ಗುರುವಾರ , ಅಕ್ಟೋಬರ್ 1, 2020
20 °C
ಕೊರೊನಾ ವಾರಿಯರ್ಸ್‌ಗಳಿಗೆ ಉಚಿತ ಚಿಕಿತ್ಸೆ: ಡಾ.ಭೀಮಾಶಂಕರ ಬಿಲಗುಂದಿ

ಕಲಬುರ್ಗಿ: ಬಸವೇಶ್ವರದಲ್ಲಿ ಇಂದಿನಿಂದ ಕೋವಿಡ್ ಲ್ಯಾಬ್ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇತ್ತೀಚೆಗೆ ಉದ್ಘಾಟನೆಯಾಗಿದ್ದ ಬಸವೇಶ್ವರ ಆಸ್ಪತ್ರೆಯ ಕೋವಿಡ್‌ ತಪಾಸಣಾ ಪ್ರಯೋಗಾಲಯ ಇದೇ 4ರಂದು ಆರಂಭವಾಗಲಿದ್ದು, ಇದಕ್ಕೆ ರಾಷ್ಟ್ರೀಯ ತಪಾಸಣಾ ಮತ್ತು ಮಾಪನಾಂಕ ನಿರ್ಣಯ ಮಂಡಳಿ ಮಾನ್ಯತೆ ನೀಡಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಮೂರು ತಪಾಸಣಾ ಕೇಂದ್ರಗಳು ಆರಂಭವಾದಂತಾಗಿದೆ. ಈಗಾಗಲೇ ಜಿಮ್ಸ್ ಮತ್ತು ಯುನೈಟೆಡ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಯುತ್ತಿದೆ.

ಕೋವಿಡ್ ಲ್ಯಾಬ್ ಆರಂಭ ಕುರಿತು ಹೇಳಿಕೆ ನೀಡಿರುವ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ,  ಸಾರ್ವಜನಿಕರಿಗಾಗಿ ಆರ್.ಟಿ.ಪಿ.ಸಿ.ಆರ್. ಮತ್ತು ರ‍್ಯಾಪಿಡ್ ಆಂಟಿಜೆನ್ ಟೆಸ್ಟಿಂಗ್‍ ಆರಂಭಿಸಲಾಗುವುದು ಈ ತಪಾಸಣೆಯ ವರದಿಯನ್ನು ಕೇವಲ 5 ಗಂಟೆಗಳಲ್ಲಿ ನೀಡಲಾಗುವುದು. ಕೋವಿಡ್ ವೈರಾಣುದೊಂದಿಗೆ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್‌ಗಳಾದ ವೈದ್ಯರು, ನರ್ಸ್, ಆಯಾ ಮತ್ತು ಇತರ ಸಿಬ್ಬಂದಿಗೆ ಪ್ರೋತ್ಸಾಹಕರ ಭತ್ಯೆಯಾಗಿ ₹ 50 ಸಾವಿರವರೆಗಿನ ಔಷಧಗಳನ್ನು ಮತ್ತು ಚಿಕಿತ್ಸೆಯನ್ನು ಒದಗಿಸಲಾಗುವುದು ಮತ್ತು ವೈದ್ಯರ ಮನೋಬಲ ತುಂಬಲು ಸುಮಾರು 80 ಕೊರೊನಾ ವಾರಿಯರ್ಸ್ ವೈದ್ಯರಿಗೆ ಬಡ್ತಿಯನ್ನು ನೀಡಲಾಗಿದೆ ಎಂದಿದ್ದಾರೆ.

ಬಸವೇಶ್ವರ ಆಸ್ಪತ್ರೆಯಲ್ಲಿ ಸುಮಾರು 2 ತಿಂಗಳಿಂದ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 30 ಐಸಿಯು  ಹಾಸಿಗೆ ಸುಮಾರು 30 ಹೆಚ್ಚಿನ ಹರವಿನ ಆಮ್ಲಜನಕ ಹಾಸಿಗೆಗಳು (ಹೈಫ್ಲೋ ಆಕ್ಸಿಜನ್ ಫೆಸಿಲಿಟಿ ಬೆಡ್) ಸುಮಾರು 50 ಕೋವಿಡ್ ಪಾಸಿಟಿವ್ ಕ್ವಾರಂಟೈನ್ ಹಾಸಿಗೆಗಳು, ಸುಮಾರು 100 ಲಕ್ಷಣ ರಹಿತ ಕೊರೊನಾ ಪಾಸಿಟಿವ್ ರೋಗಿಗಳ ಹಾಸಿಗೆಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ವಾರದಿಂದ ಹೊಸದಾಗಿ 25 ಐಸಿಯು ಹಾಸಿಗೆಗಳನ್ನು ಮತ್ತು ಪ್ಲಾಸ್ಮಾ ಥೆರಪಿಯನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು