ಕಾರಟಗಿ ತಾಲ್ಲೂಕಿನಾದ್ಯಂತ ಕಂದಾಯ, ಕೃಷಿ ಇಲಾಖೆಗಳು ಜಂಟಿ ಸರ್ವೆ ನಡೆಸಿದ್ದು 1,434 ಹೆಕ್ಟೇರ್ ಭತ್ತದ ಬೆಳೆ ಹಾನಿಗೀಡಾಗಿದೆ. ಗ್ರಾಮ, ಕ್ಯಾಂಪ್‌ಗಳವಾರು ಸಮಗ್ರ ವರದಿ ಜಿಲ್ಲಾಧಿಕಾರಿಗೆ ಕಳುಹಿಸಲಾಗುತ್ತದೆ
ಎಂ. ಕುಮಾರಸ್ವಾಮಿ, ತಹಶೀಲ್ದಾರ್, ಕಾರಟಗಿ
ಹೆಚ್ಚು ಭತ್ತ, ಮೆಕ್ಕೆಜೋಳ, ತೊಗರಿ ಬೆಳೆಯಲಾಗಿದೆ. ಭತ್ತ ಹಾನಿ ಬಗ್ಗೆ ಕಂದಾಯ ಇಲಾಖೆಯೊಂದಿಗೆ ಸರ್ವೆ ಮಾಡಿ ಮೇಲಧಿಕಾರಿಗಳಿಗೆ ವರದಿ ಕಳಿಸಲಾಗಿದೆ
ಎಂ. ಕುಮಾರಸ್ವಾಮಿ, ತಹಶೀಲ್ದಾರ್, ಕಾರಟಗಿ
ಎಕರೆಗೆ ಸುಮಾರು 10 ಚೀಲದಷ್ಟು ಭತ್ತದ ಬೆಳೆ ನೆಲದ ಪಾಲಾಗಿದೆ. ಎಕರೆಗೆ ₹50 ಸಾವಿರ ಖರ್ಚು ಮಾಡಿದ್ದೇವೆ. ಎರಡು ಬಾರಿ ಬೆಳೆ ಹಾನಿಯಾಗಿದ್ದರೂರಿಹಾರ ನೀಡಲು ಸರ್ಕಾರ ಮೀನಮೇಷ ಮಾಡುತ್ತಿದೆ
ನಾರಾಯಣ ಪ ಈಡಿಗೇರ ರಾಜ್ಯ ರೈತ ಸಂಘದ ತಾಲ್ಲೂಕಾಧ್ಯಕ್ಷ
ರೈತರು ಭಾರಿ ಸಂಕಷ್ಟ ಎದುರಿಸಿ ಬೆಳೆ ಪಡೆಯಬೇಕಿದೆ. ಎಕರೆಗೆ ಅರ್ಧ ಲಕ್ಷದವರೆಗೆ ಖರ್ಚು ಮಾಡಲಾಗಿದೆ. ಸರ್ಕಾರ ಎಕರೆಗೆ ಕನಿಷ್ಠ ₹20 ಸಾವಿರ ಪರಿಹಾರ ನೀಡಿದರೆ ರೈತರು ಉಳಿಯುತ್ತಾರೆ. ಕಾಟಾಚಾರದ ಪರಿಹಾರದಿಂದ ಪ್ರಯೋಜನವಿಲ್ಲ