ಕಲಬುರಗಿ: ‘ರಾಜ್ಯದಾದ್ಯಂತ ಭಾರಿ ಮಳೆ ಬಿದ್ದಿದ್ದರಿಂದ ಹೆಸರು, ಉದ್ದು ಸಂಪೂರ್ಣ ಹಾಳಾಗಿವೆ. ಅತಿವೃಷ್ಟಿಗೆ ಪರಿಹಾರ ನೀಡುವಂತೆ ಬಿಜೆಪಿಯ 17 ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎಂದು ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್.ಪಾಟೀಲ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದೊಂದು ತಿಂಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 50ರಷ್ಟು ಮಳೆ ಬಿದ್ದಿದೆ. ಇದರಿಂದ ಮುಂಗಾರಿನಲ್ಲಿ ಬಿತ್ತನೆಯಾಗಿದ್ದ ಹೆಸರು ಮತ್ತು ಉದ್ದು ರೈತರ ಕೈಸೇರುವುದು ಅನುಮಾನವಾಗಿದೆ. ಜಿಲ್ಲೆಯಲ್ಲಿ ಆರು ಲಕ್ಷ ಹೆಕ್ಟೇರ್ಗಿಂತ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾದ ತೊಗರಿಯೂ ಹಾಳಾಗುವ ಹಂತದಲ್ಲಿದೆ. ಇದಕ್ಕೆಲ್ಲ ಅತಿಯಾದ ಮಳೆ ಕಾರಣವಾಗಿದೆ. ಕೂಡಲೇ ಈ ಕುರಿತು ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಸಂಸದರು ಪರಿಹಾರ ಬಿಡುಗಡೆಗಾಗಿ ಒತ್ತಡ ಹೇರಬೇಕು’ ಎಂದರು.

ಕಾಂಗ್ರೆಸ್ ಹೈಮಾಂಡ್ ಸದ್ಯ ಮತಗಳುವಿನ ಕುರಿತು ದಾಖಲೆ ಸಮೇತ ಹೋರಾಟ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಹೈಕಮಾಂಡ್ ನಿಲುವಿನ ಬಗ್ಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಹಗುರವಾಗಿ ಮಾತನಾಡಿರುವುದು ಸರಿಯಲ್ಲ
ಬಿ.ಆರ್.ಪಾಟೀಲ, ಯೋಜನಾ ಆಯೋಗದ ಉಪಾಧ್ಯಕ್ಷ

ಅತಿವವೃಷ್ಟಿಯ ಅಂದಾಜು ಮಾಡಲು ರಾಜ್ಯ ಸರ್ಕಾರ ಕೂಡಲೇ ಸಮೀಕ್ಷಾ ತಂಡ ಕಳುಹಿಸುವಂತೆ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಮುಖಂಡರಾದ ಜಗನ್ನಾಥ ದೇಶಮುಖ, ರಾಜಕುಮಾರ ಯಂಕಂಚಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.