ಗುರುವಾರ , ಸೆಪ್ಟೆಂಬರ್ 23, 2021
23 °C
ಹಣಕಾಸಿನ ವ್ಯವಹಾರಕ್ಕೆ ತಂಟೆ: ಕೆರೆಬೋಸಗಾ ಬಳಿ ಡಾಲರ್ ಮಹೇಶ ಕೊಲೆ ಪ್ರಕರಣ

ವ್ಯಕ್ತಿ ಕೊಲೆ: ಐವರು ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ತಾಲ್ಲೂಕಿನ ಕರೆಬೋಸಗಾ ಗ್ರಾಮದಲ್ಲಿ ಈಚೆಗೆ ನಡೆದ ಮಹೇಶ ಚಿಡುಗುಂಪಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆ ಪೊಲೀಸರು ಭಾನುವಾರ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇಲ್ಲಿನ ರಾಮನಗರದ ಮಲ್ಲಿಕಾರ್ಜುನ ಅಲ್ಲಾಪುರ ಅಲಿಯಾಸ್ ಕೋಳಿ ಮಲ್ಲು, ಹುಸೇನಿ ನಗರದ ಮಹ್ಮದಚಾಂದ್ ಭಾಗವಾನ್, ನಿಜಾಮ ಭಾರಿಯಾ, ಶೇಖರೋಜಾದ ಡೆಕ್ಕನ್ ಕಾಲೊನಿಯ ಆಸೀಫ್ ಸಲೀಂ ಅಹ್ಮದ್‌ ಮತ್ತು ದೇವಿ ನಗರದ ಕಿರಣ ಠಾಕೂರ ಬಂಧಿತರು. ಇವರಿಂದ ಕೊಲೆಗೆ ಬಳಸಿದ ಮಾಕರಾಸ್ತ್ರ ಹಾಗೂ ಶವ ಸಾಗಿಸಿದ ಆಟೊ ವಶಕ್ಕೆ ಪಡೆಯಲಾಗಿದೆ.

ಕೊಲೆಗೀಡಾದ ಮಹೇಶ ಚಿಡುಗುಂಪಿ ಅಲಿಯಾಸ್‌ ಡಾಲರ್ ಮಹೇಶ ಎಂ.ಒ.ಬಿ ಪಟ್ಟಿಯಲ್ಲಿದ್ದ. ಕೆಲ ವರ್ಷಗಳ ಹಿಂದೆ ತಾಜಸುಲ್ತಾನಪುರ ಗ್ರಾಮದಿಂದ ನಗರದ ಗಾಜಿಪುರದಲ್ಲಿ ವಾಸವಾಗಿದ್ದ. ಕಳವು ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಮಹೇಶ ಈಚೆಗಷ್ಟೇ ಬಿಡುಗಡೆಯಾಗಿ ಬಂದಿದ್ದ.

ಮಹೇಶ ಹಾಗೂ ಕೊಲೆ ಆರೋಪಿಗಳ ಮಧ್ಯೆ ಹಣಕಾಸಿನ ವ್ಯವಹಾರಕ್ಕಾಗಿ ಹಿಂದೆ ಜಗಳಗಳು ನಡೆದಿದ್ದವು. ಇದೇ ವೈಷಮ್ಯಕ್ಕೆ ಆತನನ್ನು ಕೊಲೆ ಮಾಡಿರುವುದಾಗಿ ಬಂಧಿತರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸುಲು, ಶ್ರೀಕಾಂತ ಕಟ್ಟಿಮನಿ, ಎಸಿಪಿ ಜೆ.ಎಚ್.ಇನಾಮದಾರ, ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಭಾಸು ಚವ್ಹಾಣ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.