ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಯುಕೆ ಶೈಕ್ಷಣಿಕ ಮಾರ್ಗಸೂಚಿ ಸಿದ್ಧ: ಪ್ರೊ.ಎಂ.ಐ. ಸವದತ್ತಿ

ಸಂಸ್ತಾಪನಾ ದಿನಾಚರಣೆ
Last Updated 26 ಮಾರ್ಚ್ 2019, 15:05 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದೆ. ಶೈಕ್ಷಣಿಕ ಮಾರ್ಗಸೂಚಿ ಸಿದ್ಧಪಡಿಸಿದ್ದು, ಅದನ್ನು ಅನುಷ್ಠಾನಗೊಳಿಸುವ ಮೂಲಕ ವಿಶ್ವದ ಶ್ರೇಷ್ಠ ವಿದ್ಯಾಕೇಂದ್ರವಾಗುವಂತೆ ಮಾಡಬೇಕು’ ಎಂದು ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಶೈಕ್ಷಣಿಕ ಮಾರ್ಗಸೂಚಿ ಸಮಿತಿಯ ಅಧ್ಯಕ್ಷ ಪ್ರೊ.ಎಂ.ಐ. ಸವದತ್ತಿ ಹೇಳಿದರು.

ಆಳಂದ ತಾಲ್ಲೂಕು ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನ ಹಾಗೂ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಸ್ನಾತ್ತಕ ಕೋರ್ಸ್‌ಗಳನ್ನು ಕಾಲೇಜುಗಳು ಕಲಿಸಬೇಕು, ಸ್ನಾತ್ತಕೋತ್ತರ ಮತ್ತು ಸಂಶೋಧನಾ ಕಾರ್ಯಚಟುವಟಿಕೆಗಳನ್ನು ವಿಶ್ವವಿದ್ಯಾಲಯ ಮಾಡಬೇಕು ಎಂಬ ವಿಶ್ವವಿದ್ಯಾಲಯ ಧನ ಸಹಾಯ ಆಯೋಗಅಸಮಂಜಸ ನಿಯಮ ಜಾರಿಗೊಳಿಸಿತು.ಅಂದು ಕಾಲೇಜುಗಳು ಪ್ರತಿಷ್ಠಿತ ವಿದ್ಯಾಕೇಂದ್ರಗಳಾಗಿದ್ದವು ಹಾಗೂ ಹೊಸದಾಗಿ ಬಂದ ವಿಶ್ವವಿದ್ಯಾಲಯಗಳು ಆ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂದಿನ ಪ್ರತಿಷ್ಠಿತ ಕಾಲೇಜುಗಳ ವ್ಯವಸ್ಥೆಯನ್ನು ಉನ್ನತ ಶಿಕ್ಷಣಕ್ಕಾಗಿ ಬಳಸಿಕೊಳ್ಳಲು ನಾವು ವಿಫಲರಾದೆವು’ ಎಂದು ಹಿಂದಿನ ಘಟನಾವಳಿ ಮೆಲಕು ಹಾಕಿದರು.

‘ಇಂದಿನ ಶಿಕ್ಷಣ ವ್ಯವಸ್ಥೆ ದೇಶದ ಸಾಮಾಜಿಕ, ಸಾಂಸ್ಕೃತಿಕಹಾಗೂ ಅದರ ಬೇಡಿಕೆಗೆ ಅನುಗುಣವಾಗಿಲ್ಲ. ಇದು ಬ್ರಿಟಿಷರು ತಮಗೆ ಬೇಕಾದ ಅಧಿಕಾರಿಗಳನ್ನು ನಿರ್ಮಿಸಲು ಜಾರಿಗೆ ತಂದ ವ್ಯವಸ್ಥೆಯಾಗಿದೆ. ತೆರಿಗೆದಾರರು ಪಾವತಿಸಿದ ಹಣದಲ್ಲಿ ಸಬ್ಸಿಡಿ ಸಹಿತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ವಿದೇಶಗಳಿಗೆ ಹೊಗುತ್ತಿದ್ದಾರೆ. ಇದರಿಂದ ರಾಷ್ಟ್ರದ ಮಾನವ ಸಂಪತ್ತು ಬೇರೆ ರಾಷ್ಟ್ರಗಳ ಪಾಲಾಗುತ್ತಿದೆ. ಪ್ರಧಾನ ಮಂತ್ರಿ ಮೇಕ್‍ಇನ್ ಇಂಡಿಯಾ ಎಂದು ಹೇಳುತ್ತಾರೆ, ಮಾನವ ಸಂಪತ್ತು ಹೀಗೆ ಬೇರೆ ದೇಶಕ್ಕೆ ಹೋದರೆ ಇದು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ, ‘ವಿಶ್ವವಿದ್ಯಾಲಯಕ್ಕೆ ನೀಡಲಾದ ಅನುದಾನದಲ್ಲಿ ಶೇ 80ರಷ್ಟು ಖರ್ಚು ಮಾಡಲಾಗಿದೆ. 1.40 ಲಕ್ಷ ಚದುರ ಮೀಟರ್‌ ವಿಸ್ತೀರ್ಣದಕಟ್ಟಡಗಳನ್ನು ನಿರ್ಮಿಸಲಾಗಿದೆ. ನಮ್ಮೊಂದಿಗೆ ಆರಂಭಗೊಂಡಿಡ್ಡ 14 ವಿಶ್ವವಿದ್ಯಾಲಯಗಳಲ್ಲಿ ನಮ್ಮ ವಿಶ್ವವಿದ್ಯಾಲಯವು ಎರಡನೇ ಅತೀ ವೇಗಗತಿಯಲ್ಲಿ ಬೇಳೆಯುತ್ತಿರುವ ವಿಶ್ವವಿದ್ಯಾಲಯವಾಗಿದೆ. ಸದ್ಯ ಸುಸಜ್ಜಿತ ಕ್ರೀಡಾಂಗಣ, ಸಭಾಂಗಣ, ನಾಲೇಜ್ ಪ್ಲಾಜಾ ಹಾಗೂ ಶೈಕ್ಷಣಿಕ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ’ ಎಂದರು.

ಸದ್ಯ 22 ವಿಭಾಗಗಳಿದ್ದು ಇತ್ತಿಚೆಗಷ್ಟೇ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಆರು ಹೊಸ ವಿಭಾಗಗಳಿಗೆ ಅನುಮೋದನೆ ನೀಡಿದೆ. ಅವುಗಳನ್ನು ಶೀಘ್ರದಲ್ಲಿಯೆ ಪ್ರಾರಂಭಿಸಲಾಗುವುದು.

ಸಮ ಕುಲಪತಿ ಪ್ರೊ.ಜಿ.ಆರ್. ನಾಯಕ್, ಕುಲಸಚಿವ ಪ್ರೊ. ಮುಸ್ತಾಕ್ ಅಹಮದ್ ಐ ಪಟೇಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT