿ ತಾಂಡಾದಲ್ಲಿ ಶುಕ್ರವಾರ ರಾತ್ರಿ ಕೊರಿಯಾದ ದಂಪತಿಯ ಪುಟ್ಟ ಮಕ್ಕಳನ್ನು ತಾಂಡಾದ ಮಹಿಳೆಯರು ಸಂತೈಸಿದರು

ಅದೇ ಘಟನೆ ಕಾರಣವೇ?

ಕೆಲ ವರ್ಷಗಳ ಹಿಂದೆ ತಾಂಡಾದ ಯುವಕರಿಬ್ಬರ ವಿರುದ್ಧ ಈ ದಂಪತಿ ಕಿರುಕುಳಕ್ಕೆ ಸಂಬಂಧಪಟ್ಟಂತೆ ದೂರು ದಾಖಲಿಸಿದ್ದರು. ಅದರಲ್ಲಿ ಒಬ್ಬನಿಗೆ ಶಿಕ್ಷೆಯಾಗಿದ್ದು, ಜೈಲಿನಲ್ಲಿದ್ದಾನೆ. ಇನ್ನೊಬ್ಬ ಪರಾರಿಯಾಗಿದ್ದಾನೆ. ಈ ಜೋಡಿ ಕೊಲೆಗೆ ಇದೇ ವಿಷಯ ಕಾರಣವಾಗಿರಬಹುದೇ ಎಂದೂ ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ.

ಘಟನೆಯಿಂದ ಇಡೀ ತಾಂಡಾ ನಿವಾಸಿಗಳಲ್ಲಿ ಭಯದ ವಾತಾವರಣ ಮನೆ ಮಾಡಿದೆ. ಕಮಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು