ಬುಧವಾರ, ಸೆಪ್ಟೆಂಬರ್ 30, 2020
21 °C
ಜಿಮ್ಸ್, ಯುನೈಟೆಡ್‌ ಆಸ್ಪತ್ರೆ ಬಳಿಕ ಮೂರನೇ ಪ್ರಯೋಗಾಲಯಕ್ಕೆ ಚಾಲನೆ

ಬಸವೇಶ್ವರ ಆಸ್ಪತ್ರೆಯಲ್ಲಿ ಲ್ಯಾಬ್ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದ ಮಹಾದೇವಪ್ಪ ರಾಂಪೂರೆ ಮೆಡಿಕಲ್ ಕಾಲೇಜಿನ ಬಸವೇಶ್ವರ ಆಸ್ಪತ್ರೆಯಲ್ಲಿ ಬುಧವಾರ
ಕೋವಿಡ್‌–19 ಪ್ರಯೋಗಾಲಯ ಆರಂಭವಾಗುವುದರೊಂದಿಗೆ ನಗರದಲ್ಲಿ ಮೂರು ಪ್ರಯೋಗಾಲಯಗಳು
ಆರಂಭವಾದಂತಾಗಿದೆ.

ಇದರಿಂದಾಗಿ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್‌)ಯ ಮೇಲಿನ ಹೊರೆ ಕಡಿಮೆಯಾಗಲಿದೆ.

ಜಿಮ್ಸ್‌ ಬಳಿಕ ಯುನೈಟೆಡ್‌ ಆಸ್ಪತ್ರೆಯಲ್ಲಿ ಪ್ರಯೋಗಾಲಯವನ್ನು ಆರಂಭಿಸಲಾಗಿತ್ತು. ಬಸವೇಶ್ವರ ಆಸ್ಪತ್ರೆಯೂ ಲ್ಯಾಬ್‌ ಆರಂಭಿಸುವುದರೊಂದಿಗೆ ನಗರದಲ್ಲಿ ಮೂರು ಪ್ರಯೋಗಾಲಯಗಳು ಕಾರ್ಯಾರಂಭ ಮಾಡಿದಂತಾಗಿದೆ.‌

ಪ್ರಯೋಗಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ದತ್ತಾ
ತ್ರೇಯ ಪಾಟೀಲ ರೇವೂರ, ‘ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಸರ್ಕಾರಕ್ಕೆ ₹ 1 ಕೋಟಿ ದೇಣಿಗೆ ಕೊಟ್ಟಿದಲ್ಲದೆ ಕಲಬುರ್ಗಿ ಜನತೆಗೆ ಸಹಾಯ ಮಾಡಲು ಕೋವಿಡ್–19 ಪರೀಕ್ಷಾ ಕೇಂದ್ರ ಪ್ರಾರಂಭ ಮಾಡಿದೆ. ಸರ್ಕಾರದ ಕಡೆಯಿಂದ ಎಲ್ಲ ಸಹಾಯಕ್ಕೆ ಸದಾ ಸಿದ್ಧನಿದ್ದೇನೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹಾರಕೂಡ ಹಿರೇಮಠದ ಪೀಠಾಧಿಪತಿಗಳಾದ ಡಾ. ಚನ್ನವೀರ ಶಿವಾಚಾರ್ಯರು ಪರೀಕ್ಷಾ ಕೇಂದ್ರ ಸ್ಥಾಪಿಸಿದಕ್ಕೆ ಶ್ಲಾಘಿಸಿ ಆಶಿರ್ವದಿಸಿದರು.

ವಿಧಾನ ಪರಿಷತ್ ಸದಸ್ಯ ಡಾ. ಬಿ.ಜಿ. ಪಾಟೀಲರು ಮುಖ್ಯ ಅತಿಥಿಯಾಗಿದ್ದರು. ಹೈ–ಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಡಾ. ಶಿವಾನಂದ ದೇವರಮನಿ, ಕಾರ್ಯದರ್ಶಿ ನಿತಿನ್ ಜವಳಿ, ಆಡಳಿತ ಮಂಡಳಿ ಸದಸ್ಯರಾದ ವಿಜಯಕುಮಾರ ದೇಶಮುಖ, ಅರುಣಕುಮಾರ ಪಾಟೀಲ, ಡಾ. ಶರಣಬಸಪ್ಪ ಕಾಮರೆಡ್ಡಿ, ಸತೀಶಚಂದ್ರ ಹಡಗಲಿಮಠ, ಅನಿಲಕುಮಾರ ಮರಗೋಳ, ಎಂ.ಆರ್.ಎಂ.ಸಿ. ಕಾಲೇಜಿನ ಡೀನ್ ಡಾ. ಶರಣಗೌಡ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ. ಮಲ್ಲಿಕಾರ್ಜುನ ತೆಗನೂರ, ಪ್ರಯೋಗಾಲಯದ ನಿರ್ದೇಶಕ ಡಾ.ಎಸ್.ಎಂ. ಅವಂತಿ, ಡಾ. ಬಾಬುರಾವ ಶೇರಿಕಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.