ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸೋಲೇಶನ್ ಕೇಂದ್ರದಲ್ಲಿದ್ರೆ ಜೀವಂತ ಶವ ಆಗ್ತೀನಿ–ಕಾನ್‌ಸ್ಟೆಬಲ್ ಅಳಲು

ಕೇಂದ್ರದ ಅವ್ಯವಸ್ಥೆ ಕಂಡು ಕೋವಿಡ್‌ ಸೋಂಕಿತ ವಿಡಿಯೊ ಮಾಡಿ ದೂರು
Last Updated 29 ಜೂನ್ 2020, 4:12 IST
ಅಕ್ಷರ ಗಾತ್ರ

ಕಲಬುರ್ಗಿ: ‘ಯಾವ ಮೂಲಸೌಕರ್ಯವೂ ಇಲ್ಲದ ಕೋವಿಡ್‌ ಐಸೊಲೇಶನ್‌ ಕೇಂದ್ರದಲ್ಲಿ ನಾಯಿಯೂ ಇರುವುದಿಲ್ಲ. ಇಲ್ಲಿಯೇ‌ ಇನ್ನಷ್ಟು ದಿನ ಇದ್ದರೆ ಜೀವಂತ ಶವ ಆಗ್ತೀನಿ’ ಎಂದು ಫರಹತಾಬಾದ್‌ ಪೊಲೀಸ್‌ ಠಾಣೆಯ ಕೋವಿಡ್‌ ಸೋಂಕಿತ ಕಾನ್‌ಸ್ಟೆಬಲ್‌ ಒಬ್ಬರು ಹಿರಿಯ ಅಧಿಕಾರಿಗಳಿಗೆ ಆಡಿಯೊ ರೆಕಾರ್ಡಿಂಗ್ ಹಾಗೂ ವಿಡಿಯೊ ಕಳಿಸಿದ್ದಾರೆ.

ಕಮಿಷನರೇಟ್‌ ವ್ಯಾಪ್ತಿಯ ಪ್ರದೇಶದ ಎಲ್ಲ ಪೊಲೀಸ್‌ ಸಿಬ್ಬಂದಿಗೆ ಕೊರೊನಾ ತಪಾಸಣೆ ಮಾಡಿಸಲಾಗಿದ್ದು, ಅದರಲ್ಲಿ ಕೋವಿಡ್‌ ಸೋಂಕು ಇರುವುದು ದೃಢಪಟ್ಟ ಈ ಕಾನ್‌ಸ್ಟೆಬಲ್‌ರನ್ನು ಐಸೋಲೇಶನ್‌ ಕೇಂದ್ರಕ್ಕೆ ಕಳಿಸಲಾಗಿತ್ತು. ಅಲ್ಲಿ ಬೆಡ್‌ ಶೀಟ್‌, ತಲೆದಿಂಬು, ಕುಡಿಯುವ ನೀರಿನಂತಹ ಮೂಲಸೌಕರ್ಯಗಳು ಇರಲಿಲ್ಲ ಎಂದು ದೂರಿದ್ದಾರೆ.

ಇದಕ್ಕೆ ಹೇಳಿಕೆ ನೀಡಿರುವ ಪೊಲೀಸ್‌ ಕಮಿಷನರ್ ಸತೀಶಕುಮಾರ್ ಎನ್, ಆಂಬುಲೆನ್ಸ್‌ ಚಾಲಕ ಪೊಲೀಸರಿಗಾಗಿ ಕಾಯ್ದಿರಿಸಿರುವ ಐಸೋಲೇಶನ್‌ ಕೇಂದ್ರಕ್ಕೆ ಕರೆದೊಯ್ಯುವ ಬದಲು ಬೇರೆ ಕೇಂದ್ರಕ್ಕೆ ಕರೆದೊಯ್ದಿದ್ದರಿಂದ ಈ ಅವಾಂತರವಾಗಿದೆ. ನಂತರ ಕಾನ್‌ಸ್ಟೆಬಲ್‌ ಗಾಬರಿಯಾಗಿ ಸಂದೇಶ ಕಳಿಸಿದರು.

ಒಂದೇ ಗಂಟೆಯಲ್ಲಿ ಅವರನ್ನು ಪೊಲೀಸರಿಗಾಗಿ ನಿಗದಿಪಡಿಸಿದ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿ ಕುಡಿಯುವ ನೀರಿನ ಬಾಟಲಿ, ಸ್ಟೀಲ್ ಪ್ಲೇಟ್, ಟೂತ್ ಬ್ರಷ್, ಪೇಸ್ಟ್, 2 ಟವೆಲ್, ಬೆಡ್‌ ಶೀಟ್, 12 ಬ್ರೂ ಪ್ಯಾಕೆಟ್, ಅರ್ಧ ಕೆ.ಜಿ. ಹಾಲಿನ ಪೌಡರ್, ಅರ್ಧ ಕೆ.ಜಿ. ಸಕ್ಕರೆ, ಬಕೆಟ್, ಮಗ್, ಬಿಸಿ ನೀರು, ವೈಫೈ ಕನೆಕ್ಷನ್, ಮಾಸ್ಕ್, ಸ್ಯಾನಿಟೈಜರ್‌ ನೀಡಲಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT